Breaking News

ಹನಿಟ್ರ್ಯಾಪ್ ಮಾಡುತ್ತಿದ್ದ ಮಹಿಳೆ ಸೇರಿ ಮೂವರು ೆ

ಬೆಂಗಳೂರು: ಹನಿಟ್ರ್ಯಾಪ್ ಮಾಡುತ್ತಿದ್ದ ಮಹಿಳೆ ಸೇರಿ ಮೂವರನ್ನು ಸಂಪಿಗೆಹಳ್ಳಿ ಠಾಣೆಯ ಪೊಲೀಸರು
ಬಂಧಿಸಿದ್ದಾರೆ.ಅಗ್ರಹಾರ ಲೇಔಟ್‌ನ ನಿವಾಸಿ ನಜ್ಮಾ ಕೌಸರ್‌ (30), ಹೆಗಡೆನಗರದ ನಿವಾಸಿಗಳಾದ ಮೊಹ್ಮದ್‌ ಅತೀಕ್‌ (20) ಮತ್ತು ಕರೀಂ ಉಲ್ಲಾ (24) ಬಂಧಿತರು

ಸಾಮಾಜಿಕ ಜಾಲತಾಣದಲ್ಲಿ ಯುವಕರನ್ನು ಪರಿಚಯಿಸಿಕೊಂಡಿದ್ದರು.ಪ್ರಮುಖ ಆರೋಪಿ ನಜ್ಮಾ, ಜಾಲತಾಣಗಳಲ್ಲಿ ಯುವಕರ ಜೊತೆ ಸಲುಗೆ ಬೆಳೆಸಿಕೊಳ್ಳುತ್ತಿದ್ದಳು. ನಂತರ ಅವರ ಮೊಬೈಲ್ ಸಂಖ್ಯೆ ಪಡೆದು, ಸಲುಗೆಯಿಂದ ಮಾತನಾಡಿ, ಮನೆಗೆ ಕರೆಸಿಕೊಂಡು ಹನಿಟ್ರ್ಯಾಪ್‌ ಮಾಡುತ್ತಿದ್ದಳು. ಇದಕ್ಕೆ ಅತೀಕ್‌, ಕರೀಂ ಸಾಥ ನೀಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಬೆಂಗಳೂರಿನ ಯುವಕರನ್ನೇ ಗುರಿಯಾಗಿಸಿಕೊಂಡಿದ್ದ ನಜ್ಮಾ, ನಂತರ ಅವರೊಂದಿಗೆ ಕಷ್ಟ-ಸುಖ ಮಾತನಾಡಿಕೊಂಡು ಅತ್ಮೀಯತೆ ಬೆಳೆಸಿಕೊಳ್ಳುತ್ತಿದ್ದಳು. ಅವರಿಂದ ಹಣ ಪಡೆದು ಹಿಂತಿರುಗಿಸುವ ಮೂಲಕ ವಿಶ್ವಾಸ ಗಳಿಸುತ್ತಿದ್ದಳು. ‘ನಮ್ಮ ಮನೆಯಲ್ಲಿ ಯಾರೂ ಇಲ್ಲ, ನೀವು ಮನೆಗೆ ಬನ್ನಿ’ ಎಂದು ಯುವಕರನ್ನು ಆಹ್ವಾನಿಸುತ್ತಿದ್ದಳು’ ಎಂದು ಮೂಲಗಳು ತಿಳಿಸಿವೆ.

‘ಸಂಚು ತಿಳಿಯದೇ ಮನೆಗೆ ತೆರಳುತ್ತಿದ್ದ ಯುವಕರನ್ನು ಲೈಂಗಿಕವಾಗಿ ಪ್ರಚೋದಿಸಿ ಕೋಣೆಗೆ ಕರೆದೊಯ್ಯುತ್ತಿದ್ದಳು. ಕೋಣೆಯಲ್ಲಿ ಇರುತ್ತಿದ್ದ ಉಳಿದ ಆರೋಪಿಗಳು ಯುವಕರನ್ನು ಬೆದರಿಸಿ, ಹಣ ಸುಲಿಗೆ ಮಾಡುತ್ತಿದ್ದರು. ಹಣ ನೀಡದಿದ್ದರೆ ಅತ್ಯಾಚಾರ ಮಾಡಿದ್ದಾರೆಂದು ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *