Breaking News

ಶಿರಾದಲ್ಲಿ ಜಮೀನು ವಿಚಾರಕ್ಕೆ ಜಗಳ; ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ

ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಗ್ರಾಮದ ಜಮೀನಿನಲ್ಲಿ ಗುರುವಾರ ಜಮೀನು ವಿಚಾರಕ್ಕೆ ಜಗಳ ಪ್ರಾರಂಭವಾಗಿ ಕೊಲೆಯಲ್ಲಿ ಅಂತ್ಯವಾಗಿದೆ.ಕಳ್ಳಂಬೆಳ್ಳ ಗ್ರಾಮದ ಮಧುವನ್ (36) ಕೊಲೆಯಾದವರು.
ತುಮಕೂರು ಸಂತೇಪೇಟೆ ನಿವಾಸಿಗಳಾದ ಮಹೇಶ್, ಸಮೀರ್ ಹಾಗೂ ಕಳ್ಳಂಬೆಳ್ಳ ಗ್ರಾಮದ ಮಧುವನ್ ನಡುವೆ ಜಮೀನಿನ ವಿಚಾರವಾಗಿ ಜಗಳ ಪ್ರಾರಂಭವಾಗಿ ಮಾತಿನ ಚಕಮುಕಿ ನಡೆದಿದೆ.ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಮಧುವನ್ ಮೇಲೆ ಮಹೇಶ್ ಮಚ್ಚಿನಿಂದ ಹಲ್ಲೆ ನಡೆಸಿದ್ದು ಸ್ಥಳದಲ್ಲೇ ಮಧುವನ್ ಮೃತ ಪಟ್ಟಿದ್ದಾನೆ. ಕಳ್ಳಂಬೆಳ್ಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *