Breaking News

ಆಕಸ್ಮಿಕ ಬೆಂಕಿ ಅವಘಡ: ನಾಲ್ಕು ಅಂಗಡಿಗಳು ಭಸ್ಮ

ಬೀದರ್ ತಾಲ್ಲೂಕಿನ ಬೆನಕನಳ್ಳಿಯಲ್ಲಿ ಆಕಸ್ಮಿಕ ಬೆಂಕಿಗೆ ಸೋಮವಾರ ನಾಲ್ಕು ಅಂಗಡಿಗಳು ಆಹುತಿಯಾಗಿವೆ. ಗ್ರಾಮದ ಭವಾನಿ ಮಂದಿರ ಹಿಂಭಾಗದಲ್ಲಿನ ಅಜಯಸಿಂಗ್ ಜಯಸಿಂಗ್ ಚವಾಣ್ ಅವರ ಜನರಲ್ ಸ್ಟೋರ್, ಕಿರಾಣಿ ಅಂಗಡಿ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಐಸ್‍ಕ್ರೀಂ ಆಯಂಡ್ ಜ್ಯೂಸ್ ಸೆಂಟರ್‌ನಲ್ಲಿದ್ದ ಸಾಮಗ್ರಿಗಳು ಸುಟ್ಟು ಹೋಗಿವೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ನಿಯಂತ್ರಣಕ್ಕೆ ತಂದರು. ತಹಶೀಲ್ದಾರ್ ರವೀಂದ್ರ ದಾಮಾ ಹಾಗೂ ಇತರ ಅಧಿಕಾರಿಗಳು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆಂಕಿ ಅವಘಡದಿಂದ ತಮಗೆ ₹30 ಲಕ್ಷದಿಂದ ₹35 ಲಕ್ಷ ನಷ್ಟವಾಗಿದೆ ಎಂದು ಅಜಯಸಿಂಗ್ ಚವಾಣ್ ತಿಳಿಸಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *