ಭಾರತದ ಸಂಗೀತ ಮಾಂತ್ರಿಕ, ಲೆಜೆಂಡ್ ಎಆರ್ ರೆಹಮಾನ್ ಸಂಗೀತ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದ್ಭತ ಕಂಠಸಿರಿಯ ಗಾಯಕ, ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಪ್ರಸಿದ್ಧ ಮ್ಯೂಸಿಕ್ ಕಂಪೋಸರ್ ಇವರು. ಆಗಸ್ಟ್ 16ರಂದು 70ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ ಪಟ್ಟಿ ಘೋಷಣೆಯಾಗಿದ್ದು ಇದರಲ್ಲಿ ರೆಹಮಾನ್ ಹೆಸರು ಕೂಡಾ ಇದೆ.
ಹೌದು ಒಂದಲ್ಲ ಎರಡಲ್ಲ ಬರೋಬ್ಬರಿ 7ನೇ ಸಲ ರೆಹಮಾನ್ ನ್ಯಾಷನಲ್ ಅವಾರ್ಡ್ ಗೆದ್ದಿದ್ದಾರೆ.2022ರಲ್ಲಿ ರಿಲೀಸ್ ಆದ ಸಿನಿಮಾಗಳಿಗೆ ಸಂಬಂಧಿಸಿದಂತೆ ನ್ಯಾಷನಲ್ ಅವಾರ್ಡ್ಗಳನ್ನು ಘೋಷಿಸಲಾಗಿದೆ. ಈ ಒಂದು ವಿಶೇಷ ವಾದ ವಿನ್ನರ್ಸ್ ಲಿಸ್ಟ್ನಲ್ಲಿ ರೆಹಮಾನ್ ಅವರ ಹೆಸರೂ ಇತ್ತು.
ರೆಹಮಾನ್ ಅವರು ಮಣಿರತ್ನಂ ಅವರ ತಮಿಳು ಸಿನಿಮಾ ಪೊನ್ನಿಯಿನ್ ಸೆಲ್ವನ್ ಪಾರ್ಟ್ 1ಗಾಗಿ ಅವಾರ್ಡ್ ಪಡೆದಿದ್ದಾರೆ. ಈ ಮೂವಿ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು.ಈ ಬಾರಿ ನ್ಯಾಷನಲ್ ಅವಾರ್ಡ್ ಸಿಗುವ ಮೂಲಕ ರೆಹಮಾನ್ ಅವರು ಭಾರತದಲ್ಲಿಯೇ 7 ಸಲ ನ್ಯಾಷನಲ್ ಅವಾರ್ಡ್ ಗೆದ್ದಿರುವ ಏಕೈಕ ಸಂಗೀತ ನಿರ್ದೇಶಕ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಇಸೈಗಣಿ ಇಳಯರಾಜ ಅವರು 5 ಬಾರಿ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದಾರೆ. ಕೊನೆಯಾದಗಿ ಅವರು 2015ರಲ್ಲಿ ತಮಿಳು ಸಿನಿಮಾ ತರೈ ತಪಟೈ ಎನ್ನುವ ಸಿನಿಮಾಗೆ ಅವಾರ್ಡ್ ಗೆದ್ದಿದ್ದರು. ಹಿಂದಿಯ ಮ್ಯೂಸಿಕ್ ಡೈರೆಕ್ಟರ್ ವಿಶಾಲ್ ಭಾರಧ್ವಾಜ್ ಅವರು ಈ ಲಿಸ್ಟ್ನಲ್ಲಿ ಮೂರನೇ ಸ್ಥಾನದಲ್ಲಿದ್ದು ಅವರು 4 ನ್ಯಾಷನಲ್ ಅವಾರ್ಡ್ ಪಡೆದಿದ್ದಾರೆ. ಜಾವೇದ್ ಅವರು 3 ನ್ಯಾಷನಲ್ ಅವಾರ್ಡ್ ಗೆದ್ದಿದ್ದು ಅವರು ಲಿಸ್ಟ್ನಲ್ಲಿ ನಾಲ್ಕನೇಯವರಾಗಿದ್ದಾರೆ.
ಮೊದಲ ಸಿನಿಮಾದಲ್ಲಿಯೇ ನ್ಯಾಷನಲ್ ಅವಾರ್ಡ್
ಎಆರ್ ರೆಹಮಾನ್ ಅವರು ಅಧಿಕೃತವಾಗಿ 1992ರಲ್ಲಿ ಮಣಿರತ್ನಂ ಅವರ ರೋಜಾ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಅವರು ಮೊದಲ ಸಿನಿಮಾದ ಮೂಲಕವೇ ರೋಜಾಗಾಗಿ ಮೊದಲ ನ್ಯಾಷನಲ್ ಅವಾರ್ಡ್ ಗಳಿಸಿದರು. 1996ರಲ್ಲಿ ಮಿನ್ಸಾರ ಕನವು ಸಿನಿಮಾಗಾಗಿ 2ನೇ ನ್ಯಾಷನಲ್ ಅವಾರ್ಡ್ ಪಡೆದರು.
2000ದ ವೇಳೆಗೆ ಅವರು ಬೇರೆ ಬೇರೆ ಭಾಷೆಗಳಲ್ಲಿ ಸಂಗೀತ ನಿರ್ದೇಶಿಸಲು ಶುರು ಮಾಡಿದ್ದರು. 2001 ಹಿಂದಿ ಸಿನಿಮಾ ಲಗಾನ್ಗಾಗಿ ಅವರು ಮೂರನೇ ನ್ಯಾಷನಲ್ ಅವಾರ್ಡ್ ಗಳಿಸಿದರು. 2002ರಲ್ಲಿ ಮಣಿರತ್ನಂ ಅವರ ಕಣ್ಣತ್ತಿಲ್ ಮುತ್ತಮಿಟ್ಟಲ್ ಸಿನಿಮಾಗಾಗಿ ಮತ್ತೊಂದು ನ್ಯಾಷನಲ್ ಅವಾರ್ಡ್ ಪಡೆದರು. 2002ರ ನಂತರ ಅವರು ಹಲವಾರು ಪ್ರಮುಖ ಅವಾರ್ಡ್ಗಳನ್ನು ಪಡೆದರು. ಇದರಲ್ಲಿ ಗೋಲ್ಡನ್ ಗ್ಲೋಬ್ಸ್, ಕ್ರಿಟಿಕ್ ಚಾಯ್ಸ್ ಮೂವಿ ಅವಾರ್ಡ್ಸ್ ಹಾಗೂ ಆಸ್ಕರ್ ಕೂಡಾ ಸೇರಿದೆ. ಸ್ಲಮ್ ಡಾಗ್ ಮಿಲಿಯನೇರ್ಗಾಗಿ ಅವರು ಆಸ್ಕರ್ ಪಡೆದರು.
ದೇಶ ಹಾಗೂ ವಿಶ್ವಾದ್ಯಂತ ಸಂಗೀತ ಸಾಮ್ರಾಜ್ಯದಲ್ಲಿ ದೊಡ್ಡ ಹೆಸರು ಗಳಿಸಿರೂ ಕೂಡಾ ಇದಾಗಿ 15 ವರ್ಷಗಳ ನಂತರ ರೆಹಮಾನ್ ಮಣಿರತ್ನಂ ಅವರ ಕಾಟ್ರು ವೆಲಿಯಿದೈ ಸಿನಿಮಾಗಾಗಿ ಹಾಗೂ ಶ್ರೀದೇವಿ ಅಭಿನಯದ ಹಿಂದಿಯ ಮಾಮ್ ಸಿನಿಮಾಗಾಗಿ ನ್ಯಾಷನಲ್ ಅವಾರ್ಡ್ ಗಳಿಸಿದರು. ಆ ನಂತರ ಅವರು ಪೊನ್ನಿಯಿನಗ ಸೆಲ್ವನ್ 1ಗಾಗಿ 7ನೇ ನ್ಯಾಷನಲ್ ಅವಾರ್ಡ್ ಪಡೆಯುತ್ತಿದ್ದು ಅಕ್ಟೋಬರ್ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಮೂಲಕ ಅವರು 7 ನ್ಯಾಷನಲ್ ಅವಾರ್ಡ್ ಗೆದ್ದ ಭಾರತದ ಏಕೈಕ ಸಂಗೀತ ನಿರ್ದೇಶಕರಾಗಿ ಗುರುತಿಸಲ್ಪಟ್ಟಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

