ಬೆಂಗಳೂರು: ಟಿಪ್ಪರ್ ಚಾಲಕನ ನಿರ್ಲಕ್ಷ್ಯದಿಂದ ಇಬ್ಬರು ಬಲಿಯಾಗಿರುವ ಘಟನೆ ಮೈಸೂರು ರಸ್ತೆ ಗುಡ್ಡದಹಳ್ಳಿ ಬಳಿ ನಡೆದಿದೆ. ಅಪಘಾತದ ಪರಿಣಾಮ ಮಗುವಿನ ದೇಹ ಛಿದ್ರವಾಗಿದೆ.
ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಟಿಪ್ಪರ್ ಹರಿದಿದ್ದು, ರಹೀಮ್ 14 ವರ್ಷದವನಾಗಿದ್ದು, ಶಾಹೀ ಬ್ರಾಜಾ 21 ವರ್ಷದ ಯುವಕ ಎಂದು ಗುರುತಿಸಲಾಗಿದೆ.
ಇವರಿಬ್ಬರು ಸಹೋದರರಾಗಿದ್ದು, ಇವರು ಉತ್ತರ ಪ್ರದೇಶದ ಬನಾರಸ್ ಮೂಲದವರಾಗಿದ್ದಾರೆ.
ಚಾಲಕನ ನಿರ್ಲಕ್ಷತನವೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಈ ಅಪಘಾತದ ವೇಳೆ ಟಿಪ್ಪರ್ ಐದಾರು ವಾಹನಗಳಿಗೆ ಗುದ್ದಿದೆ. ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

