Breaking News

ಬಿಯರ್ ಕ್ಯಾನ್ ಒಳಗೆ ಸಿಲುಕಿಕೊಂಡ ಹಾವು

ತೆಲಂಗಾಣ: ಜಗತ್ಯಾಲ್ ಜಿಲ್ಲೆಯಲ್ಲಿ ಹಾವೊಂದು ಬಿಯರ್ ಕ್ಯಾನ್‌ನಲ್ಲಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಜಗಿತ್ಯಾಲ್ ನ ನಲ್ಲಗೊಂಡ ಪ್ರದೇಶದಲ್ಲಿರುವ ರೈತರೊಬ್ಬರ ಜಮೀನಿನಲ್ಲಿ ಈ ಘಟನೆ ನಡೆದಿದೆ.

ಬಿಯರ್ ಕ್ಯಾನ್ ಒಳಗೆ ತಲೆ ಸಿಕ್ಕಿಸಿಕೊಂಡ ಹಾವು, ಸುಮಾರು ಮೂರು ಗಂಟೆಗಳ ಹೋರಾಟದ ನಂತರ, ಮುಳ್ಳಿನ ಪೊದೆಯ ಒಳಗೆ ಹೋಗಿ ಬಿಯ‌ರ್ ಕ್ಯಾನ್‌ನಿಂದ ತನ್ನನ್ನು ಬಿಡಿಸಿಕೊಂಡು ನಿಟ್ಟುಸಿರು ಬಿಟ್ಟಿದೆ.

ಈ ಹಿಂದೆ ಇದೇ ರೀತಿಯ ಘಟನೆಯಲ್ಲಿ ಒಡಿಶಾದ ಪುರಿ ಜಿಲ್ಲೆಯಲ್ಲಿ ಮತ್ತೊಂದು ಹಾವು ಖಾಲಿ ಡಬ್ಬದಲ್ಲಿ ಸಿಲುಕಿಕೊಂಡಿತ್ತು. ಸ್ಥಳೀಯರು ಉರಗ ಸಂರಕ್ಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ ನಂತರ ಹಾವನ್ನು ರಕ್ಷಿಸಲಾಗಿತ್ತು.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *