Breaking News

ಮೀನು ಹಿಡಿಯಲು ಹೋಗಿ ಶವವಾದ ಬಾಲಕ

ಬೆಳಗಾವಿ; ದೂಧಗಂಗಾ ನದಿಗೆ ಮೀನು ಹಿಡಿಯಲು ಹೋದ ಬಾಲಕ ಸಂಗ್ರಾಮ ಪವಾರ (೧೪) ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮೃತ ಸಂಗ್ರಾಮ ಪವಾರ ಚಿಕ್ಕೋಡಿ ತಾಲೂಕಿನ ಚಾಂದಶಿರದವಾಡ ಗ್ರಾಮದವನು. ದೂಧಗಂಗಾ ಮಳೆಯಿಂದಾಗಿ ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಲಕನ ಶವ ಪತ್ತೆ ಮಾಡಿದ್ದಾರೆ. ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About admin

Check Also

ರೌಡಿಶೀಟರ್ ಹ್ಯಾರಿಸ್ ಪಠಾಣ್ ಗೂಂಡಾ ಕಾಯ್ದೆ ಅಡಿ ಬಂಧನ…

ಹ್ಯಾರಿಸ್ ಪಠಾಣ್ ಹಲವು ವರ್ಷಗಳಿಂದ: ಕ್ರಿಕೆಟ್ ಬೆಟ್ಟಿಂಗ್ ಬಡ್ಡಿ ವ್ಯವಹಾರ ಅಪಹರಣ ಕೊಲೆ ಪ್ರಕರಣಗಳು.. ಒಟ್ಟು 11 ಪ್ರಕರಣಗಳು ವಿವಿಧ …

Leave a Reply

Your email address will not be published. Required fields are marked *