ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಅಡಿಯಲ್ಲಿ ಹಳೆ ಬಸ್ ನಿಲ್ದಾಣವನ್ನು ನವಿಕರಣದ ಮಾಡುತ್ತಿದ್ದು, ಆಟೋ ನಿಲ್ದಾಣಕ್ಕೂ ವ್ಯವಸ್ಥೆ ಮಾಡಿಕೊಡಿ ಎಂದು ಶಾಸಕ ಮಹೇಶ ಟೆಂಗಿನಕಾಯಿ, ಸ್ಮಾರ್ಟ್ ಸಿಟಿ ಎಂಡಿ ರುದ್ರೇಶ ಗೌಳಿ ಅವರಿಗೆ ಮನವಿ ಮಾಡಿಕೊಂಡರು.
ಹಳೇ ಬಸ್ ನಿಲ್ದಾಣ ಆರಂಭವಾದಾಗಿಂದ ಅಲ್ಲಿ ಆಟೋ ಸ್ಟ್ಯಾಂಡ್ ಇತ್ತು. ಈಗ ನವಿಕರಣ ಆಗುತ್ತಿದ್ದು ಆಟೋ ನಿಲ್ದಾಣಕ್ಕೂ ಸೂಕ್ತವಾದ ಸ್ಥಳ ನಿರ್ಮಿಸಿ ಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ದೆ ಹುಬ್ಬಳ್ಳಿಗೆ ಬೇರೆ ಜಿಲ್ಲೆಗಳಿಂದ, ರಾಜ್ಯಗಳಿಂದ ಜನರು ಬರುತ್ತಾರೆ. ಹಳೆ ಬಸ್ ನಿಲ್ದಾಣಕ್ಕೆ ಬಂದಿಳಿದ ಕೂಡಲೆ ಅವರು ನೋಡುವುದೇ ಆಟೋ. ಅದಕ್ಕಾಗಿ ಹಳೆ ಬಸ್ ನಿಲ್ದಾಣ ಮುಂದೆ ಉತ್ತಮವಾದ ಆಟೋ ನಿಲ್ದಾಣವನ್ನು ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

