Breaking News

ಹೆಸರು ಖರೀದಿ ಕೇಂದ್ರ ಪ್ರಾರಂಭಿಸುವಂತೆ ಮನವಿ ಸಲ್ಲಿಕೆ

ನವಲಗುಂದ: ಹೆಸರು ಖರೀದಿ ಕೇಂದ್ರ ಪ್ರಾರಂಭಿಸುವಂತೆ ಒತ್ತಾಯಿಸಿ ರೈತ ಮುಖಂಡ ದೇವರಾಜ ದಾಡಿಬಾವಿ ನೇತೃತ್ವದಲ್ಲಿ ನವಲಗುಂದ ರೈತರು ತಹಶೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ದೇವರಾಜ ದಾಡಿಬಾವಿ, ಸರ್ಕಾರ ತಕ್ಷಣ ಹೆಸರು ಖರೀದಿ ಕೇಂದ್ರವನ್ನ ಪ್ರಾರಂಭಿಸಿ ನಿಗದಿ ಪಡಿಸಿದ ದರಕ್ಕೆ ಹೆಸರುಬೆಳೆಯನ್ನ ಖರೀದಿಸಬೇಕು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳಿಂದ ಕೂಡಿದ ಖರೀದಿ ಕೇಂದ್ರದ ನಿಯಮಗಳನ್ನು ಸಡಿಲಗೊಳಿಸಿ ಖರೀದಿ ಕೇಂದ್ರದ ನಿಯಮ ಸರಳಿಕರಿಸಿ ಬೇಗ ಬೇಗ ತಾಲೂಕಿನ ರೈತರ ಹೆಸರನ್ನು ಖರೀದಿ ಮಾಡಿ ಸಂಕಷ್ಟದಿಂದ ಪಾರು ಮಾಡಬೇಕು ಸ್ಥಳೀಯ ವ್ಯಾಪಾರಸ್ಥರು ಕಡಿಮೆ ದರದಲ್ಲಿ ಹೆಸರನ್ನ ಖರೀದಿ ಮಾಡುತ್ತಿದ್ದು ಬೆಳೆಗೆ ಮಾಡಿದ ಖರ್ಚು ಬರುತ್ತಿಲ್ಲ ಎಂದು ರೈತರು ತಮ್ಮ ಕಳವಳ ವ್ಯಕ್ತಪಡಿಸಿದರು.

ಈ ವೇಳೆ ಪ್ರಕಾಶ ಅಂಗಡಿ, ಶ್ರೀಶೈಲ ಮೂಲಿಮನಿ, ಶಶಿಧರ ತೆಂಗಿನಕಾಯಿ, ಮಲ್ಲಿಕಾರ್ಜುನ ಸಂಗನಗೌಡ, ಈರಣ್ಣ ಹಸಬಿ, ಮಂಜುನಾಥ್ ಗಣಿ, ಮಂಜುನಾಥ ಹಡಪದ, ವೀರಪ್ಪ ಬೆಂಡಿಗೇರಿ, ಮಲ್ಲಿಕಾರ್ಜುನ ಹುಲಿ, ಬಸವರಾಜ ಮೇಟಿ, ಪವನ ಪಾಟೀಲ, ಕೃಷ್ಣಾ ಭೋವಿ, ರಾಮನಗೌಡ ಸಂಕಗೌಡ್ರು, ಬಸವರಾಜ ಉಳ್ಳಾಗಡ್ಡಿ ಇದ್ದರು.

Share News

About Shaikh BigTv

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *