ನವಲಗುಂದ: ಆಧುನಿಕ ತಂತ್ರಜ್ಞಾನದಿಂದಾಗಿ ನಾನಾ ರೀತಿಯ ಜಂಗಮ ವಾಣಿಗಳು ವಿಭಿನ್ನ ಛಾಯಾಚಿತ್ರಗಳನ್ನು ಭಿತ್ತರಿಸುವುದರಿಂದ ಛಾಯಾಗ್ರಾಹಕರ ಉದ್ಯಮಗಳ ಮೇಲೆ ಹೊಡೆತ ಬಿದ್ದಿದ್ದೆ. ಛಾಯಾಗ್ರಾಹಕರ ನೆರವಿಗಾಗಿ ಸರಕಾರ ಅಕಾಡೆಮಿ ಸ್ಥಾಪಿಸಿ, ಉದ್ಯಮಕ್ಕೆ ತೆರಿಗೆ ವಿನಾಯಿತಿ ನೀಡಿದರೆ ಅನುಕೂಲವಾಗುತ್ತದೆ ಎಂದು ನವಲಗುಂದ ತಾಲೂಕ ಛಾಯಾಗ್ರಾಹಕರ ಅಧ್ಯಕ್ಷರಾದ ಸಂಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿರುವ ಸುಧಾ ಫೋಟೋ ಸ್ಟುಡಿಯೋದಲ್ಲಿ ಹಮ್ಮಿಕೊಂಡ 185ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯಾದ್ಯಂತ ಲಕ್ಷಕ್ಕೂ ಅಧಿಕ ಛಾಯಾಗ್ರಾಹಕರು ಛಾಯಾಗ್ರಹಣವನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಇದನ್ನೇ ನೆಚ್ಚಿಕೊಂಡವರಿಗೆ ದಶಕಗಳಿಂದ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗದೆ ಹಗಲು ರಾತ್ರಿ ವೇಳೆ ಸೂಕ್ತ ರಕ್ಷಣೆ ಇಲ್ಲದೆ ಸಮಸ್ಯೆಗಳಿಗೆ ಸಿಲುಕಿದ್ದಾರೆ ಎಂದರು.
ಈ ವೇಳೆ ಗೌರವಾಧ್ಯಕ್ಷ ಸುರೇಶ ಭಾಂಡಗೆ, ಉಪಾಧ್ಯಕ್ಷ ಸಿದ್ದು ಬಸಾಪುರ, ಚೆನ್ನಪ್ಪ ಪವಾರ, ಶಂಭು ಬೀರುಳ್ಳಿ, ಸಂಗಮೇಶ ದೊಡ್ಡಮನಿ, ಮೌನೇಶ ಪತ್ತಾರ, ಬಸವರಾಜ ಭೋವಿ, ರಾಕೇಶ್ ಕರಿಗೌಡ್ರ, ಜಗದೀಶ ಸುಳ್ಳದ, ಮಂಜು ಚಲವಾದಿ ಸೇರಿದಂತೆ ಛಾಯಾಗ್ರಾಹಕರು ಇದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news

