Breaking News

ಕಾರಣವಿಲ್ಲದೇ ಪತ್ರಕರ್ತನ ಮೇಲೆ ದರ್ಪ ತೋರಿದ ಖಾಕಿಪಡೆ

ಹುಬ್ಬಳ್ಳಿ: ಕೆಲ ಯೂಟ್ಯೂಬ್ ಚಾನೆಲ್,ಪತ್ರಿಕೆಗಳಲ್ಲಿ ಕೆಲಸ ಮಾಡ್ತಿದ್ದ ಭರತ್ ತುಳಜಸಾ ಕಾಟ್ವೆ ಮೂಲತಃ ಹುಬ್ಬಳ್ಳಿಯ ಗವಿ ಓಣಿಯ ನಿವಾಸಿ. ವೃತ್ತಿಯಲ್ಲಿ ಭರತ್ ಹವ್ಯಾಸಿ ಪತ್ರಕರ್ತನಾಗಿದ್ದು, ಭರತ್ ಮೇಲೆ ಹುಬ್ಬಳ್ಳಿ ಪೊಲೀಸರು ಅಕ್ಷರಶಃ ಮೃಗದ ತರಹ ವರ್ತನೆ ಮಾಡಿದ್ದಾರೆ.

ನಿನ್ನೆ ಭರತ್ ನನ್ನ‌ ಮನೆಯಲ್ಲಿ ಊಟ ಮಾಡೋವಾಗ ಏಕಾಏಕಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ.ಮನೆಯಿಂದ ಐದು ಜನ ಪೊಲೀಸರು ಕರೆದುಕೊಂಡು ಹೋಗಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ.ಇತನ ಮೇಲೆ ಯಾವುದೇ ದೂರು ದಾಖಲಾಗಿರಲಿಲ್ಲ‌.ಆದರೂ ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆಯ ASI ಪತ್ತಾರ ಹಾಗೂ ಸಿಬ್ಬಂದಿಗಳು ಇತನನ್ನ ಮನಸೋ ಇಚ್ಛೆ ಥಳಿಸಿದ್ದಾರೆ.ಅದ್ಯಾವ ಮಟ್ಟಿಗೆ ಅಂದ್ರೆ ಹವ್ಯಾಸಿ ಪತ್ರಕರ್ತನ ಬೆನ್ನು ತಲೆಗೆ ಗಾಯಗಳಾಗಿವೆ.ಯಾಕೆ ಅಂತಾ ಕೇಳಿದ್ರೆ ತಡ ಪೊಲೀಸರು ಬಡಿಗೆಯಿಂದ ಸಿಕ್ಕ ಸಿಕ್ಕಲ್ಲಿ ಹೊಡೆದಿದ್ದಾರೆ.ಭರತ್ ಮೇಲೆ ಕಮರಿ‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

ಆದ್ರೂ ಕಮರಿಪೇಟೆ ಪೊಲೀಸರು ಭರತ್ ಮನೆಗೆ ಹೋಗಿದ್ರು.ಏಕಾಏಕಿ ಮನೆಯಿಂದ ಹೊರಗೆ ತಂದು ಆತನನ್ನ ಥಳಿಸಿದ್ದಾರೆ.ಇದಲ್ಲದೆ ನಿನ್ನೆ ರಾತ್ರಿ ಕೂಡಾ ಕೆಲ ಗುಂಡಾಗಳಿಂದ ಭರತ್ ಗೆ ಪೊಲೀಸರು ಧಮ್ಕಿ ಹಾಕಿಸಿದ್ದಾರಂತೆ.ಕುಡಿದ ಅಮಲಿನಲ್ಲಿ ಪೊಲೀಸರು ಭರತ್ ಮೇಲೆ ದರ್ಪ ತೋರಿದ್ದಾರಂತೆ‌.ಪೊಲೀಸರು ದರ್ಪ ಮೆರೆದ ವಿಷಯ ಗೊತ್ತಾಗುತ್ತಲೇ ಹುಧಾ ಪೊಲೀಸ್ ಕಮೀಷನರ್ ASI ಪತ್ತಾರ್ ರನ್ನ ಅಮಾನತ್ತು ಮಾಡಿದ್ದಾರೆ.ಹಲ್ಲೆ ಮಾಡಿದ ಉಳಿದ ಸಿಬ್ಬಂದಿಯ‌ ತನಿಖೆಗೆ ಆದೇಶ ಮಾಡಿದ್ದಾರೆ.

Share News

About Shaikh BigTv

Check Also

ರಾಜಕೀಯ ಮರೆತು ಮಾನವೀಯತೆ ಮೆರೆದ ಕ್ಷಣ: ಚೆನ್ನಮ್ಮ ಅಂತಿಮ ದರ್ಶನದ ವೇಳೆ ದೇವೇಗೌಡರ ಕೈಹಿಡಿದು ಸಿದ್ದರಾಮಯ್ಯ ಸಾಂತ್ವನ

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎಂಬುದಕ್ಕೆ ಬೆಂಗಳೂರಿನಲ್ಲಿ ನಡೆದ ಘಟನೆ ಸಾಕ್ಷಿಯಾಯಿತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ …

Leave a Reply

Your email address will not be published. Required fields are marked *