ನವದೆಹಲಿ: ‘ಕಾಶ್ಮೀರ್ ಫೈಲ್ಸ್ ’ಸಿನಿಮಾವನ್ನು ನೋಡಿ, ಅದರಲ್ಲಿ ಏನಿದೆ ಎಂಬುದನ್ನು ವೀಕ್ಷಿಸಿ ಸತ್ಯ ಪರೀಕ್ಷಿಸುವ ಬದಲು ಅದರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ವಾಕ್ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತದೆ ಎಂದು ಪ್ರತಿಪಾದಿಸುವ ಕೆಲವರು 5-6 ದಿನಗಳಿಂದ ವ್ಯಗ್ರರಾಗಿದ್ದಾರೆ. ಬಹಳ ಕಾಲದಿಂದ ಉದ್ದೇಶ ಪೂರ್ವಕವಾಗಿ ಮುಚ್ಚಿಟ ಸತ್ಯ ಈಗ ಬಹಿರಂಗವಾಗಿರುವುದಕ್ಕೆ ಕೆಲವರಿಗೆ ಅಸಮಾಧಾನ ಇದೆ ಎಂದೂ ಮೋದಿ ಛೇಡಿಸಿದ್ದಾರೆ. …
Read More »ಕುಟುಂಬ ಕಲಹ : ಪಿಡಿಓ ಪತ್ನಿ ಆತ್ಮಹತ್ಯೆಗೆ ಶರಣು
ಚಾಮರಾಜನಗರ:ಕೌಟುಂಬಿಕ ಕಲಹಕ್ಕೆ ಬೇಸತ್ತ ಪಿಡಿಓ ಪತ್ನಿ ನೇಣಿಗೆ ಶರಣಾದ ಘಟನೆ ನಡೆದಿದೆ. ಹನೂರು ತಾಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ಪಿಡಿಒ ಆನಂದ್ ಕಾಂಬ್ಳೆ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಆನಂದ್ ಕಾಂಬ್ಳೆ ಜತೆ 3 ವರ್ಷದ ಹಿಂದೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೀರ್ಥ ಗ್ರಾಮದ ದಿವ್ಯಾಗೆ ಮದುವೆ ಆಗಿತ್ತು. ದಂಪತಿ ಕೊಳ್ಳೇಗಾಲದಲ್ಲಿ ವಾಸವಿದ್ದರು. ದಂಪತಿಗೆ 8 ತಿಂಗಳ ಹೆಣ್ಣು ಮಗು ಇದೆ. ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ …
Read More »ಹಿಜಾಬ್ ತೀರ್ಪು : ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್
ಭಟ್ಕಳ: ಹಿಜಾಬ್ ಧಾರಣೆ ಬಗ್ಗೆ ಪಟ್ಟಣದಲ್ಲಿ ಯಾವುದೇ ಶಾಲೆ ಅಥವಾ ಕಾಲೇಜಿನಲ್ಲಿ, ಅಹಿತಕರ ಘಟನೆ ನಡೆದಿಲ್ಲ.ಆದರೂ ಹಿಜಾಬ್ ಮುಸ್ಲಿಮರ ಮೂಲಭೂತ ಹಕ್ಕು. ಅದಕ್ಕೆ ಅವಕಾಶ ನೀಡುವಂತೆ ತಂಝೀಂ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳು ಮನವಿ ಸಲ್ಲಿಸಿದ್ದವು. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧಾರಣೆಗೆ ನಿರ್ಬಂಧ ವಿಧಿಸಿ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದ ಬಳಿಕ ಪಟ್ಟಣದಲ್ಲಿ ಮುಸ್ಲಿಂ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚಿದರು. ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ಮುಸ್ಲಿಮರು ಮಧ್ಯಾಹ್ನ …
Read More »ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪು ಅತ್ಯಂತ ದುರದೃಷ್ಟಕರ : ಫರ್ಝಾನಾ ಮುಹಮ್ಮದ್
ಮಂಗಳೂರು : ಹಿಜಾಬ್ ಕುರಿತಂತೆ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪು ಅತ್ಯಂತ ದುರದೃಷ್ಟಕರ ಮತ್ತು ಮಹಿಳೆಯರ ಶಿಕ್ಷಣದ ಮೇಲೆ ದೂರಗಾಮಿ ಪರಿಣಾಮ ಬೀರಲಿದೆ ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ಕರ್ನಾಟಕ ಇದರ ರಾಜ್ಯಾಧ್ಯಕ್ಷೆ ಫರ್ಝಾನಾ ಮುಹಮ್ಮದ್ ತಿಳಿಸಿದ್ದಾರೆ. ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘಪರಿವಾರ ಪ್ರೇರಿತ ಸಮಸ್ಯೆಯನ್ನು ಸಾಂವಿಧಾನಿಕ ನೆಲೆಗಟ್ಟಿನಲ್ಲಿ ಬಗೆಹರಿಸಬೇಕಿದ್ದ ಸರಕಾರವು ದ್ವೇಷ ಭಾವನೆಯಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವೆಂದು ಆದೇಶ ಹೊರಡಿಸಿತ್ತು. ವಿದ್ಯಾರ್ಥಿನಿಯರ ಶೈಕ್ಷಣಿಕ ಹಿತವನ್ನು ಕಡೆಗಣಿಸಿ …
Read More »ಹೈಕೋರ್ಟ್ ತೀರ್ಪುನ್ನು ಎಲ್ಲರೂ ಸ್ವಾಗತಿಸಬೇಕು : ಸಿದ್ದರಾಮಯ್ಯ
ಬೆಂಗಳೂರು : ಶಾಲೆಗೆ ಕೇಸರಿ ಶಾಲು, ಹಿಜಾಬ್ ಆಗಲಿ ಯಾವುದೂ ಧರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಈ ಮೂಲಕ ಸರ್ಕಾರ ಕಡ್ಡಾಯಗೊಳಿಸಿದ್ದ ಸರ್ಕಾರದ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದೆ. ಇನ್ನು ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಹೈಕೋರ್ಟ್ ತೀರ್ಪನ್ನು ಸ್ವಾಗತ ಮಾಡಿದ್ದಾರೆ. ತೀರ್ಪಿನ ಬಗ್ಗೆ ವ್ಯಾಖ್ಯಾನ ಮಾಡಲ್ಲ. ಹೈಕೋರ್ಟ್ ತೀರ್ಪುನ್ನು ಎಲ್ಲರೂ ಸ್ವಾಗತಿಸಬೇಕ ಎಂದಿದ್ದಾರೆ.
Read More »ಹಿಜಾಬ್ ವಿವಾದ ಕುರಿತು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗುವುದು : ಶತಭಿಷ ಶಿವಣ್ಣ
ಬೆಂಗಳೂರು: ಹಿಜಾಬ್ ಕುರಿತ ಶೀಘ್ರದಲ್ಲಿಯೇ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗುವುದು. ಹೈಕೋರ್ಟ್ ತೀರ್ಪಿನ ಪ್ರತಿ ಸಿಕ್ಕ ಬಳಿಕ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸುತ್ತೇವೆ ಎಂದು ಅರ್ಜಿದಾರರ ಪರ ವಕೀಲ ಶತಭಿಷ ಶಿವಣ್ಣ ತಿಳಿಸಿದ್ದಾರೆ. ಹಿಜಾಬ್ ವಿಚಾರದಲ್ಲಿ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಹಿಜಾಬ್ ಗೆ ಅನುಮತಿ ಕೋರಿದ್ದ ಅರ್ಜಿ ವಜಾಗೊಳಿಸಿದೆ. ಕೋರ್ಟ್ ತೀರ್ಪಿನ ಪ್ರತಿ ಸಿಕ್ಕಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Read More »ಹಿಜಾಬ್ ಕುರಿತು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ : ಅಶ್ಪಾಕ್ ಕುಮಟಾಕರ
ಹುಬ್ಬಳ್ಳಿ : ಹಿಜಾಬ್ ಕುರಿತಂತೆ ಹೈಕೋರ್ಟ್ ತೀರ್ಪಿಗೆ ನಮ್ಮ ವಿರೋಧವಿದೆ ನಾವು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಅಶ್ಪಾಕ್ ಕುಮಟಾಕರ ಹೇಳಿದರು ಮಾದ್ಯಮ ವರದಿಗಾರರೊಂದಿಗೆ ಮಾತನಾಡಿದ ಅವರುಹೈಕೋರ್ಟ್ ತೀರ್ಪು ಅದನ್ನು ನಾವು ಒಪ್ಪೋದಿಲ್ಲ ಹೈಕೋರ್ಟ್ ತೀರ್ಪಿನ ವಿರುದ್ಧವಾಗಿ ನಾವು ಸುಪ್ರೀಂಕೋರ್ಟ್ ಗೆ ಹೋಗಿ ಅರ್ಜಿಯನ್ನು ತಿಳಿಸುತ್ತೇವೆ ಸುಪ್ರೀಂಕೋರ್ಟ್ ಆದೇಶ ಬರುವವರೆಗೂ ನಾವು ಕಾದು ನೋಡುತ್ತೇವೆ ನಾವು ಕಾಲೇಜಿಗೆ ಶಾಲೆಗೆ ಹೋಗುವುದಿಲ್ಲ ಹಿಜಾಬ್ ಧರಿಸಿ ಕಾಲೇಜು ಶಾಲೆಗೆ ಹೋಗುತ್ತೇವೆ ಎಂದರು.
Read More »ಆಯುಕ್ತರ ಹೊಡೆತಕ್ಕೆ ಗಡ ಗಡ ಅಳಗ್ಯಾಡಿದ ಕಸಬಾ ಪೊಲೀಸ್ ಠಾಣೆ big tv news big impact
ಹುಬ್ಬಳ್ಳಿ : ವಾಣಿಜ್ಯ ನಗರದಲ್ಲಿ ಕಳ್ಳ ದಂಧೆಗೆ ಎನ್ನು ಕಮ್ಮಿ ಇಲ್ಲಾ. ಆದ್ರೆ ಪೋಲಿಸ್ ರು ಇಂತಹ ಕೆಲಸದಲ್ಲಿ ತೊಡಗಿರುವುದು ವಿಪರ್ಯಾಸ. ಇಸ್ಪೇಟ್ ಆಡುತ್ತಿದ್ದ ಮಾಹಿತಿ ಇದ್ದರು ಆ ಜನರನ್ನು ಪೋಲಿಸ್ ರು ಬಂಧಿಸಿಲ್ಲಾ. ಎಂಬ ಸುದ್ದಿಯನ್ನು ನಿನ್ನೆ ದಿನ ಬಿತ್ತರಿಸಿತ್ತು ಸುದ್ದಿಯನ್ನು ತಿಳಿದ ತಕ್ಷಣ ಠಾಣೆ ಸಿಬ್ಬಂದಿಗಳು ಇವತ್ತು ಅವರ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ.. ಮಾ. 1 ರಿಂದ ಇವತ್ತು ದಿನಗಳು ಕಳೆದರು ಪೋಲಿಸ್ ರು …
Read More »ಹಿಜಾಬ್ ತೀರ್ಪು : ಶಾಲಾ-ಕಾಲೇಜುಗಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಬೇಕು
ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ ಪ್ರಕರಣ ಸಂಬಂಧ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಜಾಬ್ ಧರಿಸುವುದು ಇಸ್ಲಾಂ ಅಗತ್ಯ ಧಾರ್ಮಿಕ ಆಚರಣೆಯಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನೂ ವಜಾ ಮಾಡಲಾಗಿದೆ. ಶಾಲಾ-ಕಾಲೇಜುಗಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಬೇಕು. ಸರ್ಕಾರದ ವಸ್ತ್ರ ಸಂಹಿತೆ ನೀತಿಯನ್ನು ಪ್ರಶ್ನಿಸುವಂತಿಲ್ಲ ಎಂದು ಹೈಕೋರ್ಟ್ ಪೂರ್ಣ ಪೀಠ ಮಹತ್ವದ ತೀರ್ಪು ಪ್ರಕಟಿಸಿದೆ. ಶಾಲಾ-ಕಾಲೇಜುಗಳ ವಸ್ತ್ರ ಸಂಹಿತೆಯನ್ನು ವಿದ್ಯಾರ್ಥಿಗಳು ಪ್ರಶ್ನಿಸುವಂತಿಲ್ಲ. ಸರ್ಕಾರದ ಸಮವಸ್ತ್ರ …
Read More »ಮಾ.16 ರವರೆಗೆ ಮದ್ಯ ಮಾರಾಟ ನಿಷೇಧ : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ದಾವಣಗೆರೆ : ನಗರದಲ್ಲಿ ನಗರ ದೇವತೆ ಶ್ರೀ ದುಗಾರ್ಂಬಿಕಾ ದೇವಿಯ ಜಾತ್ರೆ ಹಾಗೂ ಶ್ರೀ ಚೌಡೇಶ್ವರಿ ಜಾತ್ರೆ ನಿಮಿತ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮದ್ಯ ಮಾರಾಟ ನಿಷೇಧಾಜ್ಞೆಯನ್ನು ಹೊರಡಿಸಲಾಗಿದೆ ಎಂದುಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಆದೇಶ ಹೊರಡಿಸಿದ್ದಾರೆ. ಮಾ.15 ರ ಬೆಳಿಗ್ಗೆ 06 ಗಂಟೆಯಿಂದ ಮಾ.16 ರ ಮಧ್ಯರಾತ್ರಿ 12 ಗಂಟೆಯವರೆಗೆ ಜಾರಿಗೊಳಿಸಿದೆ.ಜಿಲ್ಲೆಯಲ್ಲಿ ಮಾ.13 ರಿಂದ ಮಾ.22 …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





