Breaking News

admin

ಯುವಕ , ಅಪ್ರಾಪ್ತ ಬಾಲಕಿ ನೇಣಿಗೆ ಶರಣು

ಶ್ರೀನಿವಾಸಪುರ :ಯುವಕ ಹಾಗೂ ಅಪ್ರಾಪ್ತ ಬಾಲಕಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ‌ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಯಲವಳ್ಳಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಗಂಗಾಧರ್ ಹಾಗೂ ನಿಕಿತಾ ಆತ್ಮಹತ್ಯೆಗೆ ಶರಣಾದವರು,ಆತ್ಮಹತ್ಯೆಗೆ ನಿಖರ ಮಾಹಿತಿ ಇನ್ನು ತಿಳಿದು ಬಂದಿಲ್ಲ,ಇಬ್ಬರು ಶ್ರೀನಿವಾಸಪುರ ಪಟ್ಟಣದ ಜಗಜೀವನ ಪಾಳ್ಯ ದವರೆಂದು ತಿಳಿದುಬಂದಿದೆ, ನಿಕಿತಾ 10ನೇ ತರಗತಿ ವಿದ್ಯಾರ್ಥಿ ಶಾಲಾ ಸಮವಸ್ತ್ರದಲ್ಲಿ ನೇಣಿಗೆ ಶರಣಾಗಿದ್ದಾಳೆ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರ ಭೇಟಿ ನೀಡಿ …

Read More »

ಮಾ.12 ರಂದು ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯಗೆ ಸಿಎಂ ಚಾಲನೆ

ಚಿಕ್ಕಬಳ್ಳಾಪುರ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯ’ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಹೋಬಳಿಯ ಪೋಶೆಟ್ಟಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಂಗಿರ್ಲಹಳ್ಳಿ ಗ್ರಾಮದಿಂದ ಮಾರ್ಚ್ 12 ರಂದು ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ. ಗುಂಗಿರ್ಲಹಳ್ಳಿ (ಮಜರೆ) ಗ್ರಾಮದಲ್ಲಿ 171 ಕುಟುಂಬಗಳಿದ್ದು 977 ಜನರು ವಾಸವಿದ್ದಾರೆ, ಈ ಪೈಕಿ 157 ಖಾತೆದಾರರಿದ್ದಾರೆ. 977 …

Read More »

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ದಿನಾಂಕ ಘೋಷಣೆ

ಬೆಂಗಳೂರು: ಜೆಇಇ ಪರೀಕ್ಷೆಯಂದೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ದಿನಾಂಕ ಘೋಷಣೆಯಿಂದಾಗಿ, ಮತ್ತೆ ಪಿಯು ಬೋರ್ಡ್ ನಿಂದ ವಾರ್ಷಿಕ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ, ತಾತ್ಕಾಲಿಕ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ದಿನಾಂಕ 22-04-2022ರಿಂದ 11-05-2022ರವರೆಗೆ ನಿಗದಿಪಡಿಸಲಾಗಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ 05-03-2022ರ ಸಂಜೆ 5 …

Read More »

ವಿದ್ಯಾಕಾಶಿಯಲ್ಲಿ ಬಾಲ ಪ್ರತಿಭೆಗಳ ಸಂಗೀತ ಕಲರವ

ಧಾರವಾಡ: ಸಪ್ತಸ್ವರ ಸಂಗೀತ ಶಾಲೆ ಮಾಳಮಡ್ಡಿ ಧಾರವಾಡದ ಬಾಲ ಪ್ರತಿಭೆಗಳ ಸಂಗೀತ ಪ್ರದರ್ಶನ ನಗರದ ಕರ್ನಾಟಕ ಪ್ರಾಚ್ಯ ಸಂಶೋಧನಾ ಮಂಡಳಿ ಭವನದಲ್ಲಿ ನೆರವೇರಿತು. ಡಾ. ಗಿರಿಧರ ಕಿನ್ನಾಳ ದಂಪತಿಗಳು, ಡಾ. ಮಧುಮತಿ ಶಿವಪೂಜಿ,ಶ್ರೀ ಸುರೇಶ ಕುಲ ಕರ್ಣಿಯವರುಶ್ರೀ ಗುರುರಾಯರ ಭಾವ ಚಿತ್ರಕ್ಕೆ ಜೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಸಂಗೀತ ಗುರುಮಾತೆ ಶ್ರೀಮತಿ ನಂದಿನಿ ಉಪಾಧ್ಯಾಯ, ಹಾಗೂ ವೃಂದ ಕಲಾವಿದರು ಭಕ್ತಿಗೀತೆಗಳ ಸ್ವರ ಸಾಗರ ಹರಿಸಿದರು. ತಬಲಾ ಸಾಥಿ ಬಾಲ …

Read More »

ಮಾ. 26, 27ರಂದು 11ನೇ ಕನ್ನಡ ಸಾಹಿತ್ಯ ಸಮ್ಮೇಳನ

ದಾವಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾರ್ಚ್ 26 ಮತ್ತು 27ರಂದು ಎಲೆಬೇತೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಜಿ.ಎಸ್‌. ಸುಶೀಲಾದೇವಿ ಆರ್‌. ರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದ್ದಾರೆ. ಮಾರ್ಚ್‌ ಅಂತ್ಯದ ಒಳಗೆ ಈ ಬಾರಿಯ ಜಿಲ್ಲಾ ಸಮ್ಮೇಳನಗಳನ್ನು ಮುಗಿಸಬೇಕು ಎಂದು ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷ ಮಹೇಶ್‌ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ …

Read More »

ಪೊಲೀಸರಿಗೆ 500 ರೂಪಾಯಿ ವ್ಯಾಲ್ಯೂ ಗೊತ್ತಿರುವುದಿಲ್ಲ : ಮಾಜಿ ಸಿಎಂ ಕಿಡಿ

ರಾಮನಗರ : ಪೊಲೀಸರಿಗೆ 500 ರೂಪಾಯಿ ವ್ಯಾಲ್ಯೂ ಗೊತ್ತಿರುವುದಿಲ್ಲ. ಆದರೆ ರೈತನಿಗೆ ಪ್ರತಿ ರೂಪಾಯಿಯೂ ಮುಖ್ಯವಾಗಿರುತ್ತೆ. ಇದೇ ರೀತಿ ದಂಡ ವಿಧಿಸುತ್ತಿದ್ದರೆ ಪ್ರತಿಭಟನೆ ಮಾಡುತ್ತೇನೆ. ಎಸ್‌ಪಿ ಕಚೇರಿ ಮುಂದೆ ಧರಣಿ ಕೂರುವುದಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟಿದ್ದಾರೆ. ಇಲ್ಲಿ ಪೊಲೀಸರು ದಂಡ ವಿಧಿಸುವುದು ಹೆಚ್ಚಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರಿಂದ ಕುಮಾರಸ್ವಾಮಿಗೆ ದೂರು ನೀಡಲಾಗಿದೆ. ಈ ವೇಳೆ ಪೊಲೀಸರ ವಿರುದ್ಧ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ …

Read More »

ಉಕ್ರೇನ್​ನಿಂದ ವಿದ್ಯಾರ್ಥಿಗಳನ್ನು ಕರೆತರಲು 1 ಲಕ್ಷ ಹಣ ಪಡೆದುಕೊಂಡಿದ್ದಾರೆ ಎಂಬುವುದು ಸುಳ್ಳು : ಶ್ರೀ ರಾಮುಲು

ಬಳ್ಳಾರಿ: ಉಕ್ರೇನ್​ನಿಂದ ಎಲ್ಲಾ ವಿದ್ಯಾರ್ಥಿಗಳನ್ನು ಕರೆತರಲಾಗಿದೆ. 1 ಲಕ್ಷ ಹಣ ಪಡೆದು ಕರೆತಂದಿದ್ದಾರೆ ಎಂಬುದು ಸುಳ್ಳು. ಭಾರತ ಸರ್ಕಾರ ಹರಸಾಹಸಮಾಡಿ ಮಕ್ಕಳನ್ನು ಕರೆತಂದಿದೆ. ವಿದ್ಯಾರ್ಥಿಗಳನ್ನು ಕರೆತರಲು ನಾಲ್ವರು ಸಚಿವರನ್ನು ನಿಯೋಜನೆ ಮಾಡಲಾಗಿದೆ ಎಂದು ಬಳ್ಳಾರಿಯಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಇನ್ನೂ ರಷ್ಯಾ – ಉಕ್ರೇನ್ ಮಧ್ಯೆ ಯುದ್ಧ ಹಿನ್ನಲೆ ಸ್ವದೇ ಶಕ್ಕೆ ಮರಳಿದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಸಚಿವ ಶ್ರೀ ರಾಮುಲು ಮಾತನಾಡಿಸಿದ್ದಾರೆ. ಬಳ್ಳಾರಿಯ ಸಬಾ …

Read More »

ಆಪರೇಷನ್ ಗಂಗಾ ಅಡಿಯಲ್ಲಿ ಉಕ್ರೇನ್ ನಿಂದ ತಾಯ್ನಾಡಿಗೆ ಮರಳಿದ 2100 ಭಾರತೀಯರು

ಭಾರತೀಯ ನಾಗರಿಕರನ್ನು ರಕ್ಷಿಸಲು ಆರಂಭವಾದ ಆಪರೇಷನ್ ಗಂಗಾ ಅಡಿಯಲ್ಲಿ ಉಕ್ರೇನ್‌ನಲ್ಲಿ ನೆರೆಯ ದೇಶಗಳಿಂದ 11 ವಿಶೇಷ ನಾಗರಿಕ ವಿಮಾನಗಳ ಮೂಲಕ 2135 ಭಾರತೀಯರನ್ನು ವಾಪಸ್ ಕರೆತರಲಾಗಿದೆ. ವಿಶೇಷ ನಾಗರಿಕ ವಿಮಾನಗಳಲ್ಲಿ 9 ಹೊಸದಿಲ್ಲಿಗೆ ಬಂದಿಳಿದವು ಮತ್ತು ಎರಡು ಮುಂಬೈ ತಲುಪಿದವು.ಬುಡಾಪೆಸ್ಟ್ ನಿಂದ 6 ವಿಮಾನಗಳು, ಬುಕಾರೆಸ್ಟ್ ನಿಂದ 2, ಜೆರ್‌ಸ್ಜೋವ್ ನಿಂದ 2 ಮತ್ತು ಕೊಸಿಸ್ ನಿಂದ 1 ವಿಮಾನಗಳು ಆಗಮಿಸಿದವು. ಇದರೊಂದಿಗೆ ಫೆಬ್ರವರಿ 22 ರಂದು ವಿಶೇಷ ವಿಮಾನಗಳು …

Read More »

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಗೆ ನೋಟಿಸ್‌ ಜಾರಿ

ಜೈಪುರ: 2020ರಲ್ಲಿ ನಡೆದಿದೆ ಎನ್ನಲಾಗಿದ್ದ ಟೆಲಿಫೋನ್‌ ಕದ್ದಾಲಿಕೆ ಹಗರಣಕ್ಕೆ ಸಂಬಂಧಿಸಿ ಜೈಪುರದ ಸ್ಥಳೀಯ ನ್ಯಾಯಾಲಯವು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗೆ ನೋಟಿಸ್‌ ಜಾರಿಗೊಳಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕ ಆರೋಗ್ಯ ಅಭಿಯಂತರ ಇಲಾಖೆಯ ಸಚಿವ ಮಹೇಶ್‌ ಜೋಷಿ, ರಾಜ್ಯ ಸರಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ರಾಜೀವ ಸ್ವರೂಪ್‌ ಹಾಗೂ ಇನ್ನಿತರ ನಿವೃತ್ತ ಉನ್ನತ ಅಧಿಕಾರಿಗಳಿಗೆ ನೋಟಿಸ್‌ ಜಾರಿಯಾಗಿದೆ.

Read More »

ಶಿವಮೊಗ್ಗದಲ್ಲಿ ಹರಡಿದ ಸುಳ್ಳ ಸುದ್ದಿಗೆ ಬ್ರೇಕ್ ಹಾಕಿದ ಡಿಡಿಪಿಯು

ಶಿವಮೊಗ್ಗ: ಶಿವಮೊಗ್ಗದಲ್ಲಿ ಮಾ. 7 ರ ಸೋಮವಾರದಂದು ಕಾಲೇಜ್ ಗಳಿಗೆ ರಜೆ ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳ ಕೆಲವು ಗುಂಪುಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿರುವುದರಿಂದ ಡಿಡಿಪಿಯು ಅವರು ಸ್ಪಷ್ಟನೆ ನೀಡಿದ್ದಾರೆ. ದಿನಾಂಕ 07/03/2022ರಂದು ಯಾವುದೇ ಕಾಲೇಜುಗಳಿಗೆ ರಜೆ ಇರುವುದಿಲ್ಲ.ಪರೀಕ್ಷೆಗಳು ಯಥಾಸ್ಥಿತಿಯಲ್ಲಿ ನಡೆಯುತ್ತವೆ, ಯಾರೋ ಅನಾಮಿಕರು ಉಪನಿರ್ದೇಶಕರ ಹೆಸರಿನಲ್ಲಿ ಜಿಲ್ಲಾಧಿಕಾರಿಯವರ ಆದೇಶದಂತೆ ಇಂದು ರಜೆ ಎಂದು what’s app ನಲ್ಲಿ ಹಾಕಿದ್ದಾರೆ, ಇದು ಸುಳ್ಳು ಸುದ್ದಿಯಾಗಿದ್ದು, ಯಾವುದೇ ಕಾಲೇಜಿಗೆ ರಜೆ ಇರುವುದಿಲ್ಲ …

Read More »