Breaking News

ಪೊಲೀಸರಿಗೆ 500 ರೂಪಾಯಿ ವ್ಯಾಲ್ಯೂ ಗೊತ್ತಿರುವುದಿಲ್ಲ : ಮಾಜಿ ಸಿಎಂ ಕಿಡಿ


ರಾಮನಗರ : ಪೊಲೀಸರಿಗೆ 500 ರೂಪಾಯಿ ವ್ಯಾಲ್ಯೂ ಗೊತ್ತಿರುವುದಿಲ್ಲ. ಆದರೆ ರೈತನಿಗೆ ಪ್ರತಿ ರೂಪಾಯಿಯೂ ಮುಖ್ಯವಾಗಿರುತ್ತೆ. ಇದೇ ರೀತಿ ದಂಡ ವಿಧಿಸುತ್ತಿದ್ದರೆ ಪ್ರತಿಭಟನೆ ಮಾಡುತ್ತೇನೆ. ಎಸ್‌ಪಿ ಕಚೇರಿ ಮುಂದೆ ಧರಣಿ ಕೂರುವುದಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟಿದ್ದಾರೆ.

ಇಲ್ಲಿ ಪೊಲೀಸರು ದಂಡ ವಿಧಿಸುವುದು ಹೆಚ್ಚಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರಿಂದ ಕುಮಾರಸ್ವಾಮಿಗೆ ದೂರು ನೀಡಲಾಗಿದೆ. ಈ ವೇಳೆ ಪೊಲೀಸರ ವಿರುದ್ಧ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೀಗೆ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ಸರ್ಕಾರ ಪೊಲೀಸರಿಗೆ ಸಂಬಳ ನೀಡುವುದಿಲ್ಲವಾ? ನಾನು ರಾಮನಗರ ಎಸ್‌ಪಿ ಜತೆ ಮಾತನಾಡುವುದಿಲ್ಲ. ನೀವು ಹೋಗಿ ಎಸ್‌ಪಿಯನ್ನು ಕೇಳಿ ಎಂದು ಹೆಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

Share News

About admin

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *