Breaking News

ಬೆಣ್ಣೆಹಳ್ಳದ ನೀರಿನ ರಭಸಕ್ಕೆ ಕುಸಿದ ಬ್ರಿಡ್ಜ್: ಕೂದಳೆಲೆ ಅಂತರದಲ್ಲಿ ಪಾರಾದ ಮೂವರು ಯುವಕರು

ಹುಬ್ಬಳ್ಳಿ : ಬೆಣ್ಣೆಹಳ್ಳ ಪ್ರವಾದ ವೀಕ್ಷಿಸಲು ತೆರಳಿದ್ದ ಯುವಕರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ನವಲಗುಂದ ತಾಲೂಕಿನ ಕನ್ನೂರ ಗ್ರಾಮದ ಬಳಿ ನಡೆದಿದೆ.

ನಿನ್ನೆ ರಾತ್ರಿ ಧಾರಕಾರ ಸುರಿದ ಪರಿಣಾಮ‌ ಬೆಣ್ಣೆ ಹಳ್ಳ ಉಕ್ಕಿ ಹರಿದಿದೆ. ಇದನ್ನು ನೋಡಲು ಮೂವರು ಯುವಕರು ಕನ್ನೂರು ಬ್ರಿಡ್ಜ ಮೇಲೆ ನಿಂತಿದ್ದರು. ಆದರೆ ನೋಡು ನೋಡುತ್ತಿದ್ದಂತೆ ಬ್ರಿಡ್ಜ ಕೊಚ್ಚಿ ಹೋಗಿದೆ. ಯುವಕರು ಬ್ರಿಡ್ಜ್ ಮೇಲೆ ಸಿಲುಕಿ ಕರಲ ಕಾಲ ಆತಂಕಗೊಂಡಿದ್ದರು. ಈ ಭಯಾನಕ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು , ಕೂಡಲೇ ಸ್ಥಳೀಯರು ಯುವಕರನ್ನು ರಕ್ಷಿಸಿದ್ದಾರೆ. ಇದರಿಂದ ನವಲಗುಂದ ಹೈದ್ರಾಬಾದ ಹೆದ್ದಾರಿ ಸಂಪೂರ್ಣ ಸ್ಥಗಿತಗೊಂಡಿದೆ.

ನವಲಗುಂದ ತಾಲೂಕಿನ 10 ಕ್ಕು ಹೆಚ್ಚು ಹಳ್ಳಿಗಳಿಗೆ ನುಗ್ಗಿದ ನೀರು : ರಾತ್ರಿಯಿಡೀ ಸುರಿದ ಮಳೆಯಿಂದ ಹುಬ್ಬಳ್ಳಿಯ ತಾಲೂಕಿನ ಇಂಗಳಹಳ್ಳಿ ಗ್ರಾಮ ಸಂಪೂರ್ಣ ಜಲಾವೃತಗೊಂಡು ಗ್ರಾಮದ ಜನರು ಕಂಗಾಲಾಗಿದ್ದರು. ಬೆಣ್ಣೆ ಹಳ್ಳದ ದಡದ ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದೆ. ನವಲಗುಂದ ಕ್ಷೇತ್ರದಲ್ಲಿ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ.ಮನೆಗಳಲ್ಲಿರುವ ನೀರು ಹೊರಹಾಕಲು ಹರಸಹಸಪಡುವಂತಾಯಿತು. ಪ್ರವಾಹ ಪೀಡಿತ ಪ್ರದೇಶಗಳಿಗೆ ಜನಪ್ರತಿನಿಧಿಗಳು ಆಗಮಿಸದೆ ಇರುವದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Share News

About BigTv News

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *