ಗಂಗಾವತಿ: ತಾಲ್ಲೂಕಿನ ಕಡೆಬಾಗಿಲು ಗ್ರಾಮದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿ ಯುವಕ ಯುವತಿ ಅಪ್ಪು ಫೋಟೊ ಎದುರಿಗೆ ಸತಿಪತಿಗಳಾಗಿ ಇಂದು ವಿವಾಹವಾಗಿ ಅಭಿಮಾನ ಮೆರೆದಿದ್ದಾರೆ. ಸೋಮವಾರ ಕಡೆಬಾಗಿಲು ಗ್ರಾಮದ ವಾಲ್ಮೀಕಿ ಬಂಧುಗಳ ಮದುವೆ ಸಮಾರಂಭದಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಾಗಿರುವ ನಿಂಗರಾಜ್ ಮತ್ತು ಲಕ್ಷ್ಮಿ ಇವರು ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರವನ್ನ ವೇದಿಕೆ ಮೇಲಿರಿಸಿ ಸತಿಪತಿಗಳಾದರು.
Read More »ಪ್ರಭಾಕರ ಸದಾಶಿವರಾವ ಕುಲಕರ್ಣಿ ನಿಧನ
ಬೆಳಗಾವಿ: ನಗರದ ನಾನಾವಾಡಿ ನಿವಾಸಿ, ಎಂ.ವಿ. ಹೇರವಾಡ್ಕರ್ ಶಾಲೆಯ ನಿವೃತ್ತ ಪ್ರಾಂಶುಪಾಲ ಪ್ರಭಾಕರ ಸದಾಶಿವರಾವ ಕುಲಕರ್ಣಿ (97) ಸೋಮವಾರ ನಿಧನರಾದರು.ಅವರಿಗೆ ಪುತ್ರ ಮತ್ತು ಪುತ್ರಿ ಇದ್ದಾರೆ. ಅವರ ಇಚ್ಛೆಯಂತೆ ಕುಟುಂಬದವರು, ಇಲ್ಲಿನ ಜೆಂಟ್ಸ್ ನೇತ್ರ ಪ್ರತಿಷ್ಠಾನ ಹಾಗೂ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್ ವತಿಯಿಂದ ಹುಬ್ಬಳ್ಳಿಯ ಗಬ್ಬೂರ ಕ್ರಾಸ್ನ ಕೆಎಲ್ಇ ಸಂಸ್ಥೆಯ ಗಂಗಾಧರ ಸ್ವಮೀಜಿ ಮೂರು ಸಾವಿರ ಮಠ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ದೇಹವನ್ನು ದಾನವಾಗಿ ನೀಡಿದರು.
Read More »ಹಿಜಾಬ್ ಧರಿಸಲು ನಿರಾಕರಣೆ ಖಂಡಿಸಿ ಜಿಲ್ಲಾ ಮಹಿಳಾ ಒಕ್ಕೂಟ ಪ್ರತಿಭಟನೆ
ಚಾಮರಾಜನಗರ: ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನಿರಾಕರಿಸುವುದನ್ನು ಖಂಡಿಸಿ ಜಿಲ್ಲಾ ಮಹಿಳಾ ಒಕ್ಕೂಟದ ವತಿಯಿಂದ ಮುಸ್ಲಿಂ ವಿದ್ಯಾರ್ಥಿನಿಯರು, ಮಹಿಳೆಯರು ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಹಾಗೂ ವಿದ್ಯಾರ್ಥಿಗಳು ನಗರದ ಡೀವಿಯೇಷನ್ ರಸ್ತೆಯ ಲಾರಿ ನಿಲ್ದಾಣದಿಂದ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿ, ಅಲ್ಲಿ ಪ್ರತಿಭಟನೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸರ್ಕಾರವು …
Read More »ಪತ್ರಕರ್ತ, ಲೇಖಕ ಭೀಮಸೇನ ತೊರಗಲ್ಲ ನಿಧನ
ಬೆಳಗಾವಿ: ಪತ್ರಕರ್ತ, ಲೇಖಕ ಭೀಮಸೇನ ತೊರಗಲ್ಲ ಅವರು ವಯೋಸಹಜ ಅನಾರೋಗ್ಯದಿಂದ ಸೋಮವಾರ ನಿಧನರಾದರು. ಭೀಮಸೇನ ತೊರಗಲ್ಲಗೆ 82 ವರ್ಷ ವಯಸ್ಸಾಗಿತ್ತು. ಇವರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ. ಅವರ ಇಚ್ಛೆಯಂತೆ ಯಾವುದೇ ವಿಧಿ-ವಿಧಾನಗಳಿಲ್ಲದೆ ಶಹಪುರದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.
Read More »ಚೆನ್ನವೀರ ಕಣವಿಯವರ ಆರೋಗ್ಯದ ಸ್ಥಿತಿ ವಿಚಾರಿಸಿದ ಸಿಎಂ
ನಾಡೋಜ ಚೆನ್ನವೀರ ಕಣವಿ ಯವರ ಆರೋಗ್ಯದ ಸ್ಥಿತಿ ಗಂಭೀರವಾಗದೆ . 93 ವರ್ಷದ ನಾಡೋಜ ಚೆನ್ನವೀರ ಕಣವಿ ಕಳೆದ 3-4 ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಧಾರವಾಡದ SDM ಆಸ್ಪತ್ರೆಯ ವೆಂಟಿಲೇಟರ್ನಲ್ಲಿ ನಾಡಿನ ಹಿರಿಯ ಸಾಹಿತಿ, ಕವಿ, ನಾಡೋಜ ಅವರಿಗೆ ಈಗ ಮತ್ತೆ ಆರೋಗ್ಯ ಕ್ಷೀಣಿಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಚೆನ್ನವೀರ ಕಣವಿ ಆರೋಗ್ಯ ವಿಚಾರಿಸಿ ಕಣವಿ ಅವರು ಶೀಘ್ರವಾಗಿ ಗುಣಮುಖರಾಗಲೆಂದು ಹಾರೈಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಕೂಡ …
Read More »ಕಾನ್ಸ್ಸ್ಟೇಬಲ್ ಗೆ ಪಿ.ಎಚ್.ಡಿ ಪ್ರಧಾನ
ಉಡುಪಿ: ಕರಾವಳಿ ಕಾವಲು ಪೊಲೀಸ್ ಮಲ್ಪೆ ಕೇಂದ್ರ ಕಚೇರಿಯಲ್ಲಿ ಪೊಲೀಸ್ ಹೆಡ್ ಕಾನ್ಸ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂತೋಷ್ ಶೆಟ್ಟಿ ಅವರಿಗೆ ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯ ಪಿ.ಎಚ್.ಡಿ. ಪದವಿ ನೀಡಿದೆ. ಸಂತೋಷ್ ಶೆಟ್ಟಿ ಅವರು ಕರ್ನಾಟಕ ಮುಕ್ತ ವಿವಿಯ ಪ್ರೊಫೆಸರ್ ಡಾ. ಮಹಾದೇವಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಮೈಸೂರು ಒಡೆಯರ ಕಾಲದಲ್ಲಿ ಪೊಲೀಸ್ ವ್ಯವಸ್ಥೆ ಒಂದು ಅಧ್ಯಯನ’ ವಿಷಯದ ಕುರಿತ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ. ಪದವಿಯನ್ನು ನೀಡಲಾಗಿದೆ.
Read More »ಪೋನ್ ಕರೆ ಮೂಲಕ ಸಿಎಂ ಇಬ್ರಾಹಿಂಗೆ ಸಮಾಧಾನ ಮಾಡಿದ ಸಿದ್ದರಾಮಯ್ಯ
ಬೆಂಗಳೂರು: ಮುನಿಸಿಕೊಂಡಿರುವ ಸಿಎಂ ಇಬ್ರಾಹಿಂಗೆ ವಿಪಕ್ಷನಾಯಕ ಸಿದ್ದರಾಮಯ್ಯ ಕರೆ ಮಾಡಿ ಪಕ್ಷ ಬಿಡದಂತೆ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾದೇವಪ್ಪ ಇಬ್ರಾಹಿಂನನ್ನು ಭೇಟಿ ಮಾಡಿದ್ದನಂತೆ. ನಾವೆಲ್ಲ ಒಟ್ಟಿಗಿದ್ದವರ. ನಾವೆಲ್ಲ ಜಾತ್ಯತೀತ ಪಕ್ಷದಲ್ಲಿರಬೇಕು. ನೊಡೋಣ ವಿಚಾರ ಮಾಡ್ತೇನೆ. ಇಬ್ರಾಹಿಂ ಎಲ್ಲರ ಜೊತೆ ಚರ್ಚೆ ಮಾಡ್ತೇನೆ ಎಂದಿದ್ದಾನಂತೆ ಎಂದಿದ್ದಾರೆ. ಹೊಸಪೇಟೆಗೆ ತೆರಳುವ ಮುನ್ನ ದೂರವಾಣಿ ಮೂಲಕ ಮಾತುಕತೆ ನಡೆಸಿದ ಸಿದ್ದರಾಮಯ್ಯ, ಪಕ್ಷ ಬಿಡಬೇಡ, ಮುಂದೆ ಸ್ಥಾನಮಾನ ಕೊಡೋಣ ಎಂದು ಹೇಳಿದ್ದಾರೆ.
Read More »ಸ್ನೇಹಿತನ ಪತ್ನಿಗೆ ಬಾಳು ಕೊಟ್ಟ ಯುವಕ
ಕೊರೊನಾ ಬಲಿಯಾದ ಸ್ನೇಹಿತನ ಪತ್ನಿಯನ್ನು ವರಿಸುವ ಮೂಲಕ ಆಕೆಗೆ ಬಾಳು ಕೊಟ್ಟು ಆದರ್ಶ ಮೆರೆದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಹನೂರಿನ ಅಂಬಿಕಾ ಕಳೆದ 8 ವರ್ಷಗಳ ಹಿಂದೆ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದ ಚೇತನ್ ಕುಮಾರ್ ಅವರನ್ನು ಮದುವೆಯಾಗಿದ್ದರು. ಚೇತನ್ ಬೆಂಗಳೂರಿನಲ್ಲಿ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸದಲ್ಲಿದ್ದರು. ಆದರೆ ಕೊವಿಡ್ 2ನೇ ಅಲೆಯಲ್ಲಿ ಚೇತನ್ ಮೃತಪಟ್ಟಿದ್ದ. ಚಾಮರಾಜನಗರ ತಾಲ್ಲೂಕಿನ ನಂಜದೇವನಪುರ ಗ್ರಾಮದ ಲೋಕೇಶ್ ಗೆಳೆಯನ ಪತ್ನಿಯನ್ನು ಮದುವೆಯಾದ ಯುವಕ. ಲೋಕೇಶ್ …
Read More »ಓಬವ್ವ ಆತ್ಮರಕ್ಷಣೆ ಕಲೆ ತರಬೇತಿ ಕಾರ್ಯಕ್ರಮ ಉದ್ಘಾಟನೆ ಮುಂದೂಡಿಕೆ
ಬೆಂಗಳೂರು: ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಹಿಳೆಯರ ಓಬವ್ವ ಆತ್ಮರಕ್ಷಣೆ ಕಲೆ ತರಬೇತಿಗೆ ಚಾಲನೆ ನೀಡಿದ್ದರು. ಇಂದು ರಾಜ್ಯಾಧ್ಯಂತ ವಿದ್ಯುಕ್ತವಾಗಿ ಉದ್ಘಾಟನೆ ಗೊಳ್ಳುವಂತೆ ದಿನಾಂಕ ನಿಗದಿ ಪಡಿಸಲಾಗಿತ್ತು. ಆದ್ರೇ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ನಿಧನದ ಹಿನ್ನಲೆಯಲ್ಲಿ ಎರಡು ದಿನ ಶೋಕಾಚರಣೆಯನ್ನು ರಾಜ್ಯಾಧ್ಯಂತ ಘೋಷಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಇಂದು ಉದ್ಘಾಟನೆಗೊಳ್ಳಬೇಕದ್ದಂತ ಓಬವ್ವ ಆತ್ಮರಕ್ಷಣೆ ಕಲೆ ತರಬೇತಿ ಕಾರ್ಯಕ್ರಮ ಫೆಬ್ರವರಿ 8ರ ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, …
Read More »ಗಾನ ಕೋಗಿಲೆ ಲತಾ ಮಂಗೇಶ್ಕರ್ ವಿಧಿವಶ : ರಜೆ ಘೋಷಣೆ
ಮುಂಬೈ: ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಭಾನುವಾರ ಸಂಜೆ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಸಕಲ ಸರ್ಕಾರಿ ಗೌರವದ ಜೊತೆಗೆ ಲತಾರ ಅಂತ್ಯ ಸಂಸ್ಕಾರವನ್ನು ನಡೆಸಲಾಗಿದೆ. ಲತಾ ಮಂಗೇಶ್ಕರ್ ಅವರ ನಿಧನದಿಂದ ಭಾರತ ಇಂದು ತನ್ನ ಶ್ರೇಷ್ಠ ರತ್ನಗಳಲ್ಲಿ ಒಂದನ್ನು ಕಳೆದುಕೊಂಡಿದೆ.ಭಾರತ ಸರ್ಕಾರವು ಮೆಲೋಡಿ ಕ್ವೀನ್ ಎಂದೇ ಪ್ರಸಿದ್ಧವಾದ ಲತಾ ಮಂಗೇಶ್ಕರ್ ಸ್ಮರಣಾರ್ಥ ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. “ಇಂದು ಮತ್ತು ನಾಳೆ ಎರಡು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





