Breaking News

admin

ಮೈಸೂರು ಅಭಿವೃದ್ಧಿ ಮಾಡಿದ್ದು ನಾನು, ನಾನು : ಪ್ರತಾಪ್ ಸಿಂಹ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಡುಗೆ ಅನಿಲ ಕೊಳವೆ ಮಾರ್ಗ ಅಳವಡಿಸುವ ವಿಷಯದಲ್ಲಿ ಸ್ವಪಕ್ಷೀಯರಿಂದ ಟೀಕೆಗೆ ಒಳಗಾಗಿರುವ ಮೈಸೂರು-ಕೊಡಗು ಸಂಸದೀಯ ಕ್ಷೇತ್ರಕ್ಕೆ ಎರಡು ಬಾರಿ ಸಂಸದರಾಗಿರುವ ಪ್ರತಾಪ್ ಸಿಂಹ ಮೈಸೂರಿನ ಶಾಸಕರಿಗೆ ಸಿಂಹ ಸವಾಲು ಹಾಕಿದ್ದಾರೆ. ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್​ ತಮ್ಮಕ್ಷೇತ್ರದಲ್ಲಿ ಬೆಳವಣಿಗೆಗಳು, ಅಭಿವೃದ್ಧಿ ಕಾರ್ಯಗಳ ಅಗಲಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ. ಮೈಸೂರು ಅಭಿವೃದ್ಧಿ ಮಾಡಿದ್ದು ನಾನು, ನಾನು, ನಾನು..! ಎಂದು ಘಂಟಾಘೋಷವಾಗಿ ಹೇಳಿರುವ ಸಂಸದ ಪ್ರತಾಪ್ …

Read More »

ಸಿಎಂ ನೇತೃತ್ವದಲ್ಲಿ ನಡೆದ ಕೋವಿಡ್ ನಿಯಂತ್ರಣ ಸಭೆ ಪ್ರಮುಖ ನಿರ್ಧಾರಗಳು

ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಕೋವಿಡ್ ನಿಯಂತ್ರಣ ಸಭೆ ನಡೆಯಿತು. ಇಂದಿನ ಸಭೆಯಲ್ಲಿ ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಮುಖ್ಯಾಂಶಗಳು ಈ ಕೆಳಗಿನಂತಿವೆ. 1. ಗುಣಮುಖರಾಗುತ್ತಿರುವವರ ಪ್ರಮಾಣ ಹೆಚ್ಚಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ.2. ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಶೇ. 2ಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ತಜ್ಞರ ಸಭೆಯಲ್ಲಿ ತೀರ್ಮಾನಿಸಲಾಯಿತು.3. ಜನವರಿ 31 ರಿಂದ ರಾತ್ರಿ ಕರ್ಫ್ಯೂ ರದ್ದು ಪಡಿಸಲು …

Read More »

ಸಿ.ಟಿ. ರವಿಗೆ ಪಿತೃವಿಯೋಗ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ತಂದೆ ತಿಮ್ಮೇಗೌಡ(92) ವಯೋ ಸಹಜ ಅನಾರೋಗ್ಯದಿಂದಾಗಿ ಇಂದು ಸಾವನ್ನಪ್ಪಿದ್ದಾರೆ ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ನಾಯಕ ಸಿ.ಟಿ. ರವಿ, ನನ್ನಾತ್ಮಬಲದ ಭಾಗವೊಂದು ಇಂದು ನನ್ನನ್ನಗಲಿದೆ. ಮೊದಲ ಬಾರಿಗೆ ಅಪ್ಪನಿಲ್ಲದೆ, ಲೋಕವನ್ನು ನಾನೆದುರಿಸಬೇಕಾಗಿದೆ.ಓಂಶಾಂತಿ ಅಣ್ಣ ಎಂದು ಬರೆದುಕೊಂಡಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Read More »

ಯಡಿಯೂರಪ್ಪ ಮೊಮ್ಮಗಳು ವಿಧಿವಶ : ಬಿಎಸ್ ವೈ ಮನೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರ ಮೊಮ್ಮಗಳು ಡಾ. ಸೌಂದರ್ಯ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನಲೆಯಲ್ಲಿ ಬಿಎಸ್ ವೈ ಮೌನವಾಗಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಭೇಟಿ‌ ನೀಡಿ ಮೊಮ್ಮಗಳ ನಿಧನಕ್ಕೆ ಸಾಂತ್ವನ ಹೇಳಿದ್ದಾರೆ.

Read More »

ರಾಜಧಾನಿಯಲ್ಲಿ ಸೋಮವಾರದಿಂದ ಶಾಲೆ ಪುನಾರಂಭ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಭೀತಿಯಿಂದ ಕ್ಲೋಸ್‌ ಆಗಿದ್ದ ತರಗತಿಗಳನ್ನ ಸೋಮವಾರದಿಂದ ಮತ್ತೆ ಪುನಾರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಹೇಳಿದ್ದಾರೆ. ಈ ಕುರಿತು ಬೆಂಗಳೂರನಲ್ಲಿ ಮಾತನಾಡಿದ ಸಚಿವರು, ‘ಸೋಮವಾರದಿಂದ ಎಲ್ಲ ತರಗತಿಗಳು ಆರಂಭಿಸಲಾಗುವುದು. ಕೋವಿಡ್‌ ನಿಯಮ ಪಾಲಿಸಿ ಶಾಲೆಗಳ ಪುನಾರಂಭಕ್ಕೆ ಅವಕಾಶ ನೀಡಲಾಗುವುದು’ ಎಂದರು.

Read More »

ವಾಹನದ ರಿಮೋಟ್ ಕದ್ದು ಪರಾರಿ : ಆರೋಪಿ ಬಂಧನ

ಹುಬ್ಬಳ್ಳಿ: ಸುಮಾರು 5 ಲಕ್ಷ ರೂ. ಮೌಲ್ಯದ ವಾಹನದ ರಿಮೋಟ್ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ನಗರದ ಕಸಬಾಪೇಟ ಪೊಲೀಸ ಠಾಣೆ ಬಂಧಿಸಿದ್ದಾರೆ. ಕಸಬಾ ಪೇಟ ಪೊಲೀಸರು ಜನವರಿ 21ರಂದು ವರದಿಯಾಗಿದ್ದ ಕಳ್ಳತನದ ಪ್ರಕರಣವನ್ನು ಬೇಧಿಸಿದ್ದಾರೆ. ಉತ್ತರ ಪ್ರದೇಶ ರಾಜ್ಯದ ಸಿಕಾಟಿಯಾದಲ್ಲಿ ಇದ್ದ ಆರೋಪಿಯನ್ನು ಬಂಧಿಸಿ, ಆತನಿಂದ ಕಳ್ಳತನವಾದ 5 ಲಕ್ಷ ರೂ. ಕಿಮ್ಮತ್ತಿನ ವಾಹನದ ರಿಮೋಟ ಜಪ್ತಿ ಮಾಡಲಾಗಿದೆ. ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬಿಜೆಪಿ ನಾಯಕರಿಗೆ ಸವಾಲಾದ ಮೊದಲ ಪ್ರಜೆ ಆಯ್ಕೆ

ಹುಬ್ಬಳ್ಳಿ: ಅದು ರಾಜ್ಯದಲ್ಲಿಯೇ ದೊಡ್ಡ ಮಹಾನಗರ ಪಾಲಿಕೆ. ಈ ಪಾಲಿಕೆಯ ಚುನಾವಣೆ ನಡೆದು ನಾಲ್ಕು ತಿಂಗಳು ಕಳೆದಿದೆ, ಆದರೂ ಮೇಯರ್, ಉಪಮೇಯರ್ ಆಯ್ಕೆ ಆಗಿರಲಿಲ್ಲ. ಈಗ ರಾಜ್ಯ ಸರ್ಕಾರ ಮೀಸಲಾತಿ ಘೋಷಣೆ ‌ಮಾಡಿ ಮೇಯರ್, ಉಪಮೇಯರ್ ಆಯ್ಕೆ ಮಾಡುವಂತೆ ನಿರ್ದೇಶನ ‌ನೀಡಿದೆ. ಮೀಸಲಾತಿ ಘೋಷಣೆ ಆಗುತ್ತಿದಂತೆ ಆಕಾಂಕ್ಷಿಗಳೆ ದಂಡೆ ಹುಟ್ಟಿಕೊಂಡಿದೆ. ಇದರಿಂದ ಬಿಜೆಪಿಯ ನಾಯಕರಿಗೆ ಮೊದಲ ಪ್ರಜೆ ಆಯ್ಕೆ ದೊಡ್ಡ ತಲೆನೋವಾಗಿದೆ.. ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯನ್ನ 21 ನೇ …

Read More »

ಕೃಷಿಮಿತ್ರ ನಡಕಟ್ಟಿ‌ನ ‌ಕೂರಿ ಸಂಶೋಧನೆಗೆ ವಲಿದ ಪದ್ಮಶ್ರೀ ಪ್ರಶಸ್ತಿ

ಹುಬ್ಬಳ್ಳಿ: ಆತ ಕಲಿತದ್ದು 10 ನೆಯ ತರಗತಿ.ಅದರಲ್ಲೂ ಆತ ಫೇಲ್ ಆಗಿದ್ದ. ಆದರೆ ಈತನಿಗೆ ಒಲಿದಿದ್ದು ಪದ್ಮಶ್ರೀ ಪ್ರಶಸ್ತಿ. ರೈತನಾಗಿ ವಿಶೇಷ ತಂತ್ರಜ್ಞಾನದ ಮೂಲಕವೇ ಹೊಸ ಹೊಸ ಆವಿಷ್ಕಾರ ಮಾಡಿದಕ್ಕೆ ಸದ್ಯ ಪದ್ಮಶ್ರೀ ಹುಡುಕಿಕೊಂಡು ಬಂದಿದೆ. ಇದೀಗ ಪದ್ಮಶ್ರೀ ಪ್ರಶಸ್ತಿಗೆ ಪಾತ್ರವಾದ ನಡಕಟ್ಟಿ ಅವರ ಸಾಧನೆಗೆ ಸ್ಫೂರ್ತಿ ಸಮಾಜಕ್ಕೆ ರೈತ ಸಮುದಾಯಕ್ಕೆ ಏನಾದರು ಕೊಡಬೇಕು ಎಂಬ ಹಂಬಲ ಅಂದರೆ ನೀವು ನಂಬಲೇಬೇಕು. ಹೀಗೆ ತಾವೇ ಸಿದ್ದ ಮಾಡಿರುವ ಕೃಷಿ ಉಪಕರಣಗಳನ್ನು …

Read More »

ಹುಬ್ಬಳ್ಳಿ ಪ್ರೊಡಕ್ಷನ್ ಚೊಚ್ಚಲ ಸಿನಿಮಾ ಶೀರ್ಷಿಕೆ ಬಿಡುಗಡೆ

ಹುಬ್ಬಳ್ಳಿ: ಹುಬ್ಬಳ್ಳಿ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗುತ್ತಿರುವ ಚಿತ್ರದ ಶೀರ್ಷಿಕೆಯನ್ನು ಇಂದು ಬಿಡುಗಡೆ ಮಾಡಲಾಯಿತು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿದ ಚಿತ್ರತಂಡ, ಚಿತ್ರಕ್ಕೆ ಬ್ಯಾಡ್ ಬ್ರೋ ಎಂಬ ಹೆಸರಿಟ್ಟಿದೆ. ಇನ್ನೂ ಇದು ಹುಬ್ಬಳ್ಳಿ ಪ್ರೊಡಕ್ಷನ್ ದ ಮೊದಲ ಚಿತ್ರವಾಗಿದ್ದು, ರಿಯಾಜ್ ಮೊಕಾಶಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಕುರಿತು ನಿರ್ದೇಶಕ ರಿಯಾಜ್ ಮೊಕಾಶಿ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಯುವಕರೇ ಸೇರಿಕೊಂಡು ನಿರ್ಮಾಣ ಮಾಡಿರುವ ಬ್ಯಾಡ್ ಬ್ರೋ, ಅಣ್ಣ-ತಂಗಿಯ …

Read More »

ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ

ಬೆಂಗಳೂರು : ಕೊರೋನಾ ವೈರಸ್‌ ಸೋಂಕಿಗೆ ಒಳಗಾಗುವ ಸರ್ಕಾರಿ ನೌಕರರಿಗೆ ಮನೆಯಲ್ಲಿ ಪ್ರತ್ಯೇಕವಾಗಿರಲು ಅಥವಾ ಚಿಕಿತ್ಸೆ ಪಡೆಯಲು ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ ಅನ್ವಯವಾಗಲಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಚುಚ್ಚುಮದ್ದು ನೀಡಲಾಗಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ತೀವ್ರತೆಯು ಪ್ರಸ್ತುತ ಇಳಿಮುಖವಾಗಿದ್ದು, ಇದಕ್ಕೆ ತುತ್ತಾದವರು ಚಿಕಿತ್ಸೆ ಪಡೆದು ಗುಣಮುಖರಾ ಗುತ್ತಿರುವ ಪ್ರಮಾಣದಲ್ಲಿಯೂ ಗಣನೀಯವಾಗಿಯೂ ಬದಲಾವಣೆ ಆಗಿರುವುದನ್ನು ಪರಿಗಣಿಸಿ ಕೋವಿಡ್ 19 ಸಂಬಂಧ ಮುಂಜಾಗ್ರತಾ ಕ್ರಮದ ಮಾರ್ಗಸೂಚಿಯನ್ನು …

Read More »