Breaking News

admin

ಉಣಕಲ್ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ

ಹುಬ್ಬಳ್ಳಿ : ಉಣಕಲ್ ಗ್ರಾಮ ವ್ಯಾಪ್ತಿಯ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆಯು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಹಾಗೂ ಆಯುಕ್ತ ಎನ್.ಹೆಚ್.ಕುಮ್ಮಣ್ಣವರ ನೇತೃತ್ವದಲ್ಲಿ ಜರುಗಿತು. ಈ ಸಂದರ್ಭದಲ್ಲಿ ನಗರ ಯೋಜನಾ ಸದಸ್ಯ ವಿವೇಕ ಕಾರೇಕರ, ಕಾರ್ಯನಿರ್ವಾಹಕ ಅಭಿಯಂತರ ಎಂ. ರಾಜಶೇಖರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜೇಂದ್ರ ಕೊಕ್ಕಳಕಿ, ಬಿ‌. ಎಸ್. ಪಾಟೀಲ, ಮುಕುಂದ ಜೋಶಿ, ಬಸವರಾಜ ದೇವಗಿರಿ, ಮೌನೇಶ ಬಡಿಗೇರ, ಆರ್. ಜಿ. ಪಾಟೀಲ ಹಾಗೂ …

Read More »

ಕನ್ನಡದ ಹಾಸ್ಯನಟ ಮೋಹನ್ ನಿಧನ

ಬೆಂಗಳೂರು : ಕನ್ನಡದ ಅನೇಕ ಚಿತ್ರಗಳಲ್ಲಿ ಹಾಸ್ಯನಟರಾಗಿ ಕಾರ್ಯನಿರ್ವಹಿಸಿದ್ದ ನಟ ಮೋಹನ್ ಜುನೇಜಾ ನಿಧನರಾಗಿದ್ದಾರೆ. ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ಮೋಹನ್ ಜುನೇಜಾ ವಿಧಿವಶರಾಗಿದ್ದಾರೆ.ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ , ಶಿವಣ್ಣ , ಸುದೀಪ್ , ಗಣೇಶ್ , ದರ್ಶನ್ , ರವಿಚಂದ್ರನ್ ಸೇರಿದಂತೆ ಎಲ್ಲಾ ನಟರ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೋಹನ್ ಜುನೇಜಾ , ಆನಾರೋಗ್ಯದಿಂದ ಅಸ್ಪತ್ರೆಗೆ ದಾಖಲಾಗಿದ್ದರು . ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ …

Read More »

ಇಂದು ಕೆಪಿಸಿಸಿ ಅಧ್ಯಕ್ಷ ಜಿಲ್ಲಾ ಪ್ರವಾಸ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಇಂದು ಧಾರವಾಡ ಮತ್ತು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ . ಬೆಳಗಾವಿ ಬೆಂಗಳೂರಿನಿಂದ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸುವ ಅವರು ಇಂದು ಮಧ್ಯಾಹ್ನ 12 : 00 ಕ್ಕೆ ಬೆಳಗಾವಿ ಗ್ರಾಮೀಣ ತಾಲೂಕಿನಲ್ಲಿರುವ ಆರಳಿಕಟ್ಟೆಮಠದ ಶಿವಮೂರ್ತಿ ಭಾಗವಹಿಸುವರು . ದೇವರ ಪಟ್ಟಾಭಿಷೇಕದ ಕಾರ್ಯಕ್ರಮದಲ್ಲಿ ಮಧ್ಯಾಹ್ನ 3 : 00 ಕ್ಕೆ ವಿಧಾನ ಪರಿಷತ್ತಿಗೆ ನೈಋತ್ಯ ಪದವೀಧರರ ಕ್ಷೇತ್ರದಿಂದ ಚುನಾವಣೆ ಬಗ್ಗೆ ಬೆಳಗಾವಿ ನಗರ , ಬೆಳಗಾವಿ ಗ್ರಾಮಾಂತರ …

Read More »

ಒಳಚರಂಡಿ ಕಾಮಗಾರಿಗೆ ಚಾಲನೆ ‌ನೀಡಿದ ಕಾಂಗ್ರೆಸ್ ಮುಖಂಡ

ಹುಬ್ಬಳ್ಳಿ: ನಗರದ ವಾರ್ಡ್ ನಂಬರ್ 76 ರ ಎನ್.ಏ ನಗರ ಡಿ . ಬ್ಲಾಕ್ ನಲ್ಲಿ ಒಳಚರಂಡಿ ಕಾಮಗಾರಿ ಪ್ರಾರಂಭಿಸಲಾಯಿತು . ಕಾಂಗ್ರೆಸ್ ಮುಖಂಡ ಮುನ್ನಾ ಕಿತ್ತೂರ ಅವರ ನೇತೃತ್ವದಲ್ಲಿಂದು ಒಳಚರಂಡಿ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು . ಈ ಸಂಧರ್ಭದಲ್ಲಿ ಮುನ್ನಾ ಕಿತ್ತೂರ ಅವರು ತಾವೇ ಮುತವರ್ಜಿ ವಹಿಸಿ ಕಾಮಗಾರಿಯ ಪರಿಶೀಲನೆ ನಡೆಸಿದರು . ಅವರೊಂದಿಗೆ ಎನ್.ಏ ನಗರದ ನಾಗರೀಕರು , ಪಾಲಿಕೆ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು …

Read More »

ನಿಧಾನಗತಿಯಲ್ಲಿ‌ ಸಾಗುತ್ತಿದೆ ಗ್ಯಾಸ್ ಅಳವಡಿಕೆಯ ಕಾರ್ಯ

ಹುಬ್ಬಳ್ಳಿ : 2021 ಹಾಗೂ 2022 ರ ಮೇ ವರೆಗೆ ಸುಮಾರು 21 ಸಾವಿರ ಮನೆಗಳಿಗೆ ಪೈಪ್ಟ್ ನ್ಯಾಚುರಲ್ ಗ್ಯಾಸ್ ಅಳವಡಿಕೆಯ ಗುರಿಯನ್ನು ಐಓಸಿ ಮತ್ತು ಅಂದಾನಿ ಗ್ಯಾಸ್ ಕಂಪನಿಗೆ ಹೊಂದಿದ್ದವು . ಆದರೆ ಕೋವಿಡ್ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲವಾದ ಹಿನ್ನೆಲೆ ಇದೀಗ ಕೇವಲ 19 . 500 ಸಾವಿರ ಮನೆಗಳಿಗೆ ಪೈಪ್ ಲೈನ್ ಅಳವಡಿಸಲಾಗಿದೆ . ಸುಮಾರು ನಾಲ್ಕು ವರ್ಷದಲ್ಲಿ ಕೇವಲ …

Read More »

ಅವಳಿನಗರದಲ್ಲಿ‌ ಸ್ವಚ್ಛತಾ ಕಾರ್ಯ

ಹುಬ್ಬಳ್ಳಿ : ಅವಳಿ ನಗರದ ಮಹಾನಗರ ಪಾಲಿಕೆಯಿಂದ ಹುಬ್ಬಳ್ಳಿಯ ವಿವಿಧ ಬಡಾವಣೆಗಳಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು . ಈ ಸಂಧರ್ಭದಲ್ಲಿ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು , ಪೌರ ಕಾರ್ಮಿಕರು ಬೆಳಗ್ಗೆಯಿಂದ ನಗರದ ವಿವಿದ ಬಡಾವಣೆಗಳಲ್ಲಿ ಸ್ವಚ್ಚತಾ ಕಾರ್ಯಗಳನ್ನು ಕೈಗೊಂಡರು . ಸಾರ್ವಜನಿಕರು ಪಾಲಿಕೆಯೊಂದಿಗೆ ನಗರದ ಸ್ವಚ್ಛತೆಗೆ ಸಹಕರಿಸಬೇಕೆಂದು ಪಾಲಿಕೆ ಅಧಿಕಾರಿಗಳು ವಿನಂತಿಸಿದರು .

Read More »

15 ಲಕ್ಷ ವೆಚ್ಚದ ಕಾಮಗಾರಿಗೆ ಸಚಿವರಿಂದ ಪೂಜೆ ಸಲ್ಲಿಕೆ

ನವಲಗುಂದ: ತಾಲೂಕಿನ ಬ್ಯಾಲ್ಯಾಳ ಗ್ರಾಮದಿಂದ ದಡೇರಕೊಪ್ಪ ಗ್ರಾಮದ ಸಂಪರ್ಕ ರಸ್ತೆಗೆ ಸುಮಾರು 15 ಲಕ್ಷ ವೆಚ್ಚದ ಕಾಮಗಾರಿಗೆ ಸಚಿವ ಎಸ್ಪಿ ಜನನ ಗುದ್ದಲಿ ಪೂಜೆ ನೆರವೇರಿಸಿದರು . ಇದೆ ವೇಳೆಯಲ್ಲಿ ಗ್ರಾಮಸ್ಥರ ಕುಂದು ಕೊರತೆಗಳನ್ನ ಸಚಿವರು ಆಲಿಸಿದರು . ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು. .

Read More »

ದಲಿತರ ಮನೆಯಲ್ಲಿ ಊಟ ಮಾಡಿದ ಆದಿತ್ಯನಾಥ್

ಲಕ್ನೋ:ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಶುಕ್ರವಾರ ಅಯೋಧ್ಯೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೊಳೆಗೇರಿಯ ದಲಿತರ ಮನೆಯಲ್ಲಿ ಊಟ ಮಾಡಿದರು. ತಮ್ಮ ಸರ್ಕಾರದ ಅತ್ಯುನ್ನತ ಔಚಿತ್ಯದ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ಅವರ ದೃಷ್ಟಿಗೆ ಅನುಗುಣವಾಗಿ, ಮುಖ್ಯಮಂತ್ರಿಗಳು ತಮ್ಮ ಊಟದ ನಂತರ ದಲಿತ ಪ್ರಾಬಲ್ಯವಿರುವ ಪ್ರದೇಶದಲ್ಲಿ ಮಣಿರಾಮ್ ಮತ್ತು ಅವರ ಕುಟುಂಬದೊಂದಿಗೆ ಸಂವಾದ ನಡೆಸಿದರು.

Read More »

ಪಿಎಸ್‌ಐ ಅಕ್ರಮ : ಕಿಂಗ್‌ಪಿನ್ ಹೆಸರು ಹೇಳಿದರೆ ರಾಜ್ಯ ಸರ್ಕಾರವೇ ಬಿದ್ದುಹೋಗುತ್ತದೆ

ಹಾಸನ: ಪಿಎಸ್‌ಐ ನೇಮಕಾತಿಯ ಅಕ್ರಮದ ಕಿಂಗ್‌ಪಿನ್ ಹೆಸರು ಹೇಳಲು ಸಾಧ್ಯನಾ..? ಕಿಂಗ್‌ಪಿನ್ ಹೆಸರು ಹೇಳಿದರೆ ರಾಜ್ಯ ಸರ್ಕಾರವೇ ಬಿದ್ದುಹೋಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಚನ್ನರಾಯಪಟ್ಟಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿದ ಅವರು. ಪಿಎಸ್ ಐ ಹಗರಣದ ಬಗ್ಗೆ ಯಾರೂ ಬಿಜೆಪಿಯಲ್ಲಿ ಮಾತನಾಡುತ್ತಿಲ್ಲ. ಅಲ್ಲಿನ ಭವಿಷ್ಯತ್ ನಾಯಕನ ಬಗ್ಗೆ ಮಾತನಾಡುವ ಧೈರ್ಯ ಯಾರಿಗೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಕುಟುಕಿದರು.

Read More »

ಮನೆ ಬಾಗಿಲಿಗೆ ಬರಲಿದೆ ಜಾನುವಾರುಗಳಿಗೆ ‌ಚಿಕಿತ್ಸೆ ವ್ಯವಸ್ಥೆ : ಪ್ರಭು ಚೌವ್ಹಾಣ್

ಬೆಂಗಳೂರು : ರೈತನ ಮನೆ ಬಾಗಿಲಲ್ಲೇ ಜಾನುವಾರುಗಳಿಗೆ ಚಿಕಿತ್ಸೆ ಒದಗಿಸುವ ಮಹತ್ವಾಕಾಂಕ್ಷಿ ಪಶು ಸಂಜೀವಿನಿ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಂಜೂರು ಮಾಡಿರುವ 275 ಸಂಚಾರಿ 7 ರ ಇಂದು ಲೋಕಾರ್ಪಣೆಗೊಳ್ಳಲಿವೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವ ಪ್ರಭು ಚೌವ್ಹಾಣ್, 70 ಸಂಚಾರಿ ಪಶು ಚಿಕಿತ್ಸಾ ವಾಹನಗಳಿಗೆ ಕೇಂಧ್ರ ಸಚಿವ ಪರ್ಷೋತ್ತಮ ರೂಪಾಲ ಹಾಗೂ ಸಿಎಂ ಬಸವರಾಜ …

Read More »