ಕುಂದಗೋಳ: ಆರ್.ಟಿ.ಪಿ.ಸಿ.ಆರ್ ವಿಧಾನದ ಮೂಲಕ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ಪಾಸಿಟಿವ್ ಪ್ರಕರಣ ಕಂಡು ಬಂದಿಲ್ಲಾ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ವಿದ್ಯಾವತಿ ಪಾಟೀಲ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿ ಯಲ್ಲಿ ನಡೆದ ಕೋವಿಡ್-19 ಟಾಸ್ಕ್ ಫೋರ್ಸ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕು -ಆಸ್ಪತ್ರೆಯಲ್ಲಿ ಸಕಲ ಸಿದ್ಧತೆ ಮಾಡಿ ಕೊಂಡಿದ್ದೇವೆ. ಒಟ್ಟು 100 ಹಾಸಿಗೆ, 11 ವೆಂಟಿಲೇಟರ್, 25 3, 133, 643 20, 1 ಪಿ.ಎಸ್.ಎ ಆಕ್ಸಿಜನ್ -ಪ್ಲಾಂಟ್, 1 ಎಲ್.ಎಂ.ಒ ಆಕ್ಸಿಜನ್ ಟ್ಯಾಂಕ್ ಇವೆ’ ಎಂದರು.
ಕೆಲವು ಉಪಕರಣಗಳನ್ನು ರಿಪೇರಿ ಮಾಡಿಸಿದ್ದೇವೆ. ಸದ್ಯ ಒಂದು ಆಂಬುಲೆನ್ಸ್ ಇದ್ದು, ಅಗತ್ಯವಿದ್ದರೆ ನಮ್ಮ ವಾಹನಗಳನ್ನು ಉಪಯೋಗಿಸ ಲಾಗುವುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಟೆಸ್ಟ್ ಕಿಟ್‌ಗಳ ಕೊರತೆ ಇದೆ. ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರಿಂದ ಜಾಗೃತಿ ಮೂಡಿಸಲಾಗುತ್ತಿದೆ. 60 ವರ್ಷ ಮೇಲ್ಪಟ್ಟವರು ಮತ್ತು ಗರ್ಭಿಣಿಯರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಯಾವುದೇ ಸಭೆಗಳಲ್ಲಿ ಭಾಗವಹಿಸಬಾರದು’ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





