ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇ. ಈ ಹಿನ್ನಲೆಯಲ್ಲಿ ಕೆಜಿಎಫ್ 2 ಚಿತ್ರತಂಡ ಯಶ್ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಯಶ್ ಬರ್ತ್ ಡೇಗೆ ಕೆಜಿಎಫ್ 2 ಸಿನಿಮಾ ಟೀಸರ್ ಹೊರಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಈಗ ಅದು ಸುಳ್ಳಾಗಿದೆ. ಇದರ ಬದಲು ಫ್ಯಾನ್ಸ್ ಖುಷಿಯಾಗಲೆಂದು ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
Read More »ಅಣ್ಣಾಮಲೈ ಚುನಾಯಿತ ಪ್ರತಿನಿಧಿಯಲ್ಲ
ಬೆಂಗಳೂರು : ಅಣ್ಣಾಮಲೈ ಚುನಾಯಿತ ಪ್ರತಿನಿಧಿಯಲ್ಲ, ಅವರು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಮಾತ್ರ. ಸರಕಾರದ ಭಾಗವಲ್ಲ. ತಮಿಳುನಾಡಿನಲ್ಲಿ ಸರಕಾರದ ಭಾಗವಾಗಿರುವುದು ಕಾಂಗ್ರೆಸ್ ಎಂಬುದು ಸಿದ್ದರಾಮಯ್ಯನವರಿಗೆ ಗೊತ್ತಿಲ್ಲವೇ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜಕೀಯ ಕಾರಣಕ್ಕಾಗಿ ಈ ಆರೋಪ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಹಂಚಿಕೆಯಾದ ನೀರಿನ ಬಗ್ಗೆ ವಿವಾದ ತೆಗೆಯಬೇಡಿ ಎಂದು ತಮಿಳುನಾಡು ಕಾಂಗ್ರೆಸ್ ಶಾಸಕರಿಗೆ ಮೊದಲು ಬುದ್ಧಿ ಹೇಳಿ ಎಂದು ಟೀಕಿಸಿದರು.
Read More »ಕರ್ತವ್ಯನಿರತ ಸಿಆರ್ಪಿಎಫ್ ಯೋಧ ಸಾವು
ಕೋಲಾರ: ಹೃದಯಾಘಾತದಿಂದ ಕರ್ತವ್ಯನಿರತ ಸಿಆರ್ಪಿಎಫ್(CRPF) ಯೋಧ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಅನಿಗಾನಹಳ್ಳಿಯ ಯೋಧ ಸುರೇಶ್(45) ಮೃತಪಟ್ಟಿದ್ದಾರೆ. ನಿನ್ನೆ ಸಂಜೆ (ಜನವರಿ, 07) ಜಾರ್ಖಂಡ್ನ ಮಿಲಿಟರಿ ಕ್ಯಾಂಪ್ನಲ್ಲಿ ತರಬೇತಿ ನೀಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
Read More »ಲಾಕ್ ಡೌನ್ ಇಲ್ಲಾ : ಸುಧಾಕರ್
ಬೆಂಗಳೂರು : ಕೊರೋನಾ ದಿನ ದಿನದಿಂದಕ್ಕೆ ಏರಿಕೆ ಕಾಣುತ್ತಿದ್ದುದು ಇದೀಗ ವಿಕೆಂಡ್ ಲಾಕ್ ಮಾಡಲಾಗಿದ್ದು ಎಲ್ಲರಲೂ ಆತಂಕ ಮನೆ ಮಾಡಿದೆ. ಇದೇ ವೇಳೆ ಮಾತಾಡಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಇದೇ ವೇಳೆ ಲಾಕ್ ಡೌನ್ ಔಟ್ಡೇಟೆಡ್ ನೀತಿ. ಹಾಗಾಗಿ ಇನ್ನು ಮುಂದೆ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಇರುವುದಿಲ್ಲ. ಇನ್ನೇನಿದ್ರು ನಿರ್ಬಂಧ, ನಿಯಮಗಳ ಕಟ್ಟುನಿಟ್ಟಿನ ಪಾಲನೆಯಷ್ಟೆ ಅಂತ ಹೇಳಿದ್ದಾರೆ.
Read More »ಡಿಕೆಶಿಗೆ ಯೋಗೇಶ್ವರ್ ಟಾಂಗ್
ಬೆಂಗಳೂರು : ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಪಕ್ಷದ ವರಿಷ್ಟರು ಎಲ್ಲಿ ಸ್ಪರ್ಧೆ ಮಾಡು ಎನ್ನುತ್ತಾರೋ ಅಲ್ಲಿಂದ ಸ್ಪರ್ಧೆಮಾಡುವುದಕ್ಕೆ ಸಿದ್ದನಿದ್ದೇನೆ. ಒಂದು ವೇಳೆ ಕನಕಪುರದಿಂದ ಸ್ಪರ್ಧೆ ಮಾಡು ಎಂದರೂ ಸ್ಪರ್ಧಿಸಲು ನಾನು ಸಿದ್ಧ ಎಂದು ಹೇಳುವ ಮೂಲಕ ಮೇಲ್ಮನೆ ಸದಸ್ಯ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಲು ಸಿದ್ಧನಿದ್ದೇನೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
Read More »2 ಕೋಟಿ ಚಿಣ್ಣರಿಗೆ ಲಸಿಕೆ: ಕೇಂದ್ರ ಆರೋಗ್ಯ ಸಚಿವಾಲಯ
ಕೊರೋನಾ ದಿನ ದಿನದಿಂದಕ್ಕೆ ಏರಿಕೆ ಕಾಣುತ್ತಿದ್ದುದು ಇದೀಗ ವಿಕೆಂಡ್ ಲಾಕ್ ಮಾಡಲಾಗಿದ್ದು ಎಲ್ಲರಲೂ ಆತಂಕ ಮನೆ ಮಾಡಿದೆ. 15ರಿಂದ 18 ವರ್ಷದೊಳಗಿನ 2 ಮಕ್ಕಳಿಗೆ ಮೊದಲ ಡೋಜ್ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದಲ್ಲಿ 1 ಲಕ್ಷಕ್ಕಿಂತ ಅಧಿಕ ಸೋಂಕು ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನವನ್ನು ತೀವ್ರಗೊಳಿಸಿದೆ.
Read More »ಸಿಲಿಕಾನ್ ಸಿಟಿಯಲ್ಲಿ ಚಿಣ್ಣರಗೆ ಏರಿಕೆಕೊಂಡ ಕೋವಿಡ್
ಬೆಂಗಳೂರು:ಕೊರೋನಾ ದಿನ ದಿನದಿಂದಕ್ಕೆ ಏರಿಕೆ ಕಾಣುತ್ತಿದ್ದುದು ಇದೀಗ ವಿಕೆಂಡ್ ಲಾಕ್ ಮಾಡಲಾಗಿದ್ದು ಎಲ್ಲರಲೂ ಆತಂಕ ಮನೆ ಮಾಡಿದೆ. ದೇಶದಲ್ಲಿ ಇಂದು 149986 ಹೊಸ ಕೊರೋನಾ ಸೋಂಕು ಪ್ರಕರಣಗಳು ಕಂಡು ಬಂದಿದ್ದು, 285 ಜನ ಇಂದು ದೇಶದಲ್ಲಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ರಾಜಧಾನಿ ಬೆಂಗಳೂರು ಕೋವಿಡ್ ಹಾಟ್ ಸ್ಪಾಟ್ ಆಗುವ ಲಕ್ಷಣಗಳು ಗೋಚರಿಸುತ್ತಿದೆ.ಸಿಲಿಕಾನ್ ಸಿಟಿಯ ಚಿಣ್ಣರ ಮೇಲೆ ಕೋವಿಡ್ ಕರಿ ನೆರಳು ಬಿದ್ದಿದೆ. ಕಳೆದ ಒಂದು ವಾರದಲ್ಲಿ 2,628 ಕೇಸ್ ಗಳು …
Read More »ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟ
ನವದೆಹಲಿ: ಕೇಂದ್ರ ಚುನಾವಣಾ ಆಯೋಗವು ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡದ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಶನಿವಾರ (ಜ.8) ಮಧ್ಯಾಹ್ನ 3.30ಕ್ಕೆ ಪ್ರಕಟಿಸಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿಯೇ ಕೇಂದ್ರ ಚುನಾವಣಾ ಆಯೋಗ 5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.
Read More »ಸೇಂಟ್ ಅಂಥೋನಿ ಶಾಲೆಯಲ್ಲಿ 2 ಪಾಸಿಟಿವ್ ಪ್ರಕರಣ ಪತ್ತೆ
ಹುಬ್ಬಳ್ಳಿ: ಶಾಲೆಯಲ್ಲಿ ಇಬ್ಬರು ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಶಾಲೆಯೊಂದನ್ನು ಸೀಲ್ ಡೌನ್ ಮಾಡಿ ಆದೇಶ ಹೊರಡಿಸಿದೆ. ವಿದ್ಯಾನಗರದ ಸೇಂಟ್ ಅಂಥೋನಿ ಶಾಲೆಯಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿರುವ ಹಿನ್ನಲೆಯಲ್ಲಿ ಈಗಾಗಲೇ 80% ವಿದ್ಯಾರ್ಥಿಗಳ ಕೋವಿಡ್ ಟೆಸ್ಟ್ ಕೂಡ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಈಗಾಗಲೇ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು, ಶಾಲೆ ಕಾಲೇಜುಗಳು ಬಂದ ಮಾಡಲಾಗಿದೆ. ಅಲ್ಲದೇ ಜಿಲ್ಲಾಡಳಿತದ ಮುಂದಿನ ಆದೇಶದವರೆಗೂ ವಿದ್ಯಾನಗರದ ಸೇಂಟ್ ಅಂಥೋನಿ …
Read More »ಆಸ್ತಿ ವಿಚಾರಕ್ಕೆ ಯುವಕನಿಗೆ ಚಾಕು ಇರಿತ; ಗಂಭೀರ ಗಾಯಗೊಂಡ ಯುವಕ
ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ಯುವಕನಿಗೆ ಚಾಕು ಹಾಕಿರುವ ಘಟನೆಯೊಂದು, ಹಳೇ ಹುಬ್ಬಳ್ಳಿ ಕೃಷ್ಣಪೂರದಲ್ಲಿ ತಡರಾತ್ರಿ ನಡೆದಿದೆ. ನಿತಿನ್ ಅರುಣ ಚಂದಡಕರ್ ಚಾಕು ಇರಿಕ್ಕೊಳಗಾದ ಯುವಕ. ಗಣೇಶ್ ವಿನೋದ ಚಂದಡಕರ್ ಎಂಬತಾನೇ ಚಾಕು ಇರಿದ ಯುವಕ, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಚಾಕು ಹಾಕಿರುವುದಾಗಿ ನಿತಿನ್ ಕುಟುಂಬಸ್ಥರ ಆರೋಪ ಮಾಡುತ್ತಿದ್ದಾರೆ. ಚಾಕು ಇರಿದ ಪರಿಣಾಮ ಯುವಕನಿಗೆ ಗಂಭಿರ ಗಾಯವಾಗಿದೆ. ಕುಟುಂಬಸ್ಥರು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ.ಈ ಕುರಿತಿ ಹಳೇ ಹುಬ್ಬಳ್ಳಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





