Breaking News

admin

ಬಜೆಟ್‌ ಘೋಷಣೆ ವೇಳಾಪಟ್ಟಿ ನಿಗದಿ‍ಪಡಿಸಲಾಗುವುದು : ಬೊಮ್ಮಾಯಿ

ಬೆಂಗಳೂರು: ಬಜೆಟ್‌ ಘೋಷಣೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಕ್ಕೆ ತಂದು, ಫಲಾನುಭವಿಗಳಿಗೆ ತ್ವರಿತವಾಗಿ ಸೌಲಭ್ಯ ಒದಗಿಸುವುದಕ್ಕಾಗಿ ಎಲ್ಲ ಇಲಾಖೆಗಳಿಗೂ ವೇಳಾಪಟ್ಟಿ ನಿಗದಿ‍ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಪ್ರಸಕ್ತ ವರ್ಷದ ಬಜೆಟ್‌ ಘೋಷಣೆಗಳ ಅನುಷ್ಠಾನದ ಕುರಿತು ಪ್ರಮುಖ ಇಲಾಖೆಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಬುಧವಾರ ಇಡೀ ದಿನ ಪರಿಶೀಲನಾ ಸಭೆಗಳನ್ನು ನಡೆಸಿದರು. ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ, ‘ವೇಳಾಪಟ್ಟಿಯ ಪ್ರಕಾರವೇ ಬಜೆಟ್‌ ಅನುಷ್ಠಾನಕ್ಕೆ ಬರಲಿದೆ’ ಎಂದರು.

Read More »

ಕೊರೋನಾ ಆತಂಕದಲ್ಲಿರುವವರಿಗೆ ಮತ್ತೊಂದು ಬಿಗ್ ಶಾಕ್

ನವದೆಹಲಿ: ಇಸ್ರೇಲ್‌ನಲ್ಲಿ ನಡೆಸಿದ ಹೊಸ ಮಾಡೆಲಿಂಗ್ ಅಧ್ಯಯನದ ಪ್ರಕಾರ, ಓಮಿಕ್ರಾನ್ ಸಬ್‌ವೇರಿಯಂಟ್‌ಗಳು ಮುಂದಿನ ಒಂದೆರಡು ತಿಂಗಳುಗಳಲ್ಲಿ ಹರಡಲಿವೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಸೈನ್ಸ್ ಆಫ್ ದಿ ಟೋಟಲ್ ಎನ್ವಿರಾನ್‌ಮೆಂಟ್ ಜರ್ನಲ್‌ನಲ್ಲಿ ಕಳೆದ ವಾರ ಪ್ರಕಟವಾದ ಸಂಶೋಧನೆಯು, ಡೆಲ್ಟಾ ಅದರ ಹಿಂದಿನ ರೂಪಾಂತರಗಳನ್ನು ನಿಯಂತ್ರಿಸಿದ್ದರೂ ಕೂಡ ಈಗ ಮತ್ತೆ ಹೊಸ ರೂಪಾಂತರದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಅಧ್ಯಯನ ಹೇಳಿದೆ.

Read More »

ವಿವಿಧ ದೇವಸ್ಥಾನಕ್ಕೆ ತೆರಳಿ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಜಾಗೃತಿ ಮೂಡಿಸಿದರು

ಧಾರವಾಡ : ರಾಜ್ಯಾದ್ಯಂತ ದೇವಸ್ಥಾನದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಸುಪ್ರಭಾತ ಮೋಳಗಿಸುವಂತೆ ಧಾರವಾಡ ನಗರದ ವಿವಿಧ ದೇವಸ್ಥಾನಕ್ಕೆ ತೆರಳಿ ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಜಾಗೃತಿ ಮೂಡಿಸಿದರು. ಧಾರವಾಡ ಗಾಂಧಿ ಚೌಕ್ ದತ್ತಾತ್ರೇಯ ದೇವಾಲಯ, ಲೈನ್ ಬಜಾರ ಹನುಮಂತ ದೇವರ ದೇವಸ್ಥಾನ, ಟಿಕಾರೆ ರಸ್ತೆ ರಾಮ ಮಂದಿರ, ಶ್ರೀನಗರ ಶಿವಾಲಯದಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಶ್ರೀ ರಾಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಶ್ರೀ …

Read More »

ಮಳೆ ಮಾಡಿದ ಅವಾಂತರ ಮರ ಬಿದ್ದು ವ್ಯಕ್ತಿ ಸಾವು

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಅಕಾಲಿಕವಾಗಿ ಸುರಿದ ಧಾರಾಕಾರ ಮಳೆಯು ಒಂದಿಲ್ಲೊಂದು ರೀತಿಯಲ್ಲಿ ಅವಾಂತರ ಸೃಷ್ಟಿಸಿದ್ದು , ಮಳೆಗೆ ಮರ ಬಿದ್ದಿರುವ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರ ಮನೆಯ ಹತ್ತಿರದ ದೇಸಾಯಿ ಕ್ರಾಸ್ ನಲ್ಲಿ ನಡೆದಿದೆ . ಬಿರುಗಾಳಿ ಸಹಿತ ಸುರಿದ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು , ಚಲಿಸುತ್ತಿದ್ದ ಆಟೋ ಮೇಲೆ ಮರವೊಂದು ಉರುಳಿ ಬಿದ್ದಿರುವ ಪರಿಣಾಮ ಆಟೋದಲ್ಲಿದ್ದ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದಾನೆ . …

Read More »

ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿ ಆತ್ಮಹತ್ಯೆ

ಹುಬ್ಬಳ್ಳಿ: ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿಯೊಬ್ಬ ಹೊಲದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಕೀರೆಸೂರ ಗ್ರಾಮದಲ್ಲಿ ನಡೆದಿದೆ. ಭೀಮಪ್ಪ ರಂಗಪ್ಪ ಯಂಡಿಗೇರಿ (30) ಎಂದು ಗುರುತಿಸಲಾಗಿದ್ದು, ಈ ವ್ಯಕ್ತಿ ಕುರಿ ಕಾಯುತಿದ್ದ ಎನ್ನಲಾಗಿದೆ. ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

Read More »

ಮೆ.7 ಕ್ಕೆ ಕ್ಯಾಂಪಸ್ ಸಂದರ್ಶನ

ಹುಬ್ಬಳ್ಳಿ : ನಗರದ ಗ್ಲೋಬಲ್ ಬಿಸಿನೆಸ್ ಸ್ಕೂಲ್ ನಲ್ಲಿ ಮೇ 7 ಮುಂಜಾನೆ 10ಕ್ಕೆ ಜಸ್ಟ್ ಡೈಲ್ ಕಂಪನಿ ವತಿಯಿಂದ ಕ್ಯಾಂಪಸ್ ಸಂದರ್ಶನ ನಡೆಯಲಿದೆ ಎಂದು ಆಯೋಜಕ ಬಿ ಆರ್ ಶೇಟ್ಟಿ ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೋವಿಡ ಹಿನ್ನಲೆಯಲ್ಲಿ ಅನೇಕರು ನಿರುದ್ಯೋಗಿಗಳಾಗಿದ್ದರು ಈ ಉದ್ದೇಶದಿಂದ ಪದವೀಧರರು, ಸ್ನಾತಕೋತ್ತರ ಪದವೀಧರರು ಮತ್ತು ೩೦ ವರ್ಷ ವಯೋಮಿತಿ ಹೊಂದಿದ ಯಾವೂದೆ ಪದವಿ ಪಡೆದ ಅಭ್ಯರ್ಥಿಗಳು ಪಾಲ್ಗೋಳ್ಳಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಮೋ.968621729, 9008031235 …

Read More »

ಮಳೆ ಗಾಳಿಗೆ ಧರೆಗುರಿಳಿದ ಮರ

ಹುಬ್ಬಳ್ಳಿ : ಇಂದು ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಹುಬ್ಬಳ್ಳಿ ಜನರ ಜೀವನ ಅಸ್ತವ್ಯಸ್ತಗೊಂಡ ನಗರದ ವಿದ್ಯಾನಗರದ ಪ್ರಗತಿ ಕಾಲೋನಿಯಲ್ಲಿ ಮರವೋಂದು ಬಾರಿ ಪ್ರಮಾಣದ ಗಾಳಿಗೆ ನೆಲಕ್ಕುರುಳಿದ್ದು ಕೇಲ ಸಮಯ ರಸ್ತೆ ಬಂದ ಆಗಿ ಸಂಚಾರ ವ್ಯವಸ್ಥೆ ಇಲ್ಲದಾಗಿತ್ತು. ಇನ್ನು ಬಿಸಿಲಿನ ತಾಪಕ್ಕೆ ಬೆಂಡಾಗಿದ್ದ ಜನರಿಗೆ ಮಳೆರಾಯ ತಂಪು ನೀಡಿದ್ದಾನೆ.ಇನ್ನೂ ಬೇಸಿಗೆ ಸಮಯದಲ್ಲಿ ಮಳೆಯ ಅವಶ್ಯಕತೆ ಇಲ್ಲದಿದ್ದರೂ ಸಹ ಮಳೆರಾಯ ತನ್ನ ಆರ್ಭಟ ಮುಂದುವರೆಸಿದ್ದಾನೆ.

Read More »

ಬಿಸಿಲಿನ ತಾಪಕ್ಕೆ ಏಕಾಏಕಿ ಕಾರಿಗೆ ಬೆಂಕಿ

ಹುಬ್ಬಳ್ಳಿ : ಆಕಸ್ಮಿಕವಾಗಿ ಕಾರಿನಲ್ಲ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾದ ಘಟನೆ ಹುಬ್ಬಳ್ಳಿ ಕೊಪ್ಪಿಕಾ ರಸ್ತೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ. ರಾಮರಡ್ಡಿ ತಿರ್ಲಾಪೂರ ನಿವಾಸಿ ಇಂದು ಹುಬ್ಬಳ್ಳಿಗೆ ಕೊಪ್ಪಿಕಾರ್ ರಸ್ತೆಯಲ್ಲಿ ಮದುವೆ ಸಮಾರಂಭಕ್ಕೆ ಬಟ್ಟೆ ಖರೀದಿಸಲು ಬಂದು ಕಾರ್ ಪಾರ್ಕಿಂಗ್ ನಲ್ಲಿ ನಿಲ್ಲಿಸಿದಾಗ ಬಿಸಿಲಿನ ತಾಪಕ್ಕೆ ಏಕಾಏಕಿ ಕಾರಿನಲ್ಲಿ ಬೆಂಕಿ‌ ಹತ್ತಿದ ಪರಿಣಾಮ ಸಂಪೂರ್ಣವಾಗಿ ಕಾರಿನ ಮುಂಬಾಗ ಸುಟ್ಟಿದೆ.ಇನ್ನೂ ಸ್ಥಳದಲ್ಲೇ ಇದ್ದ ಸ್ಥಳೀಯರ ಸಹಾಯದಿಂದ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ …

Read More »

ಹಿರಿಯ ರಂಗ ಕಲಾವಿದೆ ಲಕ್ಷ್ಮೀಬಾಯಿ ಬಾಳಪ್ಪ ಏಣಗಿ ಇನ್ನೂ ನೆನಪು ಮಾತ್ರ.

ಧಾರವಾಡ: .ನಗರದ ರಜತಗಿರಿ ನಿವಾಸಿ ಹಿರಿಯ ರಂಗ ಕಲಾವಿದೆ ಲಕ್ಷ್ಮೀಬಾಯಿ ಏಣಗಿ (96) ಬುಧವಾರ ನಿಧನರಾದರು. ಅವರಿಗೆ ಪುತ್ರಿ ಇದ್ದಾರೆ. ಏಣಗಿ ಬಾಳಪ್ಪ ಅವರ ಪತ್ನಿ ಹಾಗೂ ನಟರಾಜ ಏಣಗಿ ಅವರ ತಾಯಿಯಾದ ಇವರು ಹಲವು ನಾಟಕ ಹಾಗೂ ಚಲನ ಚಿತ್ರಗಳಲ್ಲೂಯೂ ನಟಿಸಿದ್ದಾರೆ.ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 2 ಘಂ ಗೆ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.

Read More »

ರೈಲ್ವೆ ನೇಮಕಾತಿ, ನಕಲಿ ನೋಟಿಫಿಕೇಶನ್: ಇದರ ವಿರುದ್ಧ ದೂರು ಕೊಟ್ಟು ತನಿಖೆಗೆ ಮುಂದಾದ ರೈಲ್ವೆ ಇಲಾಖೆ

ಹುಬ್ಬಳ್ಳಿ : ರಾಜ್ಯ ಸರ್ಕಾರದ ವ್ಯಾಪ್ತಿಯ ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಅಕ್ರಮ ನೇಮಕಾತಿಯ ಹಗರಣ ಹೊರಬರುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದ ರೇಲ್ವೆ ಇಲಾಖೆಯಲ್ಲೇ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ನೋಟಿಫಿಕೇಶನ್‌ನ್ನೇ ನಕಲಿ ಹೊರಡಿಸಿರುವುದು ಬೆಳಕಿಗೆ ಬಂದಿದೆ. ಇದರ ವಿರುದ್ಧ ದೂರು ನೀಡಲು ರೈಲ್ವೆ ಇಲಾಖೆ ಮುಂದಾಗಿದೆ. ರೇಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇವೆಂದು ನಂಬಿಸಿ ಮೋಸ ಮಾಡುವ ರಾಕೇಟ್‌ಗಳಿರುವ ಸಾಧ್ಯತೆಯನ್ನು ತಳ್ಳಿ ಹಾಕು ವಂತಿಲ್ಲ. ಇಂತಹವರಿಂದ ಹುಷಾರಾಗಿರಿ ಎಂದು …

Read More »