ಧಾರವಾಡ: .ನಗರದ ರಜತಗಿರಿ ನಿವಾಸಿ ಹಿರಿಯ ರಂಗ ಕಲಾವಿದೆ ಲಕ್ಷ್ಮೀಬಾಯಿ ಏಣಗಿ (96) ಬುಧವಾರ ನಿಧನರಾದರು. ಅವರಿಗೆ ಪುತ್ರಿ ಇದ್ದಾರೆ. ಏಣಗಿ ಬಾಳಪ್ಪ ಅವರ ಪತ್ನಿ ಹಾಗೂ ನಟರಾಜ ಏಣಗಿ ಅವರ ತಾಯಿಯಾದ ಇವರು ಹಲವು ನಾಟಕ ಹಾಗೂ ಚಲನ ಚಿತ್ರಗಳಲ್ಲೂಯೂ ನಟಿಸಿದ್ದಾರೆ.ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 2 ಘಂ ಗೆ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

