ಬೆಂಗಳೂರು: ಆ್ಯಂಬಿಡೆಂಟ್ ಕಂಪನಿ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಭಾನುವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಇದೀಗತಾನೆ ಸಿಸಿಬಿ ಕಚೇರಿಗೆ ಅಗಮಿಸಿದ್ದಾರೆ. ವಕೀಲ ಚಂದ್ರಶೇಖರ್ ಜೊತೆಗೆ ಅವರು ಆಗಮಿಸಿದ್ದಾರೆ.ನಾನು ಬೆಂಗಳೂರಿನಲ್ಲೇ ಇದ್ದೆ. ಇಲ್ಲಿ ಬಿಟ್ಟು ಬೇರೆ ಕಡೆ ಹೋಗಿಲ್ಲ. ಹೋಗೋ ಅವಶ್ಯಕತೆಯೂ ಇಲ್ಲ. ಪೂರ್ವಾಗ್ರಹ ಪೀಡಿತರಾಗಿ, ದುರುದ್ದೇಶದಿಂದ ಪೊಲೀಸರು ಈ ರೀತಿ ಮಾಡುತ್ತಿದ್ದಾರೆ ಅಂತಾ ಅನುಮಾನ ಬಂದ ಕಾರಣ ನಾನು ಇಲ್ಲಿವರೆಗೂ ಸುಮ್ಮನಿದ್ದೆ. ನಮ್ಮ ಲಾಯರ್ ಹೇಳಿದ ಪ್ರಕಾರ ನಾನು ನಡೆದುಕೊಂಡಿದ್ದೇನೆ. ನಾಳೆ ಭಾನುವಾರ ವಿಚಾರಣೆಗೆ ಬರುವಂತೆ ನಿನ್ನೆ ನೋಟಿಸ್ ಕೊಟ್ಟಿದ್ದಾರೆ. ಆದ್ರೆ ನಾನು ಇವತ್ತೇ ಸಿಸಿಬಿ ಕಚೇರಿಗೆ ಹಾಜರಾಗುತ್ತಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ರಾಜಕೀಯ ಷಡ್ಯಂತ್ರಕ್ಕೆ ಒಳಪಡದೇ, ಪ್ರಾಮಾಣಿಕವಾಗಿ ವಿಚಾರಣೆ ನಡೆಸುತ್ತಾರೆಂಬ ನಂಬಿಕೆ ನನಗೆ ಇದೆ ಅಂತಾ ಸಿಸಿಬಿ ಕಚೇರಿಗೆ ತೆರಳುವ ಮುನ್ನ ರೆಡ್ಡಿ ವಿಡಿಯೋ ಸಂದೇಶ ನೀಡಿದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news





