Breaking News

admin

ಹೆತ್ತ ತಂದೆಯನ್ನೇ ಕೊಲೆ ಮಾಡಿದ ಪಾಪಿ ಮಗ

ಧಾರವಾಡ : ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ಹೆತ್ತ ಮಗನೇ ತಂದೆಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ . ಪುಂಡಲೀಕ ಒಂಟಿಗಡ ಎಂಬಾತನೇ ಮಗನಿಂದ ಹತ್ಯೆಗೀಡಾದವನು.ಪುಂಡಲೀಕ ಪ್ರತಿನಿತ್ಯ ಮದ್ಯ ಕುಡಿದು ಬಂದು ಹೆಂಡತಿ ಜೊತೆ ಜಗಳವಾಡುತ್ತಿದ್ದ . ಬುಧವಾರ ಇದೇ ರೀತಿ ಪುಂಡಲೀಕ ಜಗಳವಾಡಿದ್ದಾನೆ . ಈ ಜಗಳ ವಿಕೋಪಕ್ಕೆ ತಿರುಗಿ ಸ್ವತಃ ಪುಂಡಲೀಕನ ಮಗನೇ ಕೊಡಲಿಯಿಂದ ಹತ್ಯೆ ಮಾಡಿದ್ದಾನೆ . ಹತ್ಯೆ ಮಾಡಿದ ಮಗ ಅಪ್ರಾಪ್ತನಾಗಿದ್ದಾನೆ . ಘಟನಾ ಸ್ಥಳಕ್ಕೆ …

Read More »

ಮಹಾಂತೇಶ ಹಿರೇಮಠಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರಧಾನ

ಧಾರವಾಡ: ನಗರದ ಆಲೂರು ವೆಂಕಟರಾವ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಸಭಾರಂಭದಲ್ಲಿ ಇಲ್ಲಿನ ಜಿಲ್ಲಾ ಪೊಲೀಸ್ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಮಹಾಂತೇಶ ಹಿರೇಮಠ ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ . ಕೃಷ್ಣಕಾಂತ ಹಾಗೂ ಅಧಿಕಾರಿಗಳು , ಲಿಪಿಕ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ .

Read More »

ಕಮಡೊಳ್ಳಿ ಗ್ರಾಮದಲ್ಲಿ ಇಪ್ತಿಯಾರ ಕೂಟಕ್ಕೆ ಚಾಲನೆ

ಕಮಡೊಳ್ಳಿ ಗ್ರಾಮದಲ್ಲಿ ಬಡವರ ಬಂಧು ಗೋವಿಂದಪ್ಪ ಹ ಜುಟ್ಟಲ ಜನಸೇವಾ ಸಮಿತಿ ವತಿಯಿಂದ ಗ್ರಾಮದ ಯುವ ಮುಖಂಡರಾದ ಚಂದ್ರಶೇಖರ ಗೋ ಜುಟ್ಟಲ ಇವರು ರಂಜಾನ ಹಬ್ಬದ ಪ್ರಯುಕ್ತ ಕಮಡೊಳ್ಳಿ ಗ್ರಾಮದಲ್ಲಿ ಎಲ್ಲ ಮುಸ್ಲಿಂ ಸಮಾಜ ಬಾಂಧವರಿಗೆ ಇಪ್ತಿಯಾರ ಕೂಟವನ್ನು ಚಾಲನೆ ನೀಡಲಾಯಿತು .

Read More »

ಪೊಲೀಸರಿಂದ ದಿಂಗಾಲೇಶ್ವರ ಶ್ರೀ ಹೋರಾಟವನ್ನು ತಡೆದಿಲ್ಲ : ಸಿ.ಸಿ.ಪಾಟೀಲ

ನರಗುಂದ: ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಸ್ವತಂತ್ರರಾಗಿದ್ದಾರೆ. ಆದ್ದರಿಂದ ದಿಂಗಾಲೇಶ್ವರ ಶ್ರೀಗಳನ್ನು ನರಗುಂದ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ತಡೆದಿರಬಹುದು. ಆದರೆ ನಾನು ಯಾವುದೇ ರೀತಿಯ ಪ್ರಭಾವ ಬಳಸಿ ಪೊಲೀಸರಿಂದ ದಿಂಗಾಲೇಶ್ವರ ಶ್ರೀ ಹೋರಾಟವನ್ನು ತಡೆದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಚೆಗೆ ಗದಗ ತೋಂಟದಾರ್ಯ ಮಠಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಿಂ.ಸಿದ್ಧಲಿಂಗ ಶ್ರೀಗಳ ಸ್ಮರಣಾರ್ಥವಾಗಿ ಪ್ರತಿವರ್ಷ ಭಾವೈಕ್ಯ ದಿನಾಚರಣೆ ಆಚರಿಸುವುದಾಗಿ …

Read More »

ಮೇ 15ರಿಂದ ಶಾಲಾ ತರಗತಿ ಆರಂಭಿಸುವ ನಿರ್ಧಾರ : ನಾಗೇಶ್

‌ಮಂಗಳೂರು: ಕೊರೊನಾ ನಾಲ್ಕನೇ ಅಲೆ ಬರುವ ಸಾಧ್ಯತೆ ಇದ್ದರೂ ಮೇ 15ರ ಬಳಿಕ ಶಾಲಾ ತರಗತಿ ಆರಂಭಿಸುವ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು. 3ನೇ ಅಲೆಯ ಸಂದರ್ಭದಲ್ಲಿ ಆತಂಕ ಇದ್ದರೂ ಶಾಲೆಗಳನ್ನು ತೆರೆದು ತರಗತಿ ನಡೆಸಿದ್ದೇವೆ. ಶಿಕ್ಷಣದ ಗುಣಮಟ್ಟ ಹಾಗೂ ಕಲಿಕಾ ಚೇತರಿಕೆ ಆಗ ಬೇಕಾಗಿರುವುದರಿಂದ ಈಗ ತರಗತಿಗಳನ್ನು ಬೇಗನೆ ಆರಂಭಿಸುವುದು ಅಗತ್ಯ ಎಂದವರು ಬುಧವಾರ ಇಲ್ಲಿ ಸುದ್ದಿಗಾರರಿಗೆ …

Read More »

ಕೋವಿಡ್ 4ನೇ ಅಲೆ : ಬೆಂಗಳೂರುನಲ್ಲಿ ಬೂಸ್ಟರ್ ಡೋಸ್ ಅಭಾವ

ಬೆಂಗಳೂರು: ಕೋವಿಡ್ 4ನೇ ಅಲೆ ಬಗ್ಗೆ ಎಚ್ಚರವಾಗಿರಿ ಅಂತ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಇಲ್ಲಿಗೆ ಮತ್ತೊಂದು ಅಲೆ ಬರೋದು ನಿಶ್ಚಿತ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾ ಬೂಸ್ಟರ್ ಡೋಸ್ ಅಭಾವ ಎದುರಾಗಿದೆ. ಈಗಾಗಲೇ ಈ ಬಗ್ಗೆ ತೆಗೆದುಕೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ ಅಂತ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನ ಬಗ್ಗೆ ಹೆಚ್ಚಿನ ಜಾಗೃತೆ ತೆಗೆದುಕೊಳ್ಳಲು ತಜ್ಞರು ಸೂಚಿಸಿದ್ದಾರೆ.

Read More »

ರೈತರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ

ಮಂಗಳೂರು: ಡೀಮ್ಡ್ ಫಾರೆಸ್ಟ್ ನಿಯಮ ಸರಳಗೊಳಿಸಿ ರಾಜ್ಯದ ರೈತರ ಆತಂಕ ದೂರ ಮಾಡಲು ಸರ್ಕಾರ ಕ್ರಮಕೈಗೊಂಡಿದೆ. ಮೂಡಬಿದರೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 6.5 ಲಕ್ಷ ಎಕರೆ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ನಿಂದ ಹೊರಗಿಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದ್ದಾರೆ. ರಾಜ್ಯದ ರೈತರಿಗೆ ಅನೇಕ ವರ್ಷಗಳಿಂದ ಡೀಮ್ಡ್ ಫಾರೆಸ್ಟ್ ನಿಯಮದಿಂದ ಆತಂಕ ಉಂಟಾಗಿತ್ತು.

Read More »

ಶಾಲೆ ಆರಂಭ ಕುರಿತು ಬೇಸರ ವ್ಯಕ್ತ ಪಡಿಸಿದ ಪೋಷಕರು… ಯಾಕೆ ಗೊತ್ತಾ?

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಅವಧಿಗೆ ಮೊದಲೇ ಶಾಲೆಗಳನ್ನು ಆರಂಭಿಸಬೇಕು ಎನ್ನುವ ಶಿಕ್ಷಣ ಇಲಾಖೆ ಸೂಚನೆಗೆ ಪೋಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಖಾಸಗಿ ಶಾಲೆಗಳ ಲಾಬಿಗೆ ಸರ್ಕಾರ ಮಣಿಯುತ್ತಿದೆ. ಪ್ರವೇಶ ಶುಲ್ಕ ತೆತ್ತು, ಸಮವಸ್ತ್ರ ಖರೀದಿಸಿದ ಬಳಿಕ ಲಾಕ್​ಡೌನ್ ಘೋಷಿಸುತ್ತಾರೆ. ಲಾಕ್​ಡೌನ್ ಹೇರಿಕೆ ಕಾರಣಕ್ಕೆ ಆನ್​ಲೈನ್ ತರಗತಿ ಆರಂಭಿಸುತ್ತಾರೆ. ಇದು ದೊಡ್ಡ ಹುನ್ನಾರ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.

Read More »

ಬಾಲಿವುಡ್‌ ನಟನ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜಕಾರಣಿಗಳು? ಅದು ಎನ್ನು ಅಂತೀರಾ ಈ ಸುದ್ದಿ ನೋಡಿ?

ಬೆಂಗಳೂರು: ಬಾಲಿವುಡ್‌ ನಟ ಅಜಯ್‌ ದೇವಗನ್‌ ಅವರ ‘ಹಿಂದಿ ರಾಷ್ಟ್ರ ಭಾಷೆ’ ಹೇಳಿಕೆಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದು, ‘ಹಿಂದಿ ಎಂದೆಂದಿಗೂ ನಮ್ಮ ರಾಷ್ಟ್ರೀಯ ಭಾಷೆಯಾಗುವುದಿಲ್ಲ’ ಎಂದಿದ್ದಾರೆ. ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದು ಇತ್ತೀಚೆಗೆ ಸುದೀಪ್‌ ನೀಡಿದ್ದ ಹೇಳಿಕೆಗೆ ಬಾಲಿವುಡ್‌ ನಟ ಅಜಯ್‌ ದೇವಗನ್ ಪ್ರತಿಕ್ರಿಯೆ ವಿವಾದ ಸೃಷ್ಟಿಸಿದೆ.

Read More »

ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ

ಬೆಂಗಳೂರು : ಕಿರಿಯ ಪ್ರಾಥಮಿಕ ಶಾಲಾ ( 1 ರಿಂದ 5 ನೇ ತರಗತಿ) ಪದವೀಧರ ಶಿಕ್ಷಕರಿಗೆ, ಸ್ಪರ್ಧಾತ್ಮಕ ಪರೀಕ್ಷೆಯಿಲ್ಲದೆ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ (6 ರಿಂದ 8 ನೇ ತರಗತಿ) ಬಡ್ತಿ ನೀಡಲು ಬಡ್ತಿ ಪ್ರಮಾಣವನ್ನು ಶೇ.40 ಕ್ಕೆ ಹೆಚ್ಚಿಸಲು ಅನುಮೋದಿಸಿದೆ. ರಾಜ್ಯ ಸರ್ಕಾರವುಉ ಬಡ್ತಿ ಮೂಲಕ ಭರ್ತಿ ಮಾಡುವ ಹುದ್ದೆ ಪ್ರಮಾಣ ಶೇ. 40 ರಷ್ಟು ಹೆಚ್ಚಿಸಲು ನಿರ್ಧರಿಸಿದ್ದು, ಈ ಮೂಲಕ 52 ಸಾವಿರಕ್ಕೂ …

Read More »