Breaking News

ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮ ಉರುಸು :ಯತ್ನಾಳ್


ವಿಜಯಪುರ : ಸಿದ್ದರಾಮೋತ್ಸವ  ವಿಚಾರಕ್ಕೆ ಬಿಜೆಪಿ ನಾಯಕರು ವ್ಯಂಗ್ಯ ಮಾಡುತ್ತಲೇ ಇದ್ದಾರೆ. ದಿನ ಒಬ್ಬ ಒಬ್ಬ ನಾಯಕರು ಸಿದ್ದರಾಮೋತ್ಸವದ ಬಗ್ಗೆ ಕಿಡಿಕಾರುತ್ತಿದ್ದಾರೆ. ಕಾಂಗ್ರೆಸ್​ನವರು  ಮಾಡುತ್ತಿರುವುದು ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮ ಉರುಸು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವ್ಯಂಗ್ಯ ಮಾಡಿದ್ದಾರೆ.

ವಿಜಯಪುರದಲ್ಲಿ ಮಾತಾಡಿದ ಬಸನಗೌಡ ಪಾಟೀಲ ಯತ್ನಾಳ್, ಸಿದ್ದರಾಮಯ್ಯ ಕುಂಕುಮ ಹಚ್ಚಿಕೊಳ್ಳಲಿ, ಪೇಟ ಧರಿಸಲಿ ಹಿಂದೂ ಧರ್ಮದಲ್ಲಿ ಹುಟ್ಟಿದ್ದಾರೆ ಅನ್ನೋ ಕಬರ್ (ಎಚ್ಚರಿಕೆ) ಇರ್ಲಿ ಎಂದ ಯತ್ನಾಳ್ ಹೇಳಿದ್ದಾರೆ. ನಿನ್ನೆ ಅಲ್ಲಿ ನಮಾಜ್ ಮಾಡಿದ್ದೀರಿ, ಇಲ್ಲಿ ಬಂದು ಡೊಳ್ಳು ಮುಂದೆ ಕುಣಿರಿ, ಬಂಡಾರ ಹಚ್ಚಿಕೊಳ್ಳಿ ಅಂದ್ರೆ ನೀವು ಜಾತ್ಯಾತೀತ, ಹಿಂದೂ ಸಂಸ್ಕೃತಿಗೆ ಅಪಮಾನ ಮಾಡಿ ಮುಸ್ಲಿಂ ಟೋಪಿ ಹಾಕಿಕೊಂಡು ಅಡ್ಡಾಡೋದು ಜಾತ್ಯಾತೀತ ಲಕ್ಷಣ ಅಲ್ಲ, ಕುಂಕುಮ ಹಚ್ಚೋಕೆ ಬಂದ್ರೆ, ಪೇಟಾ ಹಾಕೋಕೆ ಬಂದ್ರೆ ತಳ್ತೀರಿ. ಹೀಗಾಗಿ ಇದು ಸಿದ್ದರಾಮ ಉತ್ಸವ ಆಗಲ್ಲ, ಉರುಸ್ ಆಗುತ್ತೆ ಎಂದು ಯತ್ನಾಳ್ ಹೇಳಿದ್ದಾರೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *