Breaking News

admin

ಸಾರ್ವಜನಿಕರಿಗೆ ವಂಚಿಸುತ್ತಿದ್ದ ವ್ಯಕ್ತಿ ಬಂಧನ

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ರಾಜಧಾನಿ ಕಾಲೋನಿ ಕ್ರಾಸ್ ಹತ್ತಿರ ಓಸಿ ಬರೆದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಓರ್ವನನ್ನು ಗೋಕುಲ ರಸ್ತೆಯ ಪೊಲೀಸರು ಬಂಧಿಸಿ ಅವನಿಂದ ೯,೩೯೦ ರೂ. ವಶಪಡಿಸಿಕೊಂಡಿದ್ದಾರೆ.ಹಳೆ ಹುಬ್ಬಳ್ಳಿ ಅರವಿಂದ ನಗರದ ನಿವಾಸಿ ಮೋಹನ ಎ. ಎಂಬಾತ ಬಂಧಿತ ಆರೋಪಿ. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕರೆ ಮೂಲಕ ಅಪರಿಚಿತ ವ್ಯಕ್ತಿಯಿಂದ ಹಣ ವರ್ಗಾವಣೆ

ಹುಬ್ಬಳ್ಳಿ: ಬ್ಯಾಂಕ್ ಖಾತೆಯ ಕೆವೈಸಿ ಅಪಡೇಟ್ ಮಾಡಬೇಕು ಎಂದು ಚನ್ನವ್ವ ಸೂರಿಯವರಿಗೆ ಕರೆ ಮಾಡಿದ ವ್ಯಕ್ತಿ 1,52,934 ರೂ . ವಂಚಿಸಿದ ಪ್ರಕರಣ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅಪರಿಚಿತ ವ್ಯಕ್ತಿ ಚನ್ನವ್ವ ಅವರಿಗೆ ಕರೆ ಮಾಡಿ ನಿಮ್ಮಬ್ಯಾಂಕ್ ಸ್ಥಗಿತವಾಗುತ್ತೆ . ಕೆವೈಸಿ ಅಪಡೇಟ್ ಮಾಡಿಕೊಳ್ಳಬೇಕು ಎಂದು ನಂಬಿಸಿ ಎಟಿಎಂ ಕಾರ್ಡ್ ನಂಬರ ಮತ್ತು ಒಟಿಪಿ ಪಡೆದು ಖಾತೆಯಲ್ಲಿದ್ದ ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ .

Read More »

ವಾಹನ ಡಿಕ್ಕಿ : ಬೈಕ್ ಸವಾರ ಸಾವು

ನವಲಗುಂದ : ಬೈಕ್ ಸವಾರನಿಗೆ ಹಿಂದಿನಿಂದ ಬಂದ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ನವಲಗುಂದ ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ರಿಂಗ್ ರೋಡ್ ಹತ್ತಿರ ನಡೆದಿದೆ. ಬ್ಯಾಹಟ್ಟಿ ಗ್ರಾಮದ ಬಸವರಾಜ ಬೇಲೂರ ( ೨೪ ) ಮೃತಪಟ್ಟವರು . ಅಪಘಾತ ಮಾಡಿದ ವಾಹನ ಸವಾರ ಅಲ್ಲಿಂದ ಪರಾರಿಯಾಗಿದ್ದಾನೆ.ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

Read More »

ವರುಣನ ಆರ್ಭಟಕ್ಕೆ ಎಮ್ಮೆ, ಮಹಿಳೆ ಬಲಿ

ಬೆಳಗಾವಿ: ಜಿಲ್ಲೆಯ ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದ ಕೃಷಿಕ‌ ಮಹಿಳೆ ಸಿಡಿಲು ಬಡೆದು ಮೃತಪಟ್ಟಿದ್ದಾರೆ. ವೆಂಕಟಾಪುರ ಗ್ರಾಮದ ಮಲ್ಲಮ್ಮ ವಟವಟಿ(38) ಮೃತ ಮಹಿಳೆ. ಜಾನುವಾರುಗಳಿಗೆ ಮೇವು ತರುವಾಗ ಸಿಡಿಲು ಬಡಿದು ಮಹಿಳೆ ಮೃತರಾಗಿದ್ದಾರೆ. ಸಿಡಿಲಿಗೆ ಹೊಟ್ಟೆಯ ಭಾಗ ಛಿದ್ರವಾಗಿದೆ. ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಳೆಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ ಎರಡಕ್ಕೇರಿದೆ. ಕಳೆದ ವಾರ ಮರ ಬಿದ್ದು ನಗರದಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿದ್ದರು. ಇನ್ನು ಸವದತ್ತಿ ತಾಲೂಕಿನ …

Read More »

ಟ್ವೀಟ್ ಆರೋಪ : ಶಾಸಕ ಜಿಗ್ನೇಶ್‌ ಮೆವಾನಿ ಬಂಧನ

ಕೋಕ್ರಜಾರ್‌, ಅಸ್ಸಾಂ: ಟ್ವೀಟ್‌ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡ ಗುಜರಾತ್‌ನ ಶಾಸಕ ಜಿಗ್ನೇಶ್‌ ಮೆವಾನಿ ಅವರನ್ನು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮತ್ತೆ ಬಂಧಿಸಲಾಗಿದೆ. ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಆರೋಪದಡಿ ಮೆವಾನಿ ಅವರನ್ನು ಅಸ್ಸಾಂನ ಪೊಲೀಸರು ಏ.19ರಂದು ಬಂಧಿಸಿದ್ದರು. ಕೋರ್ಟ್ ಈ ಬಗ್ಗೆ ಜಾಮೀನು ನೀಡಿತ್ತು. ಸರ್ಕಾರಿ ಸೇವೆಗೆ ಅಡ್ಡಿ ಆರೋಪಗಳಿಗೆ ಸಂಬಂಧಿಸಿ ಮೆವಾನಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.

Read More »

ಹಬ್ಬಗಳ ಕುರಿತು ಮಹತ್ವದ ಆದೇಶ ಹೊರಡಿಸಿದ ಸುಧಾಕರ್

ಬೆಂಗಳೂರು : ರಾಜ್ಯಕ್ಕೆ ಕೊರೊನಾ 4 ನೇ ಅಲೆ ಬರುವ ಬಗ್ಗೆ ಆತಂಕ ಎದುರಾಗಿದ್ದು, ಹಬ್ಬಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತರ ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಎಲ್ಲರೂ ಸರಳ ಮಾರ್ಗಸೂಚಿ ಪಾಲಿಸಲು ಸಮಸ್ಯೆಯಾಗಲ್ಲ ಎಂದರು.

Read More »

ಸುಳ್ಳು ಜಾತಿ ಪ್ರಮಾಣ ಪಡೆದವರಿಗೆ ಬಿಗ್ ಶಾಕ್

ಬೆಂಗಳೂರು: ರಾಜ್ಯದಿಂದ ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರೋ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೀಗೆ ಸುಳ್ಳು ಮಾಹಿತಿ ನೀಡಿ, ಜಾತಿ ಪ್ರಮಾಣಪತ್ರವನ್ನು ಪಡೆದಿರುವ ಕುರಿತಂತೆ ಮಾಹಿತಿ ಸಂಗ್ರಹಿಸಿ, ನೀಡಲು ಇದೀಗ ಆದೇಶಿಸಿದೆ. ಈ ಕುರಿತು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ, ಎಲ್ಲಾ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದು, ರಾಜ್ಯದ ಹಲವಾರು ಕಡೆ ಅನರ್ಹರು ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣಪತ್ರಗಳನ್ನು ಪಡೆದಿರೋ ಬಗ್ಗೆ ದಿನಾಂಕ 20-04-2022ರಂದು ನಡೆದ …

Read More »

ಮೂರನೇ ಮಹಾಯುದ್ಧ ಕುರಿತು ಎಚ್ಚರಿಕೆ ನೀಡಿದ ರಷ್ಯಾ

ಮಾಸ್ಕೋ : ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಇದೀಗ ಮತ್ತೊಂದು ಅಪಾಯದ ಸೂಚನೆ ನೀಡಿದೆ. ಮೂರೇ ದಿನಕ್ಕೆ ಉಕ್ರೇನ್ ಮುಗಿಸಲು ಹೋದ ರಷ್ಯಾ ತಿಂಗಳು ಕಳೆದರೂ ಉಕ್ರೇನ್ ಕೈವಶ ಮಾಡಲು ಸಾಧ್ಯವಾಗಿಲ್ಲ. ಉಕ್ರೇನ್ ಬಹುತೇಕ ಧ್ವಂಸಗೊಂಡಿದ್ದರೂ ಹೋರಾಟ ನಿಂತಿಲ್ಲ. ಇತ್ತ ಹಲವು ದೇಶಗಳು ಉಕ್ರೇನ್‌ಗೆ ಬೆಂಬಲ ನೀಡಿದೆ. ಇದರ ಬೆನ್ನಲ್ಲೇ ಆಕ್ರೋಶಗೊಂಡಿರುವ ರಷ್ಯಾ, ಇದೀಗ ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದೆ.

Read More »

ಕೋವಿಡ್‌ ನಾಲ್ಕನೇ ಅಲೆಯ ಕುರಿತು ಮಹತ್ವ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು: ಕೋವಿಡ್‌ ನಾಲ್ಕನೇ ಅಲೆಯ ಬಗ್ಗೆ ಚರ್ಚೆಯಾಗುತ್ತಿರುವುದು ಹಾಗೂ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿರುವ ಕಾರಣ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿರುವ ಬಗ್ಗೆ ಸೋಮವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಜಾಗಗಳಲ್ಲಿ ಹಾಗೂ ಸಂಚಾರದ ವೇಳೆ ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ.

Read More »

ಮೋದಿ ಹೊರಿ ನಿಧನ

ಹುಬ್ಬಳ್ಳಿ: ಎಲ್ಲರಿಗೂ ಮೋದಿ ಎಂದು ಚಿರಪರಿಚಿತ ವಾದ ಹುಬ್ಬಳ್ಳಿ ಯ ಶ್ರೀ ಸಿದ್ಧಾರೂಢ ಮಠದ ಗೋ ಶಾಲೆ ಯ ಹಿರಿಯ ಹೋರಿ ಇಂದು ಉಭಯ ಸದ್ಗುರುಗಳಿಗೆ ತನ್ನ ಕೊನೆಯ ಸೇವೆ ಸಲ್ಲಿಸಿ ಕೊನೆ ಉಸಿರು ಎಳೆಯಿತು. ಈ ಹೋರಿಯು ಹುಟ್ಟಿನಿಂದಲೇ ಶ್ರೀ ಮಠದಲ್ಲಿ ಬೆಳೆದು ಈ ಹೋರಿ ಶ್ರೀ ಮಠದ ಸಭೆ ಸಮಾರಂಭ ಮೆರವಣಿಗೆ ಗಳಲ್ಲಿ ಮುಂಚೂಣಿ ವಹಿಸಿ ತನ್ನ ಸೇವೆ ಸಲ್ಲಿಸುತಿತ್ತು. ಆತ್ಮಕ್ಕೆ ಶಾಂತಿ ಸಿಗಲಿ ಮತ್ತೆ ಸದ್ಗುರುಗಳ …

Read More »