Breaking News

admin

ಸರ್ಕಾರದ ವಿರುದ್ಧ ದಿಂಗಾಲೇಶ್ವರ ಶ್ರೀಗಳು ಹೊಸ ಬಾಂಬ್‌ ಸ್ಫೋಟ್

ಗದಗ : ಶಿರಹಟ್ಟಿ ಮಠಕ್ಕೆ ಬಿಡುಗಡೆಯಾದ ಅನುದಾನದ ಹಣವನ್ನ ನುಂಗಿ ಹಾಕಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ದಿಂಗಾಲೇಶ್ವರ ಶ್ರೀಗಳು ಹೊಸ ಬಾಂಬ್‌ ಸಿಡಿಸಿದ್ದಾರೆ. ನಗರದಲ್ಲಿ ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಶ್ರೀಗಳು, ‘ಶಿರಹಟ್ಟಿ ಮಠದ ಹೆಸರಲ್ಲಿ ಬಿಡುಗಡೆಯಾದ 2 ಕೋಟಿ ರೂಪಾಯಿ ಅನುದಾನದಲ್ಲಿ 1.25 ಕೋಟಿ ಹಣ ನುಂಗಿ ಹಾಕಿದ್ದಾರೆ. 10 ವರ್ಷ ಕಳೆದರೂ ಇನ್ನು ಅನುದಾನ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.

Read More »

ಡಾ.ರಾಜ್ ಕುಮಾರ್ ರವರು ಜನ್ಮದಿನವನ್ನು ಪ್ರತಿವರ್ಷ ಆಚರಣೆ : ಬೊಮ್ಮಾಯಿ

ಬೆಂಗಳೂರು : ಭಾರತೀಯ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ರವರು ಜನ್ಮದಿನವನ್ನು ಪ್ರತಿವರ್ಷ ಸರ್ಕಾರದಿಂದಲೇ ಆಚರಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು. ನಿನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅದ್ಭುತ ನಟನಾ ಕೌಶಲ್ಯದಿಂದ ತನ್ನದೆ ಆದ ಛಾಪನ್ನು ಮೂಡಿಸಿದ ಡಾ.ರಾಜ್ ಕುಮಾರ್ ಅವರು ಪೌರಾಣಿಕ, ಸಾಮಾಜಿಕ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು ಎಂದರು.

Read More »

ಸಿಎಂ ಗೆ ಮಾಜಿ ಸಿಎಂ ಪತ್ರ.. ಯಾಕೆ ಅಂತೀರಾ ಈ ಸುದ್ದಿ ನೋಡಿ ?

ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರಿಡುವ ನಿರ್ಧಾರವನ್ನು ಕೈಬಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಶಾಸಕ ಬಿ.ಎಸ್‌. ಯಡಿಯೂರಪ್ಪ ಪತ್ರ ಬರೆದಿದ್ದಾರೆ. ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ, ‘ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್‌. ಯಡಿಯೂರಪ್ಪ ಅವರ ಹೆಸರನ್ನು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ’ ಎಂದು ಪ್ರಕಟಿಸಿದ್ದರು. ಈ ಕುರಿತು ಭಾನುವಾರ ಪತ್ರ ಬರೆದಿರುವ ಯಡಿಯೂರಪ್ಪ, ‘ನಿಮ್ಮ ನಿರ್ಧಾರವನ್ನು ಪುನರ್‌ ಪರಿಶೀಲಿಸಿ, ರಾಷ್ಟ್ರದ, ನಾಡಿನ ಅಭಿವೃದ್ಧಿಗೆ ಹಾಗೂ …

Read More »

ಪಿಎಸ್‌ಐ ನೇಮಕಾತಿ ಹಗರಣ : ಪ್ರಿಯಾಂಕ್‌ ಖರ್ಗೆ ಗೆ ನೋಟಿಸ್‌

ಬೆಂಗಳೂರು : ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಸಿಐಡಿ ವಿಶೇಷ ಘಟಕ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಅವರಿಗೆ ರವಿವಾರ ನೋಟಿಸ್‌ ಜಾರಿ ಮಾಡಿದೆ. ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಎ. 545 ಪಿಎಸ್‌ಐ (ಸಿವಿಲ್‌) ಅಕ್ರಮ ನೇಮಕಾತಿ ಹಗಣಕ್ಕೆ ಸಂಬಂಧಿಸಿದಂತೆ ತಾವು ತಮ್ಮ ಬಳಿಯಿರುವ ದಾಖಲಾತಿಗಳನ್ನು ಮಾಧ್ಯಮಗಳಿಗೆ ನೀಡಿದ್ದೀರಿ. ಈ ಪ್ರಕರಣ ಸೂಕ್ಷ್ಮ ಹಾಗೂ ಗಂಭೀರವಾಗಿದ್ದು, ಲಭ್ಯವಿರುವ ಎಲ್ಲ ದಾಖಲಾತಿಗಳನ್ನು ಸಂಗ್ರಹಿಸಿ ತನಿಖೆ ನಡೆಸಬೇಕಾಗಿರುವ ಹಿನ್ನೆಲೆಯಲ್ಲಿ ತಾವು ತಮ್ಮಲ್ಲಿರುವ …

Read More »

ಹುಬ್ಬಳ್ಳಿ ಗಲಭೆ ಪ್ರಕರಣ ಹಿನ್ನಲೆ 146 ಜನರನ್ನ ಅರೆಸ್ಟ್ ಮಾಡಲಾಗಿದೆ : ಲಾಬೂರಾಮ್

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿನ್ನಲೆ ಇಲ್ಲಿಯವರೆಗೆ 146 ಜನರನ್ನ ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸ್ ಕಮೀಷನರ್ ಲಾಬೂರಾಮ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಹಿಂದೆ ಯಾರೇ ಇರಲಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೆವೆ. ಕೆಲವೊಂದಿಷ್ಟು ಜನ ಕ್ರಿಮಿನಲ್ ಹಿನ್ನಲೆ ಉಳ್ಳವರು ಇದ್ದಾರೆ.ರಿಪೇಟೆಡ್ ಅಫಂಡರ್ ಗಳು ಕೂಡಾ ಇದ್ದಾರೆ. ಅವರ ಬಗ್ಗೆ ನಾವು ವಿಚಾರಣೆ ನಡೆಸುತ್ತಿದ್ದೆವೆ. ವಸೀಂ ಪಠಾಣ್ ವಿಚಾರಣೆ ನಡೆಯುತ್ತಿದೆ.ಅವರ ಹಿಂದೆ ಮುಂದೆ ಯಾರೇ ಇರಲಿ …

Read More »

ಹುಬ್ಬಳ್ಳಿ ಗಲಭೆ : ಮತ್ತೋರ್ವ ಪ್ರಮುಖ ಆರೋಪಿ ಬಂಧನ

ಹುಬ್ಬಳ್ಳಿ – ಹಳೆ ಹುಬ್ಬಳ್ಳಿ ಗಲಭೆ ಪ್ರಕರಣ ಹಿನ್ನಲೆಮತ್ತೋರ್ವ ಪ್ರಮುಖ ಆರೋಪಿಯನ್ನು ಪೋಲಿಸರು ಬಂಧನ ಮಾಡಿದ್ದಾರೆ. ಎಐಎಂಐಎಂ ನಗರ ಘಟಕದ ಅಧ್ಯಕ್ಷ ದಾದಾಪೀರ್ ಬೆಟಗೇರಿ ಬಂಧವಾದ ಆರೋಪಿ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಖಾಕಿ ಪಡೆ  ಕರೆತಂದ ತಂದಿದ್ದಾರೆ. ದಾದಾಪೀರ್ ಬೆಟಗೇರಿ ವಿಚಾರಣೆ ನಡೆಸುತ್ತಿದ್ದಾರೆ.

Read More »

ಹುಬ್ಬಳ್ಳಿಯಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆ ಔತಣ ಕೂಟ

ಹುಬ್ಬಳ್ಳಿ: ಧಾರವಾಡದ ಅಂಜುಮನ್ ಸಂಸ್ಥೆಯಿಂದ ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್ ತಮಟೆ ಕಾರ್ ವತಿಯಿಂದ ಹಿಂದೂ-ಮುಸ್ಲಿಂ ಸೌಹಾರ್ದತೆ ಔತಣ ಕೂಟ ಇಫ್ತಿಯಾರ್ ಹಮ್ಮಿಕೊಳ್ಳಲಾಗಿತ್ತು. ಈದ್ಗಾ ಮೈದಾನದಲ್ಲಿ ಧಾರವಾಡ ಸರ್ವ ಧರ್ಮ ಗುರುಗಳು ಮತ್ತು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆಯಿಂದ ಇತ್ತೀಚಿಗೆ ಬಂಗಾರದ ಪದಕ ಗೆದ್ದ ರಫೀಕ್ ರವಳಿ ಇವರಿಗೆ 25000 ಧನ ಸಹಾಯ ಮಾಡಿ ಪ್ರೋತ್ಸಾಹಿಸಿದರು.

Read More »

ಬೆಲ್ಲದ ಮನೆಗೆ ಆಗಮಿಸಿದ ಬೊಮ್ಮಾಯಿ : ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾದ ಭೇಟಿ

ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಒಂದಿಲ್ಲೊಂದು ರೀತಿಯ ಸಂಚಲನ ಸೃಷ್ಟಿಯಾಗುತ್ತಲೇ ಇದೆ. ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯು ಮುನ್ನೆಲೆಗೆ ಬಂದಿದ್ದು, ಈಗ ಸಿಎಂ ರೇಸ್ ನಲ್ಲಿದ್ದ ಶಾಸಕ ಅರವಿಂದ ಬೆಲ್ಲದ ಅವರ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿಯವರು ದಿಢೀರ್ ಭೇಟಿ ನೀಡಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿಯವರು ತಿಂಡಿ ತಿನ್ನಲು ಶಾಸಕ ಅರವಿಂದ ಬೆಲ್ಲದ ಅವರ ಮನೆಗೆ ಆಗಮಿಸಿದ್ದು, ಒಂದೆಡೆಯಾದರೇ ಈ ಬಾರಿ …

Read More »

ಗೌರೀಶಂಕರ ವಸತಿ ನಿಲಯದ ಕೊಠಡಿಗಳ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ ಸಲ್ಲಿಕೆ

ಹುಬ್ಬಳ್ಳಿ : ಅವಳಿ ನಗರದ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಧಾರವಾಡ ಶಹರದ ವಾರ್ಡ್ ನಂಬರ್ 15 ರ ಸಪ್ತಾಪುರದಲ್ಲಿರುವ ಗೌರೀಶಂಕರ ವಸತಿ ನಿಲಯದಲ್ಲಿ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಶಾಸಕ ಅರವಿಂದ್ ಬೆಲ್ಲದ್ ಭೂಮಿ ಪೂಜೆ ನೆರವೇರಿಸಿದರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಈ ಸಂದರ್ಭದಲ್ಲಿ , ಮಂಡಲ ಅಧ್ಯಕ್ಷರಾದ ಬಸವರಾಜ ಗರಗ , ಹೆಸ್ಕಾಂ ನಿರ್ದೇಶಕರಾದ ಸುನಿಲ್ ಸರೂರ್ , ಪಾಲಿಕೆ ಸದಸ್ಯರಾದ ಶ್ರೀಮತಿ ಜ್ಯೋತಿ ಪಾಟೀಲ್ , ವಿಷ್ಣುತೀರ್ಥ …

Read More »

ಕಾಂಕ್ರೀಟ್ ಕಾಮಗಾರಿಗೆ ಪ್ರಸಾದ್ ಅಬ್ಬಯ್ಯ ಚಾಲನೆ

ಹುಬ್ಬಳ್ಳಿ: 20 ಲಕ್ಷ ರೂ . ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣವನ್ನವಾರ್ಡ್ ನಂ . 82 ರ ಸೋನಿಯಾಗಾಂಧಿ ನಗರದಲ್ಲಿ ಕಾಮಗಾರಿಗೆ ಶಾಸಕ ಪ್ರಸಾದ್ ಅಬ್ಬಯ್ಯ ಇಂದು ಭೂಮಿಪೂಜೆ ನೆರವೇರಿಸಿದರು . ಇದೆ ವೇಳೆಯಲ್ಲಿ ಸೋನಿಯಾಗಾಂಧಿ ಬಡಾವಣೆ ನಿವಾಸಿಗಳಿಂದ ಶಾಸಕರಿಗೆ ಸನ್ಮಾನ ಮಾಡಲಾಯಿತು .

Read More »