Breaking News

admin

ಪಿಯು ಪರೀಕ್ಷೆ ಗೆ ಪೋಲಿಸ್ ಭದ್ರತೆಯಲ್ಲಿ ಆಗಮನಿಸಿದ ಅಭಿಷೇಕ ಹಿರೇಮಠ

ಹುಬ್ಬಳ್ಳಿ:ಹಳೆ ಹುಬ್ಬಳ್ಳಿ ಗಲಭೆ ಹಿನ್ನಲೆ ಜೈಲಿನಲ್ಲಿ‌‌ ಇದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ‌ ಅಭಿಷೇಕ ಹಿರೇಮಠ ಪರೀಕ್ಷೆಗೆ ಹಾಜರಾಗಿದ್ದಾರೆ. ಮಹೇಶ ಪಿಯುಸಿ ಕಾಲೇಜಿನಲ್ಲಿ ಅವನ‌ಪರೀಕ್ಷಾ ಕೇಂದ್ರವಾಗಿದ್ದು , ಹಲವು ಪೊಲೀಸ್ ಭದ್ರತೆಯಲ್ಲಿ ಅಭಿಷೇಕ ಆಗಮಿಸಿದ್ದಾರೆ. ಇಂದು ಬಿಜಿನೆಸ್ ಸ್ಟಡಿ ವಿಷಯ ಕುರಿತು ಅಭಿಷೇಕ ಪರೀಕ್ಷೆ ಬರೆಯಲಿದ್ದಾರೆ. ಆತನಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

Read More »

ಆರೋಗ್ಯ ಇಲಾಖೆಯಲ್ಲಿ ಹೊಸ ನಿಯಮ ಜಾರಿಗೆ : ಸಚಿವ ಡಾ.ಕೆ. ಸುಧಾಕರ್‌

ಬೆಂಗಳೂರು: ಇನ್ನು ಮುಂದೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅವರ ಬಯೋಮೆಟ್ರಿಕ್‌ ಹಾಜರಾತಿಯ ಆಧಾರದಲ್ಲೇ ವೇತನ ಸಿಗಲಿದೆ. ಹಾಜರಾತಿ ಕಡಿಮೆಯಿದ್ದರೆ ವೇತನಕ್ಕೂ ಕತ್ತರಿ ಬೀಳಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಸುಧಾರಣೆ ಹಾಗೂ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಬಯೋಮೆಟ್ರಿಕ್‌ ಹಾಜರಾತಿ ಆಧರಿಸಿ ವೇತನ ಪಾವತಿಸುವ ವ್ಯವಸ್ಥೆ ಕಡ್ಡಾಯಗೊಳಿಸುವ ತೀರ್ಮಾನ ಕೈಗೊಂಡಿರುವುದಾಗಿ ಎಂದರು.

Read More »

22 ವರ್ಷ ಮನೆ ಬಳಕೆ : ಬಾಡಿಗೆ ಕಟ್ಟದ ಸಂಸದ

ನಟ, ಮಾಜಿ ಸಂಸದ ಶಶಿಕುಮಾರ್ ಸಂಸದರಾಗಿದ್ದಂತಹ ಸಂದರ್ಭದಲ್ಲಿ 22 ವರ್ಷ ಕರ್ನಾಟಕ ಭವನ ಬಳಕೆ ಮಾಡಿದ್ದರು. ಆದರೆ 3.72 ಲಕ್ಷ ರೂ. ಬಾಡಿಗೆ ಪಾವತಿಸಿಲ್ಲ‌ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಇದನ್ನು ಗಮನಿಸಿದ ಕಂದಾಯ ಇಲಾಖೆ ಇದೀಗ ಬಾಡಿಗೆ ವಸೂಲಿ ಮಾಡುವಂತೆ ರಾಜ್ಯ ಶಿಷ್ಟಾಚಾರದ ಅಧೀನ ಕಾರ್ಯದರ್ಶಿಗಳು ಏ.19ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

Read More »

ಇಂದು ಪಿಯು ಪರೀಕ್ಷೆ : ವಿದ್ಯಾರ್ಥಿಗಳಿಗೆ BIG TV NEWS ಕಡೆಯಿಂದ ಆಲ್‌ ದಿ ಬೆಸ್ಟ್

ಪಿಯು ಪರೀಕ್ಷೆ ಸುಗಮವಾಗಿ ನಡೆಯಲು ಈಗಾಗಲೇ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಸಲುವಾಗಿ ಸಹಾಯವಾಣಿಯನ್ನೂ ಸಹ ಆರಂಭಿಸಲಾಗಿದ್ದು, ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಆಲ್‌ ದಿ ಬೆಸ್ಟ್. ಬೆಳಿಗ್ಗೆ 10:15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದ್ದು, 6 ಲಕ್ಷದ 84 ಸಾವಿರದ 255 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪರೀಕ್ಷಾ ಕೇಂದ್ರದ ಬಳಿಯ ಜೆರಾಕ್ಸ್ …

Read More »

ಹುಬ್ಬಳ್ಳಿ ಗಲಭೆ : ತನಿಖೆ ಚುರುಕುಗೊಳ್ಳಿಸಿದ ಕಮೀಷನರ್ ಲಾಭುರಾಮ್

ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 12 ಕೇಸ್ ದಾಖಲು ಮಾಡಲಾಗಿದ್ದು, 134 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ಪೊಲೀಸ್ ಇಲಾಖೆಯಿಂದ ತನಿಖೆಯನ್ನು ಕೈಗೊಂಡಿದ್ದು, ಸೂಕ್ತ ಬಂದೋಬಸ್ತ್ ಜೊತೆಗೆ ನಾಳೆಯವರೆಗೂ 144 ಜಾರಿಯಲ್ಲಿ ಇರಲಿದೆ ಎಂದು ಪೊಲೀಸ್ ಆಯುಕ್ತರಾದ ಲಾಭುರಾಮ್ ಹೇಳಿದರು. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಶನಿವಾರ ರಾತ್ರಿ ಘಟನೆ …

Read More »

ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಆಯುಕ್ತರ ಭೇಟಿ: ವಾಸೀಂ ಪಠಾಣ್ ತೀವ್ರ ವಿಚಾರಣೆ

ಹುಬ್ಬಳ್ಳಿ: ಗಲಭೆಯ ವಾಸೀಂ ಪಠಾಣ್ ವಿಚಾರಣೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ಲಾಭುರಾಮ್ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ತಲೆಮರೆಸಿಕೊಂಡಿದ್ದ ವಾಸೀಂ ಪಠಾಣ್ ನನ್ನು ಠಾಣೆಗೆ ಕರೆತಂದಿರುವ ಹಿನ್ನೆಲೆಯಲ್ಲಿ ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಇನ್ನೂ ಪೊಲೀಸ್ ಆಯುಕ್ತರು ಠಾಣೆಗೆ ಭೇಟಿ ನೀಡಿ ಮತ್ತಷ್ಟು ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆ …

Read More »

ಟ್ರ್ಯಾಕ್ಟರ್ ಟೇಲರ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ

ಕುಂದಗೋಳ : ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಮೇವು ತುಂಬಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟೇಲರ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ . ಹಿರೇಹರಕುಣಿ ಗ್ರಾಮದ ಶೇಖರಗೌಡ ಅಂದಾನಿಗೌಡ್ರ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್ ಟೇಲರ್‌ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡಿದ್ದು ತಕ್ಷಣ ಸ್ಥಳೀಯರು ತಂಡೋಪತಂಡವಾಗಿ ಆಗಮಿಸಿ ಬೆಂಕಿ ನಂದಿಸಿದ್ದಾರೆ . ಆದರೆ ಬೆಂಕಿ ಹೊತ್ತಿ ಅರ್ಧಂಬರ್ಧ ಸುಟ್ಟು ಮೇವು ದನಕರುಗಳು ತಿನ್ನಲು ಯೋಗ್ಯವಿರದಂತಾಗಿದೆ.ಕುಂದಗೋಳ ಗ್ರಾಮೀಣ ಪೊಲೀಸ್ ಠಾಣಾ …

Read More »

ಗಲಭೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್..

ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯ ಗಲಭೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತಿದ್ದು, ಕಳೆದ ಐದು ದಿನಗಳಿಂದ ತಲೆ ಮರೆಸಿಕೊಂಡಿದ್ದ, ಗಲಭೆಗೆ ತುಪ್ಪ ಸುರಿದ ಮೌಲ್ವಿ ವಸೀಮ್ ಪಠಾಣ್ 4 ನಿಮಿಷದ ವೀಡಿಯೋ ಹರಿಬಿಡುವ ಮೂಲಕ ಸಮರ್ಥನೆಗೆ ಮುಂದಾಗಿದ್ದ ಆದರೆ ವಿಡಿಯೋ ಜಾಲವನ್ನು ಬೆನ್ನು ಹತ್ತಿದ್ದ ಪೊಲೀಸರು ನಾಲ್ಕೈದು ಗಂಟೆಯಲ್ಲಿಯೇ ಕೈಗೆ ಕೋಳ ತೊಡಿಸಿದ್ದಾರೆ. ಏಕಾಏಕಿ ಪೊಲೀಸ್ ವಾಹನ ಏರುವ ಮೂಲಕ ಉದ್ರಿಕ್ತರನ್ನು ಪ್ರಚೋದಿಸಿ ಉರಿಯೊ ಬೆಂಕಿಗೆ ತುಪ್ಪ ಸುರಿದ್ದಿದ್ದ ಮೌಲ್ವಿ ವಸೀಮ್ …

Read More »

ವಾಸಿಂ ಪಠಾಣ್ ಬಂಧನ

ಹುಬ್ಬಳ್ಳಿ: ಹುಬ್ಬಳ್ಳಿಯ ಗಲಭೆ ಪ್ರಕರಣ ಹಿನ್ನಲೆ ಹಳೆ ಹುಬ್ಬಳ್ಳಿಯ ಪೊಲೀಸರು ವಾಸಿಂ ಪಠಾಣ್‌ನನ್ನ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಶನಿವಾರ ರಾತ್ರಿ ನಡೆದ ಗಲಾಟೆಯಲ್ಲಿ ಭಾಗಿಯಾಗಿದ್ದಮಾಸ್ಟರ್ ಮೈಂಡ್ ಎಂದು ಬಿಂಬಿತವಾಗಿದ್ದ ವಾಸೀಂ ಪಠಾಣ ಬೆಳಿಗ್ಗೆಯಷ್ಟೇ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ವಾಸೀಂ ಪಠಾಣನನ್ನು ಪೊಲೀಸರುಬೆಂಗಳೂರಿನಿಂದ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

Read More »

ವಾಸಿಂ ಪಠಾಣ್ ಬಂಧನ

ಹುಬ್ಬಳ್ಳಿ: ಹುಬ್ಬಳ್ಳಿಯ ಗಲಭೆ ಪ್ರಕರಣ ಹಿನ್ನಲೆ ಹಳೆ ಹುಬ್ಬಳ್ಳಿಯ ಪೊಲೀಸರು ವಾಸಿಂ ಪಠಾಣ್‌ನನ್ನ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಶನಿವಾರ ರಾತ್ರಿ ನಡೆದ ಗಲಾಟೆಯಲ್ಲಿ ಭಾಗಿಯಾಗಿದ್ದಮಾಸ್ಟರ್ ಮೈಂಡ್ ಎಂದು ಬಿಂಬಿತವಾಗಿದ್ದ ವಾಸೀಂ ಪಠಾಣ ಬೆಳಿಗ್ಗೆಯಷ್ಟೇ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ವಾಸೀಂ ಪಠಾಣನನ್ನು ಪೊಲೀಸರುಬೆಂಗಳೂರಿನಿಂದ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

Read More »