ಕುಂದಗೋಳ : ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ಮೇವು ತುಂಬಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟೇಲರ್‌ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ .
ಹಿರೇಹರಕುಣಿ ಗ್ರಾಮದ ಶೇಖರಗೌಡ ಅಂದಾನಿಗೌಡ್ರ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್ ಟೇಲರ್‌ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡಿದ್ದು ತಕ್ಷಣ ಸ್ಥಳೀಯರು ತಂಡೋಪತಂಡವಾಗಿ ಆಗಮಿಸಿ ಬೆಂಕಿ ನಂದಿಸಿದ್ದಾರೆ . ಆದರೆ ಬೆಂಕಿ ಹೊತ್ತಿ ಅರ್ಧಂಬರ್ಧ ಸುಟ್ಟು ಮೇವು ದನಕರುಗಳು ತಿನ್ನಲು ಯೋಗ್ಯವಿರದಂತಾಗಿದೆ.ಕುಂದಗೋಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

