ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರಪಡೆದ ಮತಗಳು. ಪ್ರಸಾದ ಅಬ್ಬಯ್ಯ, ಕಾಂಗ್ರೆಸ್-85,426..ಡಾ. ಕ್ರಾಂತಿಕಿರಣ, ಬಿಜೆಪಿ-53056.. ವೀರಭದ್ರಪ್ಪ ಹಾಲಹರವಿ, ಜೆಡಿಎಸ್-900..ದುರ್ಗಪ್ಪ ಬಿಜವಾಡ, ಎಐಎಂಐಎಂ-5644..ಗೆಲುವು-ಪ್ರಸಾದ ಅಬ್ಬಯ್ಯ, ಅಂತರ- 32,370..ಕಲಘಟಗಿ ವಿಧಾನಸಭಾ ಕ್ಷೇತ್ರಸಂತೋಷ ಲಾಡ್, ಕಾಂಗ್ರೆಸ್- 85,761.ನಾಗರಾಜ ಛಬ್ಬಿ, ಬಿಜೆಪಿ 71,404..ವೀರಪ್ಪ ಶೀಗಿಗಟ್ಟಿ, ಜೆಡಿಎಸ್-891..ಗೆಲುವು-ಸಂತೋಷ ಲಾಡ್, ಅಂತರ – 14357..ನವಲಗುಂದ ವಿಧಾನಸಭಾ ಕ್ಷೇತ್ರಎನ್.ಎಚ್.ಕೋನರಡ್ಡಿ, ಕಾಂಗ್ರೆಸ್- 86081ಶಂಕರ ಪಾಟೀಲ ಮುನೇನಕೊಪ್ಪ, ಬಿಜೆಪಿ-63882ಕೆ.ಎನ್. ಗಡ್ಡಿ, ಜೆಡಿಎಸ್-6914..ಗೆಲುವು-ಎನ್.ಎಚ್. ಕೋನರಡ್ಡಿ, ಕಾಂಗ್ರೆಸ್, ಅಂತರ-22199..ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರ.ಮಹೇಶ ಟೆಂಗಿನಕಾಯಿ, ಬಿಜೆಪಿ- 95064..ಜಗದೀಶ ಶೆಟ್ಟರ್, …
Read More »ದಕ್ಷಿನ ಕನ್ನಡದಲ್ಲಿ ಆಝಾನ್ ಬಗ್ಗೆ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ
ಮಂಗಳೂರಿನ ಕಾವೂರಿನಲ್ಲಿ ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಷಣ ಮಧ್ಯೆ ಆರಂಭವಾದ ಆಝಾನ್ಗೆ ಮಾಜಿ ಸಚಿವ ಈಶ್ವರಪ್ಪ ಕೋಪಗೊಂಡ ಘಟನೆ ನಡೆದಿದೆ. ಈಶ್ವರಪ್ಪನವ್ರು ಭಾಷಣ ಮಾಡ್ತಿದ್ದಾಗ ಸ್ಥಳೀಯ ಮಸೀದಿಯಿಂದ ಆಝಾನ್ ಕೇಳಿಬಂತು. ಇದಕ್ಕೆ ಸಿಟ್ಟಾದ ಈಶರಪ್ಪ ನನಗೆ ಎಲ್ಲಿ ಹೋದ್ರು ಇದೊಂದು ತಲೆನೋವು. ಮೈಕ್ ನಲ್ಲಿ ಕೂಗಿದ್ದಲ್ಲಿ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ ಅಂತ ಹೇಳಿದ್ರು. ಸುಪ್ರೀಂ ಕೋರ್ಟ್ ಆದೇಶವಿದ್ದು, ಇಂದಲ್ಲ ನಾಳೆ ಇದು ಖತಂ ಆಗಲಿದೆ. ಇದರಲ್ಲೇನು ಅನುಮಾನ …
Read More »ಯುವಕನ ಮೇಲೆ ಹಲ್ಲೆ: ಆರೋಪಿಗಳನ್ನು ಏಕೆ ಅರೆಸ್ಟ್ ಮಾಡ್ತಿಲ್ಲ
ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಯುವಕರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹುಬ್ಬಳ್ಳಿಯ ಲಿಡಕರ್ ಕಾಲೋನಿ ನಿವಾಸಿಯಾಗಿರೋ ವಿಠಲ್ ಎಂಬ ಯುವಕನ ಮೇಲೆ ಮಾರ್ಚ್ 12 ರಾತ್ರಿ ಯುವಕರ ಗ್ಯಾಂಗ್ ಹಲ್ಲೆ ಮಾಡಿದೆ. ಇಂಡಸ್ಟ್ರೀಸ್ ಏರಿಯಾದಲ್ಲಿ ಮದ್ಯಪಾನ ಮಾಡುತ್ತಾ ಕುಳತಿದ್ದ ಯುವಕರ ಗ್ಯಾಂಗ್. ಈ ವೇಳೆ ಅವಾಚ್ಯ ಶಬ್ದಗಳಿಂದ ಮಾತನಾಡುತ್ತಿದ್ದಾಗ ವಿಠಲ ಇಲ್ಲಿ ಯಾಕೆ ಬಾಯಿ …
Read More »ಹುಬ್ಬಳ್ಳಿ-ಧಾರವಾಡದಲ್ಲಿ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ
ಧಾರವಾಡ : ಹು-ಧಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಮಾರ್ಗದರ್ಶನದಲ್ಲಿ ಆಯುಕ್ತ ಡಾ: ಸಂತೋಷಕುಮಾರ ಬಿರಾದಾರ ಅವರು ಅನಧಿಕೃತ ಬಡಾವಣೆಗಳ ಸಮೀಕ್ಷೆ ಕೈಗೊಂಡಿದ್ದು, ಹಂತ ಹಂತವಾಗಿ ಅವುಗಳ ತೆರವು ಕಾರ್ಯಾಚರಣೆಯನ್ನು ಈಗಾಗಲೇ ಆರಂಭಿಸಿದ್ದಾರೆ. ಹುಬ್ಬಳ್ಳಿ ತಾಲೂಕಿನ ತಿಮ್ಮಸಾಗರ ಗ್ರಾಮ ವ್ಯಾಪ್ತಿಯ 5 ಎಕರೆ 28 ಗುಂಟೆ ಹಾಗೂ 1 ಎಕರೆ 6 ಗುಂಟೆ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಲೇಔಟ್ನ್ನು ತೆರವುಗೊಳಿಸಲಾಯಿತು. ಈಗಾಗಲೇ ಸಮೀಕ್ಷೆಯಲ್ಲಿ ಗುರುತಿಸಿರುವ ಅನಧಿಕೃತ ಲೇಔಟ್ಗಳ …
Read More »ಅಂಗನವಾಡಿ ಕಾರ್ಯಕರ್ತೆಯರಿಗೆ ಅಗತ್ಯ ಮಾಹಿತಿ ನೀಡಿ- ಸಿಇಓ ಡಾ. ಸುರೇಶ ಇಟ್ನಾಳ
ಧಾರವಾಡ : ನರೇಂದ್ರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಹಯೋಗದಲ್ಲಿ ಆರಂಭಿಸಿರುವ ಆರೋಗ್ಯ ಮತ್ತು ಪೌಷ್ಠಿಕ ಸಮೀಕ್ಷೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲಾ ಪಂಚಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಸುರೇಶ ಇಟ್ನಾಳ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಇಲಾಖೆ ಕಾರ್ಯಕರ್ತರು ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಯ ಕಾರ್ಯಕರ್ತರು ಮನೆ ಮನೆಗೆ ಸಮೀಕ್ಷೆಗೆ ಬಂದಾಗ ಸಾರ್ವಜನಿಕರು ಸಹಕರಿಸಿ …
Read More »ಪ್ರೌಢಶಾಲೆಯ ಮಕ್ಕಳೊಂದಿಗೆ ನ್ಯಾಯಾಧೀಶೆ ಸಂವಾದ
ಧಾರವಾಡ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶೆ ಸಿ.ಎಂ.ಪುಷ್ಪಲತ ಅವರು ಧಾರವಾಡದ ವಿವಿಧ ಪ್ರೌಢಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಮಕ್ಕಳ ಕಲಿಕೆ, ಪರೀಕ್ಷೆ ಎದುರಿಸುವ ಆತ್ಮ ಸ್ಟೈರ್ಯ ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದರು. ಪ್ರಸಕ್ತ ಸಾಲಿನ ಪಠ್ಯ ಬೋಧನೆ, ಪಠ್ಯ ಪೂರ್ಣಗೊಳಿಸಿರುವುದು, ಪರೀಕ್ಷೆಗೆ ಸಿದ್ಧಗೊಳಿಸಿರುವುದು ಮತ್ತು ಮಕ್ಕಳಿಗೆ ನೈತಿಕ ಶಿಕ್ಷಣ ಪಾಠ ಮಾಡಿರುವ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿ, ನ್ಯಾಯಾಧೀಶರು ತಿಳಿದುಕೊಂಡರು. ಪರೀಕ್ಷೆಯನ್ನು …
Read More »ನಿವೃತ್ತ ನೌಕರರ ಜೀವನದ ಜೊತೆ ಸರ್ಕಾರದ ಚೆಲ್ಲಾಟ
ಹುಬ್ಬಳ್ಳಿ: ಸರ್ಕಾರ ಸಾರಿಗೆ ಇಲಾಖೆ ನೌಕರರ ಬೇಡಿಕೆ ಇಡೇರಿಸುದಿರಲಿ, ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರಿಗೂ ಗ್ರ್ಯಾಚುಟಿ ಹಣ ಕೊಟ್ಟಿಲ್ಲ. ಸಾರಿಗೆ ಇಲಾಖೆಯ ನಡುವಳಿಕೆಯಿಂದ ಬೇಸತ್ತು ಸಾರಿಗೆ ನಿವೃತ್ತ ನೌಕರನೋರ್ವ ಇದೀಗ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾನೆ. ಒಂದು ಕಡೆ ಸರ್ಕಾರಕ್ಕೆ ಶಾಪ ಹಾಕ್ತಿರೋ ನಿವೃತ್ತ ಸಾರಿಗೆ ನೌಕರ.. ಇನ್ನೊಂದು ಕಡೆ ನಿವೃತ್ತಿ ನಂತರದ ಗ್ರ್ಯಾಚುಟಿ ಹಣಕ್ಕಾಗಿ ಮೋದಿಗೆ ಬರೆದಿರೋ ಪತ್ರ. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಗೋಕುಲ್ ರಸ್ತೆಯ …
Read More »ಆಟೋ-ಲಾರಿ ಡಿಕ್ಕಿ ಸ್ಥಳದಲ್ಲಿಯೇ ಆಟೋ ಚಾಲಕನ ಸಾವು
ವಿಜಯಪುರ: ನಗರದ ಹೊರವಲಯದ ರಿಂಗ್ ರೋಡ್ ರಸ್ತೆಯಲ್ಲಿ, ಆಟೋ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಆಟೋ ಚಾಲಕ ಸ್ಥಳದಲ್ಲಿ ಅಸುನೀಗಿರುವ ಘಟನೆ ಮಂಗಳವಾರ ನಡೆದಿದೆ. ಅಪಘಾತದಲ್ಲಿ ಆಟೋ ಚಾಲಕ ಸಾವನ್ನಪ್ಪಿದ್ದಾನೆ. ಆದ್ರೆ, ಮೃತಪಟ್ಟಿರುವ ಚಾಲಕನ ಹೆಸರು, ಮಾಹಿತಿ ಲಭ್ಯವಾಗಿಲ್ಲ. ಅಲ್ಲದೇ, ಲಾರಿ ಚಾಲಕ ಸ್ಥಳದಲ್ಲಿ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪುರ ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
Read More »ನವಲಗುಂದದಲ್ಲಿ ಕಡಲೆ ಖರೀದಿ ಕೇಂದ್ರ
ನವಲಗುಂದ : ತಾಲೂಕಿನ ಮೊರಬ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಕಡಲೆ ಖರೀದಿ ಕೇಂದ್ರ ಪ್ರಾರಂಭಗೊಂಡಿವೆ. ಸಂಘದ ಅಧ್ಯಕ್ಷ ಶರಣಬಸವೇಶ ವಿರಕ್ತಮಠ, ಉಪಾಧ್ಯಕ್ಷ ಸುಭಾಷ್ ಕಲ್ಲಿ, ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜ್ ಮನಿಗೊಳಿ, ಗಂಗಪ್ಪ ಮನಮಿ ಸೇರಿದಂತೆ ಸಂಘದ ಸಿಬ್ಬಂದಿ ವರ್ಗ ಹಾಗೂ ಗ್ರಾಮದ ಗುರು ಹಿರಿಯರು ಸಮ್ಮುಖದಲ್ಲಿ ಕಡಲೆ ಖರೀದಿ ಕೇಂದ್ರವನ್ನು ಪೂಜೆ ಮಾಡುವ ಮೂಲಕ …
Read More »ಗಿನ್ನಿಸ್ ದಾಖಲೆಯಲ್ಲಿ ಸೆರ್ಪಡೆಯಾದ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ
ಹುಬ್ಬಳ್ಳಿ: ಮಾರ್ಚ್ 12ರಂದು ಧಾರವಾಡದಲ್ಲಿ ಐಐಟಿ ಲೋಕಾರ್ಪಣೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಈ ಪ್ಲಾಟ್ಫಾರ್ಮ್ನಲ್ಲಿ ಇಲೆಕ್ಟಿಕ್ ಇಂಜಿನ್ ಅಳವಡಿಸಿದ್ದ ಹುಬ್ಬಳ್ಳಿ-ಧಾರವಾಡ ಎಕ್ಸ್ಪ್ರೆಸ್ ಮತ್ತು ಬೆಳಗಾವಿ- ಸಿಕಂದರಾಬಾದ್ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದ್ದರು. ಆ ಮೂಲಕ ವಿಶ್ವದ ಅತಿ ಉದ್ದನೆಯ ರೈಲ್ವೆ ಪ್ಲಾಟ್ಫಾರ್ಮ್ನ್ನು ಲೋಕಾರ್ಪಣೆಗೊಳಿಸಿದ್ದರು. ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೈಋತ್ಯ ರೈಲ್ವೆ ವಲಯದ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣ ಈಗ ಮತ್ತೊಂದು ಗೌರವದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





