ಹುಬ್ಬಳ್ಳಿ : ರಾಜ್ಯದ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕೋಮು ಗಲಭೆಗೆ ಪ್ರಚೋದನೆ ನೀಡುವ ಹೇಳಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಹು-ಧಾ ಪಶ್ಚಿಮ ವಿಧಾಸಭಾ ಕ್ಷೇತ್ರದ ನವನಗರ ಬ್ಲಾಕ್ ಅಧ್ಯಕ್ಷರಾದ ಬಸವರಾಜ ಕಿತ್ತೂರ ನೇತೃತ್ವದಲ್ಲಿ ನವನಗರ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು. ಕೆಪಿಸಿಸಿ ಸದಸ್ಯರಾದ ರಾಬರ್ಟ್ ದದ್ದಾಪುರಿ, ಆನಂದ ಜಾಧವ, ದೇವಿಕಾ ಯೋಗಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Read More »ಸಹೋದ್ಯೋಗಿಗಳ ಸೊತ್ತು ಕಳ್ಳತನ ಹುತ್ತ
ಹುಬ್ಬಳ್ಳಿ : ಹೋಟೆಲ್ ಕರ್ಮಿಕ ಸಹದ್ಯೋಗಿಗಳ ೪೦ ಸಾವಿರ ರೂ. ಕಳ್ಳತನ ಮಾಡಿರವ ಪ್ರಕರಣ ಶಹರ ಪೋಲಿಸ ಠಾಣೆಯಲ್ಲಿ ದಾಖಲಾಗಿದೆ.ಹಾವೇರಿ ಜಿಲ್ಲೆಯ ಜಾನಗಲ್ಲ ತಾಲೂಕಿನ ಕಂಚಗಾರ ಗಲ್ಲಿ ನಿವಾಸಿ ಚಂದನ ಮಡಿವಾಳ ಎಂಬಾತ ಕಳ್ಳತನ ಮಾಡಿರುವನು. ನಗರದ ಕೋಪ್ಪಿಕರ ರಸ್ತೆಯಲ್ಲಿಯಲ್ಲಿರುವ ಮನಿಯಾರ ಕಾಂಪ್ಲೆಕ್ಸ್ ನಲ್ಲಿರುವ ಶಾಹಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಚಂದನ ಸಹದ್ಯೋಗಿಗಳಾದ ಕನಯ್ಯಾಲಾಲ ಅವರ 5 ಸಾವಿರ ಮೌಲ್ಯದ ಮೊಬೈಲ್ ಮತ್ತು 15 ಸಾವಿರ ರೂಪಾಯಿ, ದಿವಾನ …
Read More »ಬೈಕ್ ಸವಾರನ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದು ಸಾವು
ನವಲಗುಂದ: ಬೈಕ್ ಸವಾರನ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದು ತೀವ್ರ ಗಾಯಗೊಂಡ ವ್ಯಕ್ತಿ ಮೃತ ಪಟ್ಟಿ ಘಟನೆ ನವಲಗುಂದ ತಾಲೂಕಿನ ತಲೆಮೊರಬ ಮತ್ತು ಬ್ಯಾಲಾಳ ಗ್ರಾಮಗಳ ನಡುವೆ ನಡೆದಿದೆ. ಮೃತ ದುರ್ದೈವಿಯನ್ನು ತಲೆಮೊರಬ ಗ್ರಾಮದ 22 ವಯಸ್ಸಿನ ಶಿವರುದ್ರಪ್ಪ ಮಹದೇವಪ್ಪ ಅಂಗಡಿ ಎಂದು ಗುರುತಿಸಲಾಗಿದೆ . ಕೂಡಲೇ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ರವಾನಿಸಿದರೂ ಸಹ ಗುರುವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ . ತನ್ನ ತಾಯಿಯ …
Read More »ಡಬ್ಬಾ ಅಂಗಡಿ ಮುಂಗಟ್ಟುಗಳ ತೆರವು
ಧಾರವಾಡ : ನಗರದ ಸತ್ತೂರು ಕೈಗಾರಿಕಾ ಪ್ರದೇಶದ ಹಾಗೂ ಸುತ್ತಮುತ್ತಲಿನ ಜಾಗದಲ್ಲಿ ಅನಧಿಕೃತ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ ಮಹಾನಗರ ಪಾಲಿಕೆ ಸಿಬ್ಬಂದಿ ನಡೆಸಿದ್ದಾರೆ. ಬೆಳಂ ಬೆಳಿಗ್ಗೆ ಕಾರ್ಯಾಚರಣೆಗೆ ಇಳಿದ ಮಹಾನಗರ ಪಾಲಿಕೆ ಸಿಬ್ಬಂದಿ ಪುಟ್ ಬಾತ್ ಅತಿಕ್ರಮಣ ಮಾಡಿಕೊಂಡ ಡಬ್ಬಾ ಅಂಗಡಿ ಮುಂಗಟ್ಟುಗಳ ತೆರವು ಮಾಡಿದ್ದಾರೆ .
Read More »ಇಂದು ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನಾ ಸಮಾರಂಭ
ಧಾರವಾಡ: ನಗರದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿ ವತಿಯಿಂದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಅಭಿನಂದನಾ ಸಮಾರಂಭವನ್ನು ಇಂದು ಬೆಳಿಗ್ಗೆ 10.30 ಕ್ಕೆ ನಗರದ ಜೆಎಸ್ಎಸ್ ಸನ್ನಿಧಿ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಮುರುಘಾಮಠದ ಮಲ್ಲಿಕಾರ್ಜುನ ಸಾನಿಧ್ಯವಹಿಸಲಿದ್ದಾರೆ.ಖ್ಯಾತ ಸ್ವಾಮೀಜಿ ಸಂಸ್ಕೃತ ವಿದ್ವಾಂಸ ವೆಂಕಟ ನರಸಿಂಹ ಜೋಶಿಯವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.ಜೆಎಸ್ಎಸ್ ಕಾರ್ಯದರ್ಶಿ ಹಾಗೂ ಎಸ್ಡಿಎಂ ಸಂಸ್ಥೆಯ ಉಪಾಧ್ಯಕ್ಷ ಡಾ.ನ.ವಜ್ರಕುಮಾರ ಅಧ್ಯಕ್ಷತೆ ವಹಿಸುವರು . ಜೆಎಸ್ಎಸ್ ವಿತ್ತಾಧಿಕಾರಿ ಡಾ.ಅಜಿತ ಪ್ರಸಾದ ಉಪಸ್ಥಿತರಿರುವರು ಎಂದು …
Read More »ಜಗಜೀವನ ರಾಮ್ ಗೆ ನಮನ ಸಲ್ಲಿಸಿದ ಅರವಿಂದ್ ಬೆಲ್ಲದ್
ಧಾರವಾಡ : ಕೋಡಿಹಳ್ಳಿ ಶ್ರೀ ಆದಿಜಾಂಭವ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ಷಡಕ್ಷರಮುನಿ ದೇಶೀಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದೊಂದಿಗೆ ಆಯೋಜಿಸಿದ ಡಾ.ಬಾಬು ಜಗಜೀವನ ರಾಮ್ ಅವರ 115 ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಅರವಿಂದ್ ಬೆಲ್ಲದ್ ಭಾಗಿಯಾಗಿ ಬಾಬೂಜೀ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು . ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತರಾದ ಶ್ರೀ ಸುಭಾಷ್ ಜಿ . ವಾಲಿ , …
Read More »ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಮಾಜಿ ಸಿಎಂ ಚಾಲನೆ
ಹುಬ್ಬಳ್ಳಿ : ನಗರದ ವಾರ್ಡ್ ನಂ . 46 ಅಶೋಕ ನಗರದ ಒಳರಸ್ತೆಗಳು ಮತ್ತು ಮುಖ್ಯರಸ್ತೆಗಳ ರಸ್ತೆ ಡಾಂಬರೀಕರಣ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಜಗದೀಶ್ ಶೆಟ್ಟರ್ ಭೂಮಿ ಪೂಜೆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು . 42 ಲಕ್ಷ ರೂ ವೆಚ್ಚದಲ್ಲಿ ಮತ್ತು 14 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿದೆ.ಈ ಸಂದರ್ಭದಲ್ಲಿ ಶ್ರೀ ನಾಗೇಶ್ ಕಲಬುರಗಿ , ಶ್ರೀ ಈರಣ್ಣಸವಡಿ , ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು …
Read More »ಬಿಜೆಪಿ ವಿರುದ್ಧ ಆರೋಪ ಮಾಡಿದ ಕುಮಾರಸ್ವಾಮಿ
ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನಿಯಂತ್ರಿಸುವ ವಿಷಯದಲ್ಲಿ ವಿಫಲವಾಗಿದ್ದಾರೆ ಅದನ್ನು ಮುಚ್ಚಿಹಾಕಲು ಧರ್ಮದ ಹೆಸರಿನಲ್ಲಿ ಗಲಾಟೆ ಮಾಡಿಸಲಾಗುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್ ಪಕ್ಷವು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಬೆಲೆ ಏರಿಕೆ ವಿಷಯದಲ್ಲಿ ಜನರ ಆಕ್ರೋಶ ಹೆಚ್ಚುತ್ತಿದೆ. ವಿಷಯಾಂತರ ಮಾಡುವುದಕ್ಕಾಗಿ ಹಿಜಾಬ್, ಹಲಾಲ್ ಕಟ್ …
Read More »ಗೃಹ ಸಚಿವ ಅವರನ್ನು ಭೇಟಿ ಮಾಡಿದ ಮಾಜಿ ಸಿಎಂ
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ಶು್್ಶು ಭೇಟಿ ಮಾಡಿದ್ದು, ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದೆಹಲಿ ಪ್ರವಾಸ ಪೂರ್ಣಗೊಳಿಸಿ ರಾಜ್ಯಕ್ಕೆ ವಾಪಸ್ಸಾಗುತ್ತಿದ್ದಂತೆಯೇ ಜಗದೀಶ್ ಶೆಟ್ಟರ್ ಅವರೂ ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು ಹಲವು ಊಹಾಪೋಹಗಳಿದೆ ದಾರಿ ಮಾಡಿಕೊಟ್ಟಿದೆ.
Read More »ಹಿಂದಿ ಭಾಷೆಯಲ್ಲಿ ನಕಲು : ಸೆರೆಯಾದ ವಿದ್ಯಾರ್ಥಿನಿ
ಚಾಮರಾಜನಗರ: ಯಳಂದೂರು ಪಟ್ಟಣದ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯೊಬ್ಬಳು ಶುಕ್ರವಾರ ನಡೆದ ಎಸ್ಸೆಸ್ಸೆಲ್ಸಿ ಹಿಂದಿ ಭಾಷಾ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾಳೆ. ಮೈಸೂರಿನ ಶಿಕ್ಷಣ ಶಿಕ್ಷಕ ವಿದ್ಯಾಲಯದ (ಸಿಟಿಇ) ಪ್ರಾಂಶುಪಾಲರಾದ ಗೀತಾಂಬ ಅವರು ತಪಾಸಣೆಗಾಗಿ ಕೇಂದ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಾಲ್ಲೂಕಿನ ಪ್ರೌಢಶಾಲೆಯೊಂದರ ವಿದ್ಯಾರ್ಥಿನಿ ಪಠ್ಯಪುಸ್ತಕ ಹಿಡಿದುಕೊಂಡು ಪರೀಕ್ಷೆ ಬರೆಯುತ್ತಿದ್ದನ್ನು ಗಮನಿಸಿದ್ದಾರೆ ಎನ್ನಲಾಗಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





