ಇಲ್ಲಿನ ಲೈನ್‌ಬಜಾರ್‌ನ ಶೀತಲನಾಥ ಮಂದಿರದ ಹುಂಡಿ ಒಡೆದು, ಹಣ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.ಮಂದಿರದ ಸಿಸಿಟಿವಿ ಕ್ಯಾಮೆರಾಗಳನ್ನು ಹಾಳುಗೆಡವಿ ನಂತರ ಕಳವು ಮಾಡಿದ್ದಾರೆ. ಹುಂಡಿಯಿಂದ ನೋಟುಗಳನ್ನು ಕದ್ದೊಯಿದ್ದಾರೆ.ನಾಣ್ಯಗಳು ಹುಂಡಿಯಲ್ಲಿವೆ. ಮಂದಿರದಲ್ಲಿದ್ದ ಬೆಳ್ಳಿ ವಸ್ತುಗಳನ್ನು (ದೀಪ, ತಟ್ಟೆ, ಆರತಿ ಬಟ್ಟಲು…) ತೆಗೆದುಕೊಂಡು ಹೋಗಿಲ್ಲ. ‘ರಾತ್ರಿ ಸುಮಾರು 2 ಗಂಟೆ ಹೊತ್ತಿನಲ್ಲಿ ಮಂದಿರಕ್ಕೆ ನುಗ್ಗಿ ಕೃತ್ಯ ಎಸಗಿದ್ದಾರೆ. ಅಂದಾಜು ₹1.5 ಲಕ್ಷ ಹಣ ಕದ್ದೊಯ್ದಿರಬಹುದು ಎಂದು ಮಂದಿರದವರು ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ್ದೇವೆ’ ಎಂದು ಪೊಲೀಸರು ತಿಳಿಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

