Breaking News

admin

ಭದ್ರಾ ಮೇಲ್ದಂಡೆ ಯೋಜನೆಗೆ ನೆರವು ನೀಡುವಂತೆ ಸಿಎಂ ಮನವಿ ಸಲ್ಲಿಕೆ

ನವದೆಹಲಿ: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ರಾಜ್ಯದ ಕೆಲವು ಮಹತ್ವದ ಯೋಜನೆಗಳ ಸಾಕಾರದ ಕುರಿತು ಮತ್ತುಭದ್ರಾ ಮೇಲ್ದಂಡೆ ಯೋಜನೆಗೆ ಅಗತ್ಯವಿರುವ ಹಣಕಾಸಿನ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು. ರಾಷ್ಟ್ರೀಯ ಯೋಜನೆ ಎಂದು ಘೋಷಿತವಾಗಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಅಂದಾಜು ₹ 23,000 ಕೋಟಿ ವೆಚ್ಚ ತಗುಲಲಿದೆ. ಕೇಂದ್ರದ ಪಾಲನ್ನು ಕೂಡಲೇ ಬಿಡುಗಡೆ ಮಾಡಲು ಕೇಂದ್ರ ಸಚಿವರನ್ನು ಕೋರಲಾಗಿದೆ …

Read More »

ರಾಜ್ಯದ ಅಭಿವೃದ್ಧಿಗೆ ವಿವಿಧ ನಾಯಕರನ್ನು ಭೇಟಿ ಮಾಡಿದ ಸಿಎಂ

ನವದೆಹಲಿ:ರಾಷ್ಟ್ರ ರಾಜಧಾನಿ ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ವಿವಿಧ ಯೋಜನೆ ಮತ್ತು ಸಂಪುಟ ವಿಸ್ತರಣೆಗಳ ಬಗ್ಗೆ ಕೇಂದ್ರ ಸಚಿವರು ಮತ್ತು ಪಕ್ಷದ ಹೈಕಮಾಂಡ್‌ ನಾಯಕರೊಂದಿಗೆ ಮಾತುಕತೆ ನಡೆಸುವ ಸಲುವಾಗಿ ಅವರು ಬುಧವಾರ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ರಾಜನಾಥ್‌ ಸಿಂಗ್‌, ಧರ್ಮೇಂದ್ರ ಪ್ರಧಾನ್‌, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರನ್ನು ಭೇಟಿ ಮಾಡಿದರು. ಮಂಗಳವಾರ ಅವರು ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್‌ …

Read More »

ಪದವಿಯಲ್ಲಿ ಕನ್ನಡ ಭಾಷೆಗೆ ಕಲಿಕೆ ಕಡ್ಡಾಯಗೊಳಿಸುವುದಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ಪದವಿ ಹಂತದ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷಾ ವಿಷಯವಾಗಿ ಕಲಿಯುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸಿ ಸರ್ಕಾರ ಹೊರಡಿಸಿರುವ ಆದೇಶ ರದ್ದು ಕೋರಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ ಹಾಗೂ ಕೆಲ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ …

Read More »

ಹಸೆಮಣೆ ಏರ ಬೇಕಾದ ಪೋಲಿಸ್ ಸ್ಮಶಾನ ಸೇರಿದ : ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಹುಬ್ಬಳ್ಳಿ : ವಿಧಿ ಯಾರ ಜೀವನದಲ್ಲಿ ಹೇಗೆ ಆಟವಾಡುತ್ತದೆ ಎಂಬುವುದು ಆ ಭಗವಂತನಿಗೆ ಮಾತ್ರ ಗೊತ್ತು. ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಪೊಲೀಸ್ ಪೇದೆ ನಿನ್ನೆ ರಾತ್ರಿ ನಡೆದ ಅಪಘಾತದಲ್ಲಿ ಸಾವಿಗೀಡಾಗಿದ್ದು , ಇದೇ ತಿಂಗಳ 24 ರಂದು ಅಕ್ಕನ ಮಗಳ ಜೊತೆ ಮದುವೆ ಫಿಕ್ಸ್ ಆಗಿರುವ ಮಾಹಿತಿ ಲಭ್ಯವಾಗಿದೆ . ಪಂಡಿತ ಕಾಸರ್ ಎಂಬ ಪೇದೆ ಮೂಲತಃ ಕಲಘಟಗಿ ತಾಲೂಕಿನ ಸಂಗಮೇಶ್ವರ ಗ್ರಾಮದವ . ಓರ್ವ ಅಣ್ಣ ಸೇರಿದಂತೆ ಮೂವರು …

Read More »

ಯುವತಿಯನ್ನು ಪೋಲಿಸರಿಗೆ ಒಪ್ಪಿಸುವಂತೆ ಹಿಂದೂ ಸಂಘಟನೆಗಳ ಪಟ್ಟು!

ಯುವತಿಯನ್ನು ಪೋಷಕರಿಗೆ ಒಪ್ಪಿಸುವಂತೆ ಹಿಂದೂ ಸಂಘಟನೆಗಳ ಆಗ್ರಹಹಿಂದೂ ಹುಡುಗಿಯನ್ನು ಅನ್ಯ ಕೋಮಿನ ಹುಡುಗ ಅಪಹರಿಸಿದ್ದು, ದೂರು ನೀಡಿ ಐದು ದಿನಗಳಾದರೂ ಪೊಲೀಸರು ಆರೋಪಿ ವಿರುದ್ಧ ಕ್ರಮ ಜರುಗಿಸಿಲ್ಲವೆಂದು ಹುಬ್ಬಳ್ಳಿಯ ಉಪನಗರ ಪೊಲೀಸ್‌ ಠಾಣೆಯ ಎದುರು ಬಜರಂಗದಳ, ವಿಶ್ವ ಹಿಂದು ಪರಿಷತ್, ಹುಡುಗಿ ಪೋಷಕರು ಧರಣಿ ನಡೆಸಿದರು. ಇದು ಲವ್ ಜಿಹಾದ್ ಕೃತ್ಯ ಹುಡುಗನ ಕಡೆಯವರಿಗೆ ಪೊಲೀಸರು ಸಪೋರ್ಟ್ ಮಾಡುತ್ತಿದ್ದು, ಒಂದು ಗಂಟೆಯೊಳಗೆ ಹುಡುಗಿಯನ್ನು ಪೊಲೀಸರು ಪೋಷಕರಿಗೆ ಒಪ್ಪಿಸದೇ ಇದ್ದರೆ ಚೆನ್ನಮ್ಮ …

Read More »

ಮುಸ್ಲಿಂ ಯುವಕರು ಕೊಲೆ ಮಾಡುವ ಪ್ರವೃತ್ತಿಯನ್ನು ಪೊಲೀಸ್ ಇಲಾಖೆ ಹದ್ದುಬಸ್ತಿನಲ್ಲಿ ಇಡಬೇಕು: ಪ್ರಮೋದ್ ಮುತಾಲಿಕ್.

ಧಾರವಾಡ: ಎರಡು ದಿನದ ಹಿಂದೆ ಜೆಜೆ ನಗರದಲ್ಲಿ ಚಂದ್ರು ಎಂಬ ಯುವಕನ ಕೊಲೆ ಯಾಗಿದ್ದು, ಕೊಲೆಯ ಭೀಕರತೆಯನ್ನು ಸಿಸಿಟಿವಿಯ ದೃಶ್ಯಗಳು ತೆರದಿಟ್ಟಿದ್ದೇವೆ. ಅತ್ಯಂತ ಹೀನಾಯವಾಗಿ ಚಂದ್ರು ಎಂಬ ಯುವಕನನ್ನು, ಮುಸ್ಲಿಂ ಯುವಕರು ಕೊಲೆ ಮಾಡಿರುವುದು ಗೊತ್ತಾಗುತ್ತಿದೆ.‌ ಹಾಗಾಗಿ ಚಿಕ್ಕ ವಿಷಯಕ್ಕೆ ಕೊಲೆ‌ ಮಾಡುವ ಮುಸ್ಲಿಂ ಯುವಕರ ಪ್ರವೃತ್ತಿಯನ್ನು ರಾಜ್ಯ ಪೊಲೀಸ್ ಇಲಾಖೆ ಹದ್ದುಬಸ್ತಿನಲ್ಲಿ ಇಡಬೇಕು ಎಂದು ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅಗ್ರಹಿಸಿದ್ದಾರೆ.‌ ಬೆಂಗಳೂರಿನ ಜೆಜೆ ನಗರದ …

Read More »

ಏ.10 ರಂದು ಶ್ರೀ ರಾಮನವಮಿ, ಛತ್ರಪತಿ ಶಿವಾಜಿ ಮಹಾರಾಜ ಮತ್ತು ಭಗೀರಥ ಜಯಂತಿಯ ಆಚರಣೆ

ಹುಬ್ಬಳ್ಳಿ: ಶ್ರೀರಾಮ ನವಮಿ ಉತ್ಸವ ಸಮಿತಿ ಹಾಗೂ ಎಲ್ಲ ಹಿಂದೂ ಸಂಘಟನೆಗಳ ವತಿಯಿಂದ ಶ್ರೀ ರಾಮನವಮಿ, ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಭಗೀರಥ ಜಯಂತಿಯನ್ನು ಏ.10 ರಂದು ಆಚರಣೆ ಮಾಡಲಾಗುತ್ತಿದೆ ಎಂದು ಶ್ರೀರಾಮನವಮಿ ಉತ್ಸವ ಸಮಿತಿಯ ಮುಖ್ಯಸ್ಥ ಸುಬ್ರಹ್ಮಣ್ಯ ಶಿರಕೋಳ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 3 ಗಂಟೆಗೆ ಭಗವಾನ್ ಶ್ರೀರಾಮನ ಮತ್ತು ಭಗವಾನ್ ಹನುಮನ ದಿವ್ಯ ಮೂರ್ತಿಯ ಬೃಹತ್ ಶೋಭಾಯಾತ್ರೆಯನ್ನು ನಡೆಸಲಾಗುವುದು. …

Read More »

ಬಿಜೆಪಿ ವಿರುದ್ಧ ವಿರೋಧ ಪಕ್ಷದ ನಾಯಕರಿಂದ ಹುಬ್ಬಳ್ಳಿಯಲ್ಲಿ ಪ್ರತಿಭಟನೆ

ಹುಬ್ಬಳ್ಳಿ: ಬಿಜೆಪಿಯವರು ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಜನರ ಮುಂದೆ ಹೋಗೋಕ್ಕೆ ಅವರ ಬಳಿ ಸಾಧನೆ ಇಲ್ಲ. ಹಾಗಾಗಿ ಅದನ್ನು ಮರೆಮಾಚಲು ಧಾರ್ಮಿಕ ವಿಚಾರಕ್ಕೆ ಮುಂದಾಗಿದ್ದಾರೆ. ಧರ್ಮದ ಹೆಸರಿನ ಮೇಲೆ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಹರಿಹಾಯ್ದರು. ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೀದಿಯಲ್ಲಿ ಮೈಕ್ ಬಳಸುವ ವಿಷಯ ಇದೀಗ ಬಂದಿದೆ. ಮಾವಿನ ಹಣ್ಣು ಹಿಂದೂ-ಮುಸ್ಲಿಂ ಬಹಳ ವರ್ಷದಿಂದ ವ್ಯಾಪಾರ ಮಾಡತ್ತಾ ಇದ್ದಾರೆ. …

Read More »

ಅಕ್ರಮವಾಗಿ ಮದ್ಯ ಮಾರಾಟಕ್ಕೆ ಕಡಿವಾಣವಿಲ್ಲ ಎಂದು ಆರೋಪಿಸಿ ಪ್ರತಿಭಟನೆ

ಹುಬ್ಬಳ್ಳಿ: ನಗರದಲ್ಲಿ ಬಹುತೇಕ ಖಾನಾವಳಿ, ಡಾಬಾ ಮತ್ತು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದಾರೆ. ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಅವರು, ಮಹಾತ್ಮಾ ಗಾಂಧೀಜಿಯವರ ಭಾವಚಿತ್ರವನ್ನ ಹಿಡಿದುಕೊಂಡು ಮುಂದೆ ವಿಸ್ಕಿ ಬಾಟಲ್ ಇಟ್ಟುಕೊಂಡು ವ್ಯವಸ್ಥೆಯ ಸರಿಪಡಿಸಿ ಎಂದು ಒತ್ತಾಯಿಸಿದರು. ದಂಧೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ …

Read More »

ಐರಾವತ ಬಸ್ಸ ಕಾರಿಗೆ ಡಿಕ್ಕಿ: ಸ್ಥಳದಲ್ಲಿ ಇಬ್ಬರ ಸಾವು, ಹಲವರಿಗೆ ಗಂಭೀರ ಗಾಯ

ಹುಬ್ಬಳ್ಳಿ: ಐರಾವತ್ ಬಸ್ಸು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಮೂವರಿಗೆ ತೀವ್ರ ಥರದ ಗಾಯಗಳಾದ ಘಟನೆ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಬಳಿ ನಡೆದಿದೆ. ಹೈದರಾಬಾದಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಎಕ್ಸಯೂವಿ ವಾಹನದಲ್ಲಿ ಪ್ರಯಾಣಿಸುತ್ತೀದ್ದರು. ಈಗ ಕೆಲವೇ ನಿಮಿಷಗಳ ಹಿಂದೆ ಐರಾವತ್ ಬಸ್ಸಿನ ಚಾಲಕನ ನಿರ್ಲಕ್ಷ್ಯದಿಂದಲೇ ದುರ್ಘಟನೆ ನಡೆದಿದ್ದು, ಗಾಯಾಳುಗಳನ್ನ ಸ್ಥಳೀಯರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿ, ಜೀವ ಉಳಿಸಿದ್ದಾರೆ. ಶಿರಗುಪ್ಪಿ ಬಳಿಯ …

Read More »