ಕೊಡಗು ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಾಗಿದೆ. ಹಲವು ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದ್ದು , 12 ಜನ ಮೃತಪಟ್ಟಿದ್ದಾರೆ. ಬೆಂಗಳೂರು: ಪ್ರಕೃತಿ ವಿಕೋಪಕ್ಕೆ ಒಳಗಾಗಿ ಪ್ರವಾಹದಿಂದಾಗಿ ತತ್ತರಿಸಿರುವ ಕೊಡಗು ಜಿಲ್ಲೆಯ ಜನರ ಪುನರ್ವಸತಿ ಮತ್ತು ಪರಿಹಾರ ಕಾರ್ಯಕ್ಕೆ 100 ಕೋಟಿ ರೂಪಾಯಿ ನೆರವು ನೀಡುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರಧಾನ ಮಂತ್ರಿಯವರು ಕೇರಳ ರಾಜ್ಯಕ್ಕೆ 500 ಕೋಟಿ …
Read More »ಸಚಿವ ಹೆಚ್.ಡಿ. ರೇವಣ್ಣ ನಡೆಗೆ ಸಿಎಂ ಕುಮಾರಸ್ವಾಮಿ ಸಮಜಾಯಿಷಿ..
ರೇವಣ್ಣ ವಿಚಾರದಲ್ಲಿ ಅನ್ಯಥಾ ಭಾವಿಸಬೇಡಿ. ಬೆಂಗಳೂರು: ಕೊಡಗು ನೆರೆ ಸಂತ್ರಸ್ತರ ಶಿಬಿರಕ್ಕೆ ಭೇಟಿ ಕೊಟ್ಟು ನಿರಾಶ್ರಿತರಿಗೆ ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಜನರನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಅವರು, ಅಲ್ಲಿ ಆಶ್ರಯ ಪಡೆದಿರುವ ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಪ್ಯಾಕೆಟ್ ಗಳನ್ನು ಕೈಗೆ ನೀಡದೆ ಎಸೆದಿರುವುದು ಇದೀಗ ವ್ಯಾಪಕ ಟೀಕೆಗೆ ಕಾರಣವಾಗಿದೆ. ಇದೀಗ ಸಚಿವ ಹೆಚ್.ಡಿ. ರೇವಣ್ಣ ನಡೆಗೆ ಸಿಎಂ ಕುಮಾರಸ್ವಾಮಿ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದ್ದಾರೆ. …
Read More »ಕೊಡಗು ಪ್ರವಾಹ: ನಾನ್ ವೆಜ್ ಊಟ ತ್ಯಜಿಸಿ ಖೈದಿಗಳಿಂದ ಸಂತ್ರಸ್ತರಿಗೆ ನೆರವು..
ಬಳ್ಳಾರಿ: ಭೀಕರ ಪ್ರವಾಹದಿಂದಾಗಿ ಅಕ್ಷರಶಃ ತತ್ತರಿಸಿ ಹೋಗಿರುವ ಕೊಡಗು ಜಿಲ್ಲೆಗೆ ರಾಜ್ಯದ ಹಲವು ಸಂಘಟನೆಗಳು ನೆರವಿನ ಮಹಾಪೂರವನ್ನೇ ಹರಿಸುತ್ತಿವೆ. ಈ ಬೆನ್ನಲ್ಲೇ ಬಳ್ಳಾರಿ ಕಾರಾಗೃಹದ ಖೈದಿಗಳು ವಿಭಿನ್ನ ರೀತಿಯಲ್ಲಿ ದೇಣಿಗೆ ನೀಡಲು ನಿರ್ಧರಿಸಿದ್ದಾರೆ. ಕಾರಾಗೃಹದಲ್ಲಿ ಖೈದಿಗಳಿಗೆ ವಾರಕ್ಕೆ ಎರಡು ದಿನ, ಅಂದರೆ ಶನಿವಾರ ಮತ್ತು ಭಾನುವಾರ ಮಾಂಸಾಹಾರ ಊಟ ನೀಡಲಾಗುತ್ತದೆ. ಆದರೆ ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಜನತೆಗೆ ತಾವೂ ತಮ್ಮ ಕೈಲಾದಷ್ಟು ನೆರವು ನೀಡಬೇಕೆಂದು ನಿರ್ಧರಿಸಿರುವ ಖೈದಿಗಳು, “ನಮಗೆ ಒಂದು …
Read More »ಲಂಡನ್ನಲ್ಲಿ ನೀರವ್ ಮೋದಿ ಇರುವಿಕೆ ಬಹಿರಂಗ ಪಡಿಸಿದ ಬ್ರಿಟಿಷ್ ಏಜೆನ್ಸಿ..
ನೀರವ್ ಮೋದಿ ಅವರನ್ನು ಭಾರತಕ್ಕೆ ಕರೆಸಿಕೊಳ್ಳುವ ಬಗ್ಗೆ ಸಿಬಿಐ ಬ್ರಿಟನ್ ಸರ್ಕಾರವನ್ನು ಕೋರಿದೆ. ನವದೆಹಲಿ: ದೇಶದ ಅತ್ಯಂತ ದೊಡ್ಡ ಬ್ಯಾಂಕಿಂಗ್ ಹಗರಣದ ರೂವಾರಿಯಾಗಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿ ಲಂಡನ್ ನಲ್ಲಿರುವ ಬಗ್ಗೆ ಯುಕೆ ಏಜೆನ್ಸಿ ದೃಢಪಡಿಸಿದೆ. ನೀರಾವ್ ಮೋದಿ ಲಂಡನ್ನಲ್ಲಿದ್ದಾರೆ ಎಂದು ಯುಕೆ ಅಧಿಕಾರಿಗಳು ಭಾರತೀಯ ಸರ್ಕಾರ ಮತ್ತು ಸಂಸ್ಥೆಗಳಿಗೆ ತಿಳಿಸಿದ್ದಾರೆ. ಆರಂಭದಿಂದಲೂ ನೀರವ್ ಲಂಡನ್ ನಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿತ್ತಾದರೂ ಮಾಹಿತಿ ಕೊರತೆಯಿಂದಾಗಿ ದೃಢಪಟ್ಟಿರಲಿಲ್ಲ. ಮತ್ತೊಂದೆಡೆ, ನೀರವ್ …
Read More »ಹರಿಯಿತು ೮೦ ಸಾವಿರ ಕ್ಯೂಸೆಕ್ ನೀರ, ಹೊಲೆ, ಗದ್ದೆಗಳಲ್ಲಿನ ಬೆಳೆ ಕಾಪಾಡೋರು ಯಾರು?
ಅರಕಲಗೂಡು ತಾಲ್ಲೂಕಿನ ಕಟ್ಟೇಪುರದ ಕೃಷ್ಣರಾಜಕಟ್ಟೆ ಅರುವತ್ತು ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿದೆ ಹರಿಯುತ್ತಿರುವ ರಭಸಕ್ಕೆ ಸುತ್ತಮುತ್ತಲಿನ ಹೊಲಗದ್ದೆಗಳು ಜಲಾವೃತವಾಗಿದೆ. ಬನ್ನಿ ಅದನ್ನು ಒಮ್ಮೆ ನೋಡಿ ಬರೋಣ ಕಾವೇರಿಗೆ ಕಟ್ಟಲಾದ ಮೊದಲ ಅಣೆಕಟ್ಟು : ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಮೊದಲ ಅಣೆಕಟ್ಟು ಇದಾಗಿದ್ದು, 1810 ರಲ್ಲಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾಗಿದೆ. ವಿಶೇಷ ಅಂದ್ರೆ ಅಣೆಕಟ್ಟಿನ ಸ್ವಲ್ಪ ದೂರದಲ್ಲಿ ದ್ವೀಪದಂಥ ಪ್ರದೇಶವಿದೆ. ಈ ದ್ವೀಪದಿಂದ ಎಡದಂಡೆ ಮತ್ತು ಬಲದಂಡೆ ನಾಲೆ …
Read More »ಡೈರೆಕ್ಟರ್ ಪವನ್ ಡುಂಡುಂ.. ವಿಷ್ ಮಾಡಿದ ಪವರ್ ಸ್ಟಾರ್ ..
ಆಂಕರ್: ಆತ ಗೂಗ್ಲಿ ಚಿತ್ರ ನಿರ್ದೇಶಕ, ಆಕೆ ಕಾಫಿತೋಟದ ಬೆಡಗಿ, ಇಬ್ಬರದ್ದೂ ಮದುವೆ ಸಂಭ್ರಮ. ಇಬ್ಬರೂ ಮದುವೆ ಮಾಡಿಕೊಳ್ಳುವ ಮೂಲಕ ಈಗ ಮ್ಯಾರೇಜ್ ಲೈಪ್ ಎಂಬ ಗೂಗ್ಲಿ ಹೊಡೆದಿದ್ದಾರೆ. ಸರಳವಾಗಿ ಸುಂದರವಾಗಿ ಇಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಗೆ ಬಂದು ಹರಸಿದ್ರೂ ಪವರ್ ಸ್ಟಾರ್, ಮದುವೆ ಮಂಟಪದಲ್ಲೂ ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಮನಮಿಡಿದ್ರು ವಧುವರರು. ಗ್ರಾಫಿಕ್ಷ್ ೧) ಸರಳ,ಸುಂದರವಾಗಿ ಹೊಸಜೀವನಕ್ಕೆ ಕಾಲಿಟ್ಟ ಗೂಗ್ಲಿ ಡೈರೆಕ್ಟರ್ ೨) ಕಾಫಿತೋಟ ಚಿತ್ರದ ನಟಿ …
Read More »ಕೇರಳ ಪ್ರವಾಹ: 370 ಮಂದಿ ಮರಣ
ಕೇರಳದಲ್ಲಿ ಪ್ರವಾಹ ಸಂತ್ರಸ್ತರಿಗೆ 5,645 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ತಿರುವನಂತಪುರಂ: ಕೇರಳದಲ್ಲಿ ಭಾನುವಾರದಿಂದ ವರುಣನ ಅಬ್ಬರ ಕೊಂಚ ಇಳಿಮುಖವಾದ ಬಳಿಕ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಇದಕ್ಕೂ ಮೊದಲು ಉಂಟಾದ ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಅಲ್ಲದೆ, ಈ ಪ್ರವಾಹವು ನೂರಾರು ಜನರ ಸಾವಿಗೆ ಕಾರಣವಾಗಿದೆ. ರಾಜ್ಯದ ಪ್ರವಾಹದಿಂದ 7,24,649 ಜನರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದುಕೊಳ್ಳಬೇಕಾಗಿದೆ. ಪ್ರವಾಹ ಸಂತ್ರಸ್ತರಿಗಾಗಿ 5,645 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. …
Read More »ನೀವ್ಯಾರು ರಾಜಕಾರಣಕ್ಕೆ ಬರೋದು ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದು ಯಾಕಂತ ಗೊತ್ತಾ!
ರಾಜಕಾರಣದಲ್ಲಿ ಹುಷಾರಾಗಿರಬೇಕು. ಇಲ್ಲಾಂದ್ರೆ ಮುಗಿಸಿ ಬಿಡ್ತಾರೆ- ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಳೂರು: ಕರ್ನಾಟಕ ಪ್ರದೇಶ ಕುರುಬರ ಸಂಘ ಭಾನುವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ತಮ್ಮ ಸಮುದಾಯದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ನೀವ್ಯಾರು ರಾಜಕಾರಣಕ್ಕೆ ಬರೋದು ಬೇಡ ಎಂದು ಹೇಳಿದರು. ನಾನು ಗಣಿತ ವಿಷಯದಲ್ಲಿ ಶೇ. 90 ಅಂಕ ಪಡೆದಿದ್ದೆ ಉಳಿದ ವಿಷಯಗಳಲ್ಲಿ 50, 60 ಅಂಕ ಮಾತ್ರ …
Read More »ಜನಪ್ರಿಯ ನಾಯಕ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜಯಂತಿ
1944 ರ ಆಗಸ್ಟ್ 20 ರಂದು ಜನಿಸಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ 1991 ರಲ್ಲಿ ತಮಿಳುನಾಡಿನಲ್ಲಿ ಹತ್ಯೆಗೀಡಾದರು. ನವದೆಹಲಿ: ಇಂದು ಮಾಜಿ ಪ್ರಧಾನಿ ಹಾಗೂ ಭಾರತ ರತ್ನ ರಾಜೀವ್ ಗಾಂಧಿ ಅವರ ಜನ್ಮ ದಿನಾಚರಣೆ. ಅವರು ದೇಶದ ಆರನೇ ಪ್ರಧಾನಿಯಾಗಿದ್ದರು. ಆಗಸ್ಟ್ 20, 1944 ರಂದು ಜನಿಸಿದರು. ಶ್ರೀಮತಿ ಇಂದಿರಾ ಗಾಂಧಿ ಹಾಗೂ ಫಿರೋಝ್ ಗಾಂಧಿ ದಂಪತಿಗಳ ಮೊದಲ ಮಗ ರಾಜೀವ್ ಗಾಂಧಿ. 1951 ರಲ್ಲಿ, ರಾಜೀವ್ ಮತ್ತು …
Read More »ಸಂತ್ರಸ್ಥರಿಗೆ ತಕ್ಷಣವೇ ವಸತಿ ಕಲ್ಪಿಸಲು ಜಾಗ ಗುರ್ತಿಸಿ: ಮುಖ್ಯಮಂತ್ರಿ ಕುಮಾರಸ್ವಾಮಿ
ಪ್ರತಿಯೊಬ್ಬ ಸಂತ್ರಸ್ಥರಿಗೆ ಸರ್ಕಾರದ ಸೌಲಭ್ಯಗಳು ದೊರೆಯಬೇಕು. ಯಾವುದೇ ಕಾರಣಕ್ಕೂ ಸರ್ಕಾರದಿಂದ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿಬರಬಾರದು, ಆ ನಿಟ್ಟಿನಲ್ಲಿ ಕರ್ತವ್ಯ ಪ್ರಜ್ಞೆ ಅರಿತು ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು- ಸಿಎಂ ಕುಮಾರಸ್ವಾಮಿ ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ಒಳಗಾಗಿರುವ ಸಂತ್ರಸ್ಥರಿಗೆ ತಕ್ಷಣವೇ ವಸತಿ ಕಲ್ಪಿಸಲು ಪ್ರಥಮ ಆದ್ಯತೆಯಲ್ಲಿ ಸರ್ಕಾರಿ ಭೂಮಿ ಗುರ್ತಿಸುವಂತೆ ಜಿಲ್ಲಾಧಿಕಾರಿಯವರಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





