Breaking News

ಭದ್ರಾವತಿ: ಶಂಕಿತ ಉಗ್ರನ ಮೊಬೈಲಿನಲ್ಲಿ “ಸ್ಫೋಟ’ಕ!

ಭದ್ರಾವತಿ: ಐಸಿಸ್‌ ಸಂಘಟನೆಯೊಂದಿಗೆ ಆನ್‌ಲೈನ್‌ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ಮೊಹಮ್ಮದ್‌ ಗೌಸ್‌ನ ಮೊಬೈಲ್‌ನಲ್ಲಿ ಐಇಡಿ ತಯಾರಿಕೆ ವಿಡಿಯೋಗಳು, ಐಸಿಸ್‌ ಪೋಸ್ಟರ್‌ಗಳು ಹಾಗೂ ವಿದೇಶಿ ಹ್ಯಾಂಡ್ಲರ್‌ಗಳ ಧ್ವನಿ ಸಂದೇಶಗಳು ಪತ್ತೆಯಾಗಿವೆ. ಸ್ಫೋಟಕ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಕೂಡ ಸಂಗ್ರಹಿಸಿದ್ದ ಎನ್ನಲಾಗಿದೆ. ಉತ್ತರ ಪ್ರದೇಶದಲ್ಲಿ ಬಂಧಿತನಾಗಿದ್ದ ಹ್ಯಾರೀಸ್‌ ಅಲಿ ಜತೆ ಗೌಸ್‌ ಸಿಗ್ನಲ್‌ ಆ್ಯಪ್‌ ಮೂಲಕ ಸಂಪರ್ಕದಲ್ಲಿದ್ದ. ಆತನ ಸೂಚನೆಯಂತೆ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಸ್ಫೋಟಕ ಸಾಮಗ್ರಿಗಳನ್ನು ಖರೀದಿಸಿ ಸಂಗ್ರಹಿಸಿದ್ದ ಎನ್ನಲಾಗಿದೆ. ಅಂತಾರಾಷ್ಟ್ರೀಯ ಜಾಲದ ಸಂಪರ್ಕ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ವರ್ಗಾಯಿಸಲಾಗಿದೆ. ಹ್ಯಾರೀಸ್‌ ಅಲಿಗೆ ಪಾಕಿಸ್ತಾನದ ಹ್ಯಾಂಡ್ಲರ್‌ಗಳ ಸಂಪರ್ಕವಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ.

Share News

About BigTv News

Check Also

ಕೊಲೆ ಆರೋಪಿಯನ್ನು ಕಾಲಿಗೆ ಗುಂಡಿಕ್ಕಿ ಬಂಧಿಸಿದ ಪೊಲೀಸರು

ವಿಜಯಪುರ: ಮುಂಡೇವಾಡಿ ಆಸ್ಪತ್ರೆ ಬಳಿ ನಡೆದಿದ್ದ ಯಾಸೀನ್ ಝುಬೇರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಮೀರ್ ಮುಲ್ಲಾನನ್ನು ಪೊಲೀಸರು ಕಾಲಿಗೆ …

Leave a Reply

Your email address will not be published. Required fields are marked *