ಬೆಂಗಳೂರು: ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದ ಪ್ರಕರಣದ ಆರೋಪಿ ಇಂದುಶೇಖರ್‌ನ ಕೌಟುಂಬಿಕ ಹಿನ್ನೆಲೆ ಬಯಲಾಗಿದೆ. ಎಂಟು ವರ್ಷಗಳ ಹಿಂದೆ ಬೆಳತೂರು ರಮೇಶ್ ಎಂಬ ಕುಖ್ಯಾತ ರೌಡಿಶೀಟರ್‌ನ ಸ್ವಂತ ಸಹೋದರನೇ ಇಂದುಶೇಖರ್ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಬೆಳತೂರಿನಲ್ಲಿ ₹15 ಕೋಟಿ ಮೌಲ್ಯದ 1.8 ಎಕರೆ ಜಮೀನು ಕಬಳಿಸಲು ರಮೇಶ್ ನಕಲಿ ದಾಖಲೆ ಸೃಷ್ಟಿಸಿ, ಇಬ್ಬರನ್ನು ಕೊಲೆ ಮಾಡಿದ್ದ ಆರೋಪ ಎದುರಿಸಿದ್ದ. ಅಲ್ಲದೆ, ಕೃತ್ಯಕ್ಕೆ ಸಾಕ್ಷಿಯಾಗಿದ್ದ ಸುಧಾರಾಣಿಯನ್ನು ಜೀವಂತವಾಗಿ ಸುಟ್ಟು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ರಮೇಶ್ ಮತ್ತು ಆತನ ಸಹಚರ ವೆಂಕಟಸ್ವಾಮಿ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದರು. ಇದೀಗ ಏಳು ಮಂದಿಯ ಹತ್ಯೆ ಪ್ರಕರಣದ ತನಿಖೆ ವೇಳೆ ಆರೋಪಿ ಇಂದುಶೇಖರ್‌ನ ಕುಟುಂಬದ ಈ ಹಿಂದಿನ ಅಪರಾಧ ಹಿನ್ನೆಲೆ ಬೆಳಕಿಗೆ ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
