ಆಂಕರ್: ಆತ ಗೂಗ್ಲಿ ಚಿತ್ರ ನಿರ್ದೇಶಕ, ಆಕೆ ಕಾಫಿತೋಟದ ಬೆಡಗಿ, ಇಬ್ಬರದ್ದೂ ಮದುವೆ ಸಂಭ್ರಮ. ಇಬ್ಬರೂ ಮದುವೆ ಮಾಡಿಕೊಳ್ಳುವ ಮೂಲಕ ಈಗ ಮ್ಯಾರೇಜ್ ಲೈಪ್ ಎಂಬ ಗೂಗ್ಲಿ ಹೊಡೆದಿದ್ದಾರೆ. ಸರಳವಾಗಿ ಸುಂದರವಾಗಿ ಇಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಗೆ ಬಂದು ಹರಸಿದ್ರೂ ಪವರ್ ಸ್ಟಾರ್, ಮದುವೆ ಮಂಟಪದಲ್ಲೂ ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಮನಮಿಡಿದ್ರು ವಧುವರರು.
ಗ್ರಾಫಿಕ್ಷ್
೧) ಸರಳ,ಸುಂದರವಾಗಿ ಹೊಸಜೀವನಕ್ಕೆ ಕಾಲಿಟ್ಟ ಗೂಗ್ಲಿ ಡೈರೆಕ್ಟರ್
೨) ಕಾಫಿತೋಟ ಚಿತ್ರದ ನಟಿ ಕೈ ಹಿಡಿದ ಗೂಗ್ಲಿ ಒಡೆಯರ್
೩) ಮದುವೆ ಸಮಾರಂಭದಲ್ಲೂ ಕೊಡಗು ಪ್ರವಾಹ ಸಂತ್ರಸ್ತರಿಗೆ ಮಿಡಿಯಿತು ಮನ
೪) ಮದುವೆ ಕುಟುಂಬದಿಂದ ಕೈಲಾದ ಸಹಾಯ ಮಾಡೋದಾಗಿ ಹೇಳಿದ್ರು ವಧುವರರು
ಹೌದು ಗೂಗ್ಲಿ , ಗೋವಿಂದಾಯನಮಃ ಚಿತ್ರದ ಪ್ರಖ್ಯಾತ ನಿದೇಶಕ ಪವನ್ ಒಡೆಯರ್ ಇವತ್ತು ಹೊಸಜೀವನಕ್ಕೆ ಕಾಲಿಟ್ಟಿದ್ದಾರೆ. ಕಾಪಿತೋಟ ಚಿತ್ರನಟಿ ಬಾಗಲಕೋಟೆ ಮೂಲಕ ಅಪೇಕ್ಷಾ ಪುರೋಹಿತ ಅವರ ಕೈ ಹಿಡಿದು ಜೀವನದ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಬಾಗಲಕೋಟೆ ನಗರದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ನಿನ್ನೆ ಅರತಕ್ಷತೆ ಕಾರ್ಯ ನಡೆದಿತ್ತು. ಇಂದು ಮದುವೆ ಸಮಾರಂಭ ಸರಳವಾಗಿ ಸುಂದರವಾಗಿ ನೆರವೇರಿತು. ತಿಳಿ ಬಾದಾಮಿ ಕಲರ್ ಧೋತಿ ಮತ್ತು ಕೆಂಪು ಶಲ್ಲೆಯಲ್ಲಿ ಪವನ್ ಒಡೆಯರ್ ಮಿಂಚಿತ್ತಿದ್ದರೆ. ಅಪೇಕ್ಷಾ ಪುರೋಹಿತ ಕೂಡ ತಿಳಿಬಾದಾಮಿ ಕಲರ್ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಕೇವಲ ಕುಟುಂಬಸ್ಥರು ಮತ್ತು ಕೆಲವೇ ಕೆಲವು ಆಪ್ತರ ಮಧ್ಯೆ ಬ್ರಾಹ್ಮಣ ಸಂಪ್ರದಾಯದಂತೆ ಮದುವೆ ನಡೆಯಿತು. ಎಲ್ಲರ ಮಧ್ಯೆ ಪವನ್ ಒಡೆಯರ್ ಅಪೇಕ್ಷಾ ಪುರೋಹಿತಗೆ ತಾಳಿ ಕಟ್ಟಿದರು. ನಂತರ ಪರಸ್ಪರ ಹಾರ ಬದಲಾಯಿಸಿಕೊಂಡರು. ಮದುವೆಗೆ ಬಂದ ಪುನೀತ್ ರಾಜಕುಮಾರ ಇಬ್ಬರ ಜೀವನ ಸುಖಕರವಾಗಿರಲಿ ಎಂದು ಅಕ್ಷತೆ ಹಾಕಿ ಹರಸಿದರು. ಇದೆ ವೇಳೆ ಕೊಡಗಿನ ಬಗ್ಗೆ ಮಾತನಾಡಿದ ಪುನೀತ ಪರಿಸ್ಥಿತಿ ಹೀಗಾಗಬಾರದಿತ್ತು ನನ್ನ ಕೈಲಾದಷ್ಟು ಸಹಾಯ ನಾನು ಮಾಡಿದ್ದೇನೆ ಎಲ್ಲರೂ ಅವರವರ ಶಕ್ತಾನುಸಾರ ಕೆಲಸ ಮಾಡಿ ಪ್ರವಾಹ ಸಹಾಯ ಮಾಡಿ ಸಂತ್ರಸ್ತರಿಗೆ ಸ್ಪಂದಿಸಬೇಕೆಂದು ಮನವಿ ಮಾಡಿದರು.
ಪುನೀತರಾಜಕುಮಾರ, ಚಿತ್ರನಟ
ಇನ್ನು ಮದುವೆಗೆ ಚಿತ್ರರಂಗದ ವಿವಿಧ ಸೆಲೆಬ್ರಿಟಿಗಳು ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪುನೀತರಾಜಕುಮಾರ ಒಬ್ಬರನ್ನು ಬಿಟ್ಟು ಚಿತ್ರೋದ್ಯಮದ ಯಾವುದೇ ಸೆಲೆಬ್ರಿಟಿಗಳು ಕಂಡು ಬರಲಿಲ್ಲ. ಅಪೇಕ್ಷಾ ಪುರೋಹಿತ ಮತ್ತು ಪವನ್ ಒಡೆಯರ್ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು.ಎಲ್ಲ ಕುಟುಂಬಸ್ಥರ ಮತ್ತು ಆಪ್ತರ ಮಧ್ಯೆ ತೀರಾ ಸರಳ ರೀತಿಯಲ್ಲಿ ನಿರ್ದೇಶಕ ಪವನ್ ಒಡೆಯರ್ ನವಜೀವನಕ್ಕೆ ಕಾಲಿಟ್ಟರು.ಪವನ್ ತಾಳಿ ಕಟ್ಟುವಾಗ ಅಪೇಕ್ಷಾ ಪುರೋಹಿತ ನಾಚಿ ನೀರಾಗುತ್ತಲೇ ನಗುನಗುತ್ತಲೆ ಕೊರಳೊಡ್ಡಿದರು. ಮಾಲೆ ಹಾಕುವಾಗ ನಡೆದ ಚೇಷ್ಟೆ ಎಲ್ಲರಿಗೂ ಖುಷಿ ಕೊಟ್ತು. ಅಗಸ್ಟ್ 26ರಂದು ನವಜೋಡಿಗಳು ಬೆಂಗಳೂರಿನ ಶಾಂಗ್ರಿಲಾ ಹೊಟೆಲ್ ನಲ್ಲಿ ರಿಷೆಪ್ಷನ್ ಇಟ್ಟುಕೊಂಡಿದ್ದು, ಎಲ್ಲ ಚಿತ್ರರಂಗದ ತಂಡಕ್ಕೆ ಆಹ್ವಾನ ನೀಡಿದ್ದಾರಂತೆ. ಇನ್ನು ಮದುವೆ ಸಂಭ್ರಮದಲ್ಲೂ ವಧುವರರು ಕೊಡಗು ಪ್ರವಾಹ ಸಂತ್ರಸ್ತರಿಗೆ ಮನಮಿಡಿದರು. ಕೊಡಗಿನ ಪರಿಸ್ಥಿತಿ ಕಂಡು ನೋವಾಗಿದೆ. ಎಲ್ಲರೂ ಅವರಿಗೆ ಸಹಾಯ ಹಸ್ತಚಾಚಬೇಕು ಎಂದ ಪವನ್ ಒಡೆಯರ್, ಮದುವೆ ಕುಟುಂಬದ ಪರವಾಗಿ ಬಾಗಲಕೋಟೆಯಿಂದ ನಮ್ಮ ಕೈಲಾದಷ್ಟು ನೆರವು ನೀಡೋದಾಗಿ ಪವನ್ ಒಡೆಯರ್ ಭರವಸೆ ನೀಡಿದರು.
ಪವನ್ ಒಡೆಯರ್, ಚಿತ್ರನಿರ್ದೇಶಕರು
ಒಟ್ಟಾರೆ ಸರಳ ಸುಂದರವಾಗಿ ನಿರ್ದೇಶಕ ಮತ್ತು ನಟಿ ಇಂದು ಹೊಸಜೀವನಕ್ಕೆ ಕಾಲಿಟ್ಟಿದ್ದಾರೆ.ಜೊತೆಗೆ ಸಂತ್ರಸ್ತರಿಗೆ ನೆರವು ನೀಡುವ ಭರವಸೆ ಮೂಲಕ ಮದುವೆ ಸಂಭ್ರಮದಲ್ಲೂ ಕೊಡಗು ಸಂತ್ರಸ್ತರ ಬಗ್ಗೆ ಕಾಳಜಿಗೆ ಮುಂದಾಗುವ ಮೂಲಕ ಮಾದರಿಯಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





