Breaking News

Shaikh BIG TV NEWS, Hubballi

11ಭಕ್ತರು ಅಷ್ಟೇ ಅಲ್ಲ, ವಿಷ ಪ್ರಸಾದ ತಿಂದು 60 ಕಾಗೆ ಸಾವು….

ಚಾಮರಾಜನಗರ: ಹನೂರು ತಾಲೂಕಿನ ಸುಲ್ವಾಡಿ ಮಾರ್ಟಳ್ಳಿಯ ಕಿತ್ತಗುಚ್ಚಿ ಮಾರಮ್ಮ ದೇವಾಲಯದ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಟೊಮ್ಯಾಟೋ ಬಾತ್ ಮಾಡಲಾಗಿತ್ತು. ಈ ವೇಳೆ ಆಹಾರ ಸೇವಿಸಿದ 11 ಜನ ಮೃತಪಟ್ಟಿದ್ದಾರೆ. 46ಕ್ಕೂ ಹೆಚ್ಚು ಅಸ್ವಸ್ಥಗೊಂಡಿದ್ದವರನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ದೇವಸ್ಥಾನದ ಬಡಿಸಲಾದ ಆಹಾರದಲ್ಲಿ ಕೀಟನಾಶಕ ಬೆರೆಸಲಾಗಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಮತ್ತೊಂದು ವಿಪರ್ಯಾಸ ಅಂದ್ರೆ ಇದೇ ಆಹಾರ ತಿಂದ 60ಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿವೆ.

Read More »

ಬಿಬಿಎಂಪಿ ಸಭೆಯಲ್ಲಿ ಕಾರ್ಪೋರೇಟರ್ ಬದಲು ‘ಪತಿ ರೌಡಿಶೀಟರ್ ’ ಹಾಜರ್…

ಬೆಂಗಳೂರು: ಬಿಬಿಎಂಪಿ ಸಭೆಯಲ್ಲಿ‌ ಕಾರ್ಪೋರೇಟರ್ ಫರಿದಾ ಬದಲು ಅವರ ಪತಿ ರೌಡಿ‌ ಶೀಟರ್ ಇಷ್ತಿಯಾಕ್ ಭಾಗವಹಿಸಿದ್ದಾರೆ. ಸಭೆಯ ಫೋಟೋ ಈಗ ವೈರಲ್​ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.ಬಿಬಿಎಂಪಿ‌ಯ ನೂತನ ಜಂಟಿ ಆಯುಕ್ತ ರವೀಂದ್ರ ನೇತೃತ್ವದಲ್ಲಿ ಗುರುವಾರ ಮೇಯೋ ಹಾಲ್​ನ ಕೆಂಪೇಗೌಡ ಮ್ಯೂಸಿಯಂ ಸಭಾಂಗಣದಲ್ಲಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಕಾರ್ಪೋರೇಟರ್​ಗಳ ಸಮನ್ವಯ ಸಭೆ ಕರೆಯಲಾಗಿತ್ತು. ಈ ವೇಳೆ ಶಿವಾಜಿನಗರ ವಾರ್ಡ್ ಕಾರ್ಪೋರೇಟರ್ ಫರಿದಾ ಬದಲು ಅವರ ಪತಿ ಇಷ್ತಿಯಾಕ್ ಭಾಗವಹಿಸಿದ್ರು. ಇಷ್ತಿಯಾಕ್ ಹಾಜರಿಯಿಂದ …

Read More »

ಆ್ಯಂಬಿಡೆಂಟ್‌ ವಂಚನೆ ಪ್ರಕರಣ: ಫರೀದ್‌ ಜೊತೆ ಅಲೋಕ್‌ಕುಮಾರ್ ಡೀಲ್ ಆರೋಪ!

ಬೆಂಗಳೂರು: ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ಮತ್ತು ಆ್ಯಂಬಿಡೆಂಟ್ ಮುಖ್ಯಸ್ಥ ಫರೀದ್ ನಡುವೆ ಬಿಗ್ ಡೀಲ್ ನಡೆದಿದೆ ಅಂತಾ ಆ್ಯಂಬಿಡೆಂಟ್​ ಕಂಪನಿ ಗ್ರಾಹಕ ಝೈದ್ ಖಾನ್ ಆರೋಪಿಸಿದ್ದಾರೆ. ಆ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಝೈದ್ ಖಾನ್, ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಆ್ಯಂಬಿಡೆಂಟ್​ ಕಂಪನಿ ಮಾಲೀಕ ಫರೀದ್​ನನ್ನ ಕಲಂದರ್ ಎಂಬಾತ …

Read More »

ಕಾಡುಗೋಡಿಯಲ್ಲಿ ಗೋಡೌನ್​ ರ‍್ಯಾಕ್​ ಕುಸಿತ; ಮೂವರು ಸಾವು

ಬೆಂಗಳೂರು: ನಗರದ ಹೊರವಲಯದಲ್ಲಿರುವ ಲಾಜಿಸ್ಟಿಕ್ ಕಂಪನಿಯ ಗೋದಾಮಿನಲ್ಲಿ ಬಟ್ಟೆ, ಆಹಾರ ವಸ್ತುಗಳನ್ನು ತುಂಬಿಸಿ ಇಟ್ಟಿದ್ದ ಕಬ್ಬಿಣದ ರ‍್ಯಾಕ್​ ಕುಸಿದ ಬಿದ್ದ ಪರಿಣಾಮ ಸಾವನ್ನಪ್ಪಿದ ಅ ಘಟನೆ ಆಡುಗೋಡಿಯ ಶೀಗೆಹಳ್ಳಿ ಗೇಟ್ ಬಳಿ ನಡೆದಿದೆ.ಗೋದಾಮಿನಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಈ ಘಟನೆ ಸಂಭವಿಸಿದ್ದು, ಹಲವರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ಇವರಲ್ಲಿ 6 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದ ಮೂವರು ಕಾರ್ಮಿಕರ ಶವಗಳನ್ನು ಹೊರೆತೆಗೆಯಲಾಗಿದೆ. ಮೃತರನ್ನು ಫಾರೂಕ್, ಸುಭಾಶ್ ಮತ್ತು …

Read More »

ರಫೇಲ್ ಡೀಲ್ ವಿವಾದ: ನಾಳೆ ಸುಪ್ರೀಂ ತೀರ್ಪು ಪ್ರಕಟ..

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಶುಕ್ರವಾರ(ಡಿ.14) ಮಹತ್ವದ ತೀರ್ಪು ಪ್ರಕಟಿಸಲಿದೆ.ನವೆಂಬರ್ 14ರಂದು ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ನೇತೃತ್ವದ ಪೀಠ ಡಿಸೆಂಬರ್ 14ಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು.ವಕೀಲರಾದ ಪ್ರಶಾಂತ್​ ಭೂಷಣ್​, ಎಂಎಲ್ ಶರ್ಮಾ, ಮಾಜಿ ಸಚಿವರಾದ ಯಶವಂತ ಸಿನ್ಹಾ ಮತ್ತು ಅರುಣ್​ ಶೌರಿ ಅವರು ರಫೇಲ್​ ವಿಮಾನ ಖರೀದಿ ಪ್ರಕ್ರಿಯೆ ಕುರಿತು …

Read More »

ಗೌರಿ ಲಂಕೇಶ್, ಕಲಬುರ್ಗಿ ಹತ್ಯೆ ನಡುವೆ ನಂಟಿದೆ- ರಾಜ್ಯ ಪೋಲಿಸರಿಂದ ಸುಪ್ರೀಂಗೆ ಮಾಹಿತಿ

ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿದ್ವಾಂಸ ಎಂ ಎಂ ಕಲ್ಬುರ್ಗಿ ಹತ್ಯೆ ಪ್ರಕರಣಗಳ ನಡುವೆ ನಂಟು ಇದೆ ಎಂದು ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ.ಇದೇ ವೇಳೆ ಕಲಬುರ್ಗಿ ಹತ್ಯೆ ವಿಚಾರವಾಗಿ ಮೂರು ತಿಂಗಳಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ರಾಜ್ಯ ಪೊಲೀಸರು ಸುಪ್ರಿಂಕೋರ್ಟ್ ಗೆ ತಿಳಿಸಿದ್ದಾರೆ.2015 ರಲ್ಲಿ ಧಾರವಾಡದಲ್ಲಿ ಹತ್ಯೆಯಾಗಿದ್ದ ಕಲಬುರ್ಗಿ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ನವೀನ್ ಸಿನ್ಹಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸುತ್ತಿದೆ.ನವೆಂಬರ್ 26 …

Read More »

ಪಂಚ ತೀರ್ಪು: ಸೋನಿಯಾ ಭೇಟಿಗೆ ತೆರಳಿದ ರಾಹುಲ್ ಗಾಂಧಿ!

ನವದೆಹಲಿ: ಮಧ್ಯಪ್ರದೇಶ, ಛತ್ತೀಸ್​ಗಢ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಯ ಈವರೆಗಿನ ಟ್ರೆಂಡಿಂಗ್ ನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಛತ್ತೀಸ್​ಗಢದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತವಾಗಿದೆ. ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲೂ ಕಾಂಗ್ರೆಸ್ ಸರಳ ಬಹುಮತದತ್ತ ಸಾಗುತ್ತಿದೆ. ಏತನ್ಮಧ್ಯೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ನಿವಾಸಕ್ಕೆ ತೆರಳಿದ್ದಾರೆ. ಮಧ್ಯಾಹ್ನ 02:50ಕ್ಕೆ ಇಬ್ಬರೂ ಜಂಟಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈವರೆಗಿನ ಟ್ರೆಂಡಿಂಗ್ ನೋಡುವುದಾದರೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 109, ಬಿಜೆಪಿ 110, ಬಿಎಸ್ಪಿ …

Read More »

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ 2018: ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ, ಹಾವು-ಏಣಿ ಆಟದಲ್ಲಿ ಗೆಲ್ಲೋದ್ಯಾರು?

ನವದೆಹಲಿ​: ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಮತಎಣಿಕೆ ಕ್ಷಣ ಕ್ಷಣಕ್ಕೂ ಭಾರೀ ಕುತೂಹಲ ಮೂಡಿಸಿದ್ದು, ಕಾಂಗ್ರೆಸ್-ಬಿಜೆಪಿ ನಡುವಿನ ಹಾವು ಏಣಿ ಆಟ ಮುಂದುವರೆದಿದೆ. ಒಮ್ಮೆ ಬಿಜೆಪಿ 110 ಸ್ಥಾನಗಳನ್ನು ಪಡೆದು ಮುನ್ನಡೆ ಸಾಧಿಸಿದರೆ ಮತ್ತೊಮ್ಮೆ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ.ಇತರ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ, ಆಡಳಿತಾರೂಢ ಬಿಜೆಪಿ-ಕಾಂಗ್ರೆಸ್ ಮಧ್ಯೆ ಮಧ್ಯಪ್ರದೇಶದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಳೆದ 13 ವರ್ಷಗಳಿಂದ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿರುವ ಶಿವರಾಜ್‌ ಸಿಂಗ್ ಚೌಹಾಣ್‌ ಮತ್ತೆ ಮುಖ್ಯಮಂತ್ರಿ ಆಗುವ ವಿಶ್ವಾಸದಲ್ಲಿದ್ದರೆ, …

Read More »

ಉದ್ಘಾಟನೆಗೊಂಡ ನೂತನ ಕೋರ್ಟ್ ಕಟ್ಟಡ ಹಸ್ತಾಂತರ ಇನ್ನೂ ಆಗಿಲ್ಲ- ವಕೀಲರಿಂದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ

ಹುಬ್ಬಳ್ಳಿ: ಹಳೇ ನ್ಯಾಯಾಲಯವನ್ನು ನೂತನವಾಗಿ ನಿರ್ಮಾಣ ಮಾಡಿದ ನ್ಯಾಯಾಲಯ ಸಂಕೀರ್ಣಕ್ಕೆ ಸ್ಥಳಾಂತರಕ್ಕೆ ಒತ್ತಾಯಿಸಿ ಕೋರ್ಟ್‌ ಕಲಾಪ ಬಹಿಷ್ಕರಿಸಿ ವಕೀಲರು ಹಳೇ ಕೋರ್ಟ್ ಮುಂದೆ ಮಾನವಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.ಹಳೇ ನ್ಯಾಯಾಲಯವನ್ನು ನೂತನವಾಗಿ ನಿರ್ಮಾಣ ಮಾಡಿದ ನ್ಯಾಯಾಲಯ ಸಂಕೀರ್ಣಕ್ಕೆ ಸ್ಥಳಾಂತರಿಸಬೇಕು ಆಗ್ರಹಿಸಿ ಸ್ಥಳೀಯ ತಹಶೀಲ್ದಾರ ಶಶಿಧರ ಮಾಡ್ಯಾಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ನಾಲ್ಕು ತಿಂಗಳ ಹಿಂದೆ ನೂತನ ಕೋರ್ಟ್ ಉದ್ಘಾಟನೆಯಾದ್ರು ಈವರಿಗೆ ಹಸ್ತಾಂತರ ಮಾಡದ ಸರ್ಕಾರ ಎಂದು ರಾಜ್ಯ ಸರ್ಕಾರದ …

Read More »

ಡಿಸೆಂಬರ್ ೧೨ ರಂದು ಕುಂದಾನಗರಿಯಲ್ಲಿ ಅತಿಥಿ ಉಪನ್ಯಾಸಕರಿಂದ ಧರಣಿ- ಆಳುವ ಸರ್ಕಾರಕ್ಕೆ ಎಚ್ವರಿಕೆ

ಹುಬ್ಬಳ್ಳಿ : ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಇದೇ ದಿ.12ರಂದು ಬೆಳಗಾವಿ ಸುವರ್ಣ ಸೌಧದೆದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತಗೌಡ ಕಲ್ಮನಿ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದ ಸುಮಾರು ೪೧೨ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ೧೩ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಕೇವಲ ಗೌರವ ಭತ್ಯೆ …

Read More »