ಹುಬ್ಬಳ್ಳಿ : ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಇದೇ ದಿ.12ರಂದು ಬೆಳಗಾವಿ ಸುವರ್ಣ ಸೌಧದೆದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತಗೌಡ ಕಲ್ಮನಿ ಹೇಳಿದರು.ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯದ ಸುಮಾರು ೪೧೨ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ೧೩ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಕೇವಲ ಗೌರವ ಭತ್ಯೆ ಪಡೆದು ಸೇವೆ ಸಲ್ಲಿಸುತ್ತಾ ಬಂದಿದ್ದು ಇವರಲ್ಲಿ ಸಾವಿರಾರು ಜನ ವಯೋಮಿತಿ ಮೀರಿದ/ಮೀರುತ್ತಿರುವವರಿ ಇದ್ದು ಈಗ ನಮ್ಮೆಲ್ಲರಿಗೂ ಸೇವಾ ಭದ್ರತೆಯಿಲ್ಲದೆ ನಮ್ಮೇಲ್ಲರ ಮೇಲೆ ಅಭದ್ರತೆಯ ತೂಗುಗತ್ತಿ ತುಗಾಡುತ್ತಿದೆ ಎಂದರು.ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ಸಧ್ಯ ಕಾರ್ಯನಿರತ ಹುದ್ದೆಗಳಿಗೆ ವಿರುದ್ದವಾಗಿ ಹೊಸ ಹುದ್ದೆ ಸೃಷ್ಟಿಸಿ, ಸೇರ್ಪಡೆ ಮತ್ತು ಕಾನೂನು ತಿದ್ದುಪಡಿ ಮಾಡಿ ಅನುಮೋದನೆ ನೀಡಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಸೃಷ್ಟಿಸಿದ ಹುದ್ದೆಗಳಲ್ಲಿ ವಿಲೀನಗೊಳಿಸಿ ಸೇವಾ ಭದ್ರತೆ ನೀಡುವಂತೆ ಒತ್ತಾಯಿಸಲಾಗುವುದು ಎಂದರು.೨೦೧೬ರಲ್ಲಿ ೨೧೬೦ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯ ಪರಿಣಾಮದಿಂದಾಗಿ ೨೦೧೬-೧೭ ರ ಶೈಕ್ಷಣಿಕ ವರ್ಷದವರೆಗೆ ಸೇವೆ ಸಲ್ಲಿಸಿ ೨೦೧೭-೧೮ ರಲ್ಲಿ ಹೊರಗಡೆ ಉಳಿದಿರುವ ಅತಿಥಿ ಉಪನ್ಯಾಸಕರನ್ನು ಕೂಡಾ ಪರಿಗಣಿಸಬೇಕು. ಖಾಯಂಯಾತಿ ಮಾಡಿ ಸೇವಾ ವಿಲೀನಗೊಳಿಸುವಾಗ ಜುಲೈ ೨೦೦೯ರ ಒಳಗಡೆ ಮುಗಿಸಿದ ಎಂ.ಪಿಲ್ ಪದವಿಯನ್ನು ಪರಿಗಣಿಸುವುದು ಸೇರಿದಂತೆ ವಿವಿಧ ಸೂಕ್ತ ಬೇಡಿಕೆಗಳನ್ನು ಈಡೇರಿಸಬೇಕೆಂದು ಧರಣಿ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಕಲ್ಮನಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಿ.ಎಸ್.ಪಾಟೀಲ, ಸುನಂದಾ ಜಾಧವ, ಬಿ.ಪಿ.ಸತರಡ್ಡಿ, ಆರ್.ಬಿ.ಚಲವಾದಿ, ಹಳ್ಳಿಕೇರಿ ಮತ್ತಿತರರಿದ್ದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





