ಬೆಂಗಳೂರು: ಮಳೆಗಾಲದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಯಾವುದೇ ರೀತಿಯ ನೀರು ನಿಲ್ಲದಂತೆ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಲು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ವಿಧಾನಸೌಧದ ಕೊಠಡಿ ಸಮಿತಿಯಲ್ಲಿ ಬುಧವಾರ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಜಿ. ಪರಮೇಶ್ವರ, ಪ್ರತಿ ವರ್ಷ ಮಳೆಗಾಲದಲ್ಲಿ ತಗ್ಗು ಪ್ರದೇಶ, ರಾಜಕಾಲುವೆ, ರಸ್ತೆಗಳಲ್ಲಿ ನೀರು ನಿಲ್ಲುವ ಸ್ಥಿತಿ ಇದೆ. ಕಳೆದ ವರ್ಷ ನಿರೀಕ್ಷೆಗೂ ಹೆಚ್ಚು ಮಳೆಯಾದ್ದರಿಂದ ನಗರವಾಸಿಗಳು ತೊಂದರೆ …
Read More »ಸರಣಿ ಸ್ಫೋಟ, ನ್ಯೂಜಿಲ್ಯಾಂಡ್ ಘನೆಯ ಪ್ರತೀಕಾರ: ಐಸಿಸ್
ದೆಹಲಿ: 3 ಚರ್ಚ್, 3 ಹೋಟೆಲ್ ಸೇರಿದಂತೆ ಒಟ್ಟು 8 ಕಡೆಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಕ್ಕೆ ತಾನೇ ಕಾರಣ ಅಂತಾ ಐಸಿಸ್ ಉಗ್ರ ಸಂಘಟನೆ ಅಧಿಕೃತವಾಗಿ ಒಪ್ಪಿಕೊಂಡಿದೆ. ಈ ಸಂಬಂಧ ಉಗ್ರ ಸಂಘಟನೆಯ ನ್ಯೂಸ್ ಏಜೆನ್ಸಿ ಒಮ್ಯಾಕ್ ವಿಡಿಯೊವೊಂದನ್ನು ಕೂಡ ಬಿಡುಗಡೆ ಮಾಡಿದೆ. ಸುಮಾರು ಒಂದು ನಿಮಿಷದ ವಿಡಿಯೋದಲ್ಲಿ 8 ಮಂದಿ ಉಗ್ರರು , ಆತ್ಮಾಹುತಿ ದಾಳಿಗೆ ಕೈಜೋಡಿಸ್ತಿರುವುದ ದೃಶ್ಯ ಸೆರೆಯಾಗಿದೆ. ಇನ್ನೊಂದೆಡೆ ಏಳು ಉಗ್ರರ ಹೆಸರನ್ನು ರಿಲೀಸ್ …
Read More »ನಡೆದ ಆತ್ಮಾಹುತಿ ದಾಳಿಕೋರನ ಬಗ್ಗೆ ಇಂಚಿಂಚೂ ಮಾಹಿತಿ ಕೊಟ್ಟಿತ್ತು ಭಾರತ..!
ದೆಹಲಿ: ಝಹರನ್ ಹಶೀಮ್ ಈತನಿಗೆ ಭಾರತದಲ್ಲಿ ಸೆರೆಸಿಕ್ಕ ಶಂಕಿತ ಐಸಿಸ್ ಉಗ್ರನೊಬ್ಬ ಆತ್ಮಾಹುತಿ ದಾಳಿ ಬಗ್ಗೆ ಶ್ರೀಲಂಕಾದಲ್ಲೇ ತರಬೇತಿ ನೀಡಿದ್ದಾನೆ ಎಚ್ಚರವಿರಲಿ ಅಂತಾ ಅಲ್ಲಿನ ಸರ್ಕಾರದ ಭಾರತದ ಭದ್ರತಾ ಸಂಸ್ಥೆಗಳು ಮೊದಲೇ ಎಚ್ಚರಿಕೆ ನೀಡಿದ್ದವು. ಈ ಬಗ್ಗೆ ಇದೀಗ ಪೂರಕ ಮಾಹಿತಿ ಹೊರಬಿದ್ದಿದ್ದು, ಕೇಂದ್ರದ ಗುಪ್ತಚರ ಸಂಸ್ಥೆ ಹಾಗೂ ಎನ್ಐಎ ಶ್ರೀಲಂಕಾದಲ್ಲಿ ಅತಿದೊಡ್ಡ ದುಷ್ಕೃತ್ಯಗಳು ಸಂಭವಿಸಲಿದೆ, ಉಗ್ರ ಸಂಘಟನೆ ಎನ್ಟಿಜೆ ಐಸಿಸ್ನೊಂದಿಗೆ ಸೇರಿ, ಈ ಕೃತ್ಯವೆಸಗಲಿದೆ ಅದರ ರೂವಾರಿ ಝಹರನ್ …
Read More »ಇನ್ನೂ ನಿಂತಿಲ್ಲ, ಉಗ್ರರ ವಿಸ್ಫೋಟದ ಕೃತ್ಯ..!
ಕೊಲೊಂಬೋ: ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಬಗ್ಗೆ ಮತ್ತಷ್ಟು ಮಾಹಿತಿ ಹೊರಬಿದ್ದಿದೆ. ಈ ಘಟನೆಯ ಹಿಂದೇ ವಿದೇಶಿ ಉಗ್ರ ಸಂಘಟನೆಯ ಕೈವಾಡ ಇದೆ ಅನ್ನೋದು ದೃಢವಾಗಿದೆ. ಇದರ ಬೆನ್ನಲ್ಲೆ ಪ್ರಧಾನಿ ರನೀಲ್ ವಿಕ್ರಮಸಿಂಘೇ ನಮ್ಮ ದೇಶದ ಪ್ರಜೆಗಳು ಬಾಂಬ್ಗಳ ಮಧ್ಯೆ ಓಡಾಡುತ್ತಿದ್ದಾರೆ ಅಂತಾ ಭವಿಷ್ಯದಲ್ಲಿ ಸಂಭವಿಸಬಹುದಾದ ವಿಸ್ಫೋಟಕ ಕೃತ್ಯದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಕ್ರಮಸಿಂಘೇ ಈಗಾಗಲೇ ಪ್ರಕರಣ ಸಂಬಂಧ ಹಲವರನ್ನು ಬಂಧಿಸಲಾಗಿದ್ದು, ಗುಪ್ತಚರ …
Read More »ಬಾಂಬ್ ದಾಳಿಗಳಲ್ಲಿ ಮೃತಪಟ್ಟ 8 ಮಂದಿ ಬೆಂಗಳೂರಿಗರ ವಿವರ ಲಭ್ಯ
ಬೆಂಗಳೂರು: ರಾಜ್ಯದಿಂದ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದವರ ಪೈಕಿ ಕೆಲವರು ಭಾನುವಾರ ಅಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಅಸುನೀಗಿದ್ದರು. ಕೆ. ಹನುಮಂತರಾಯಪ್ಪ, ಕೆ.ಎಂ ಲಕ್ಷ್ಮೀನಾರಾಯಣ, ಎಂ.ರಂಗಪ್ಪ, ಲಕ್ಷ್ಮಣ್ ಗೌಡ ರಮೇಶ್, ನಾಗರಾಜ್ ರೆಡ್ಡಿ, ಎಚ್ ಶಿವಕುಮಾರ್, ಎ.ಮಾರೇಗೌಡ, ಎಚ್.ಪುಟ್ಟರಾಜು ಹಾಗೂನಾರಾಯಣ್ ಚಂದ್ರಶೇಖರ್-ರೆಮುರಾಯ್ ತುಳಸಿರಾಮ್ ಎಂಬಿಬ್ಬರು ಮೃತಪಟ್ಟಿದ್ದರು. ಅವರ ವಿವರ ಇದೀಗ ಲಭ್ಯವಾಗಿದೆ. ಮೃತರ ವಿವರ ಇಲ್ಲಿದೆ:ಕೆ. ಹನುಮಂತರಾಯಪ್ಪ: ಕಾಚನಹಳ್ಳಿ ನಿವಾಸಿಯಾಗಿದ್ದ ಹನುಮಂತರಾಯಪ್ಪ ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಾಧ್ಯಕ್ಷ ಮತ್ತು …
Read More »ಗ್ಯಾಂಗ್ ರೇಪ್ ಸಂತ್ರಸ್ತೆ ಬಿಲ್ಕಿಸ್ ಬನೋಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಆದೇಶ.
ನವದೆಹಲಿ: 2002ರ ಗುಜರಾತ್ ಹಿಂಸಾಚಾರದ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಿಲ್ಕಿಸ್ ಬನೋಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.ಅಷ್ಟೇ ಅಲ್ಲದೆ, 2002ರಿಂದ ಸಂತ್ರಸ್ತ ಮಹಿಳೆ ಅಲೆಮಾರಿ ಜೀವನ ನಡೆಸುತ್ತಿದ್ದಾಳೆ ಎಂಬುದನ್ನು ಮನಗಂಡ ಸುಪ್ರೀಂ ಕೋರ್ಟ್, ಆಕೆಗೆ ಸರ್ಕಾರಿ ಉದ್ಯೋಗ ಹಾಗೂ ವಾಸಿಸಲು ಮನೆಯನ್ನೂ ನೀಡುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ.ಪ್ರಕರಣ ವಿಚಾರಣೆಯ ಸಂದರ್ಭದಲ್ಲಿ, ಮುಖ್ಯ ನ್ಯಾಯಾಧೀಶ ರಾಜನ್ ಗೊಗೊಯ್ ನೇತೃತ್ವದ ಉನ್ನತ ನ್ಯಾಯಾಲಯದ ಪೀಠಕ್ಕೆ …
Read More »ಕಾಲ್ನಡಿಗೆಯಲ್ಲಿ ಕಚೇರಿಗೆ ಬಂದ ಜಿಲ್ಲಾಧಿಕಾರಿ
ಹಾಸನ : ‘ಖಾಸಗಿ ವಾಹನಗಳಿಗೆ ರಜೆ ಕೊಡೋಣ-ಜೀವಪ್ರಭೇದಗಳನ್ನು ಕಾಪಾಡೋಣ’ ಎಂಬ ಘೋಷಣೆಯೊಂದಿಗೆ ವಿಶ್ವ ಭೂ-ದಿನದ ಅಂಗವಾಗಿ ಹಾಸನದಲ್ಲಿ ಸೋಮವಾರ ಕರೆ ನೀಡಿದ್ದ ಸ್ವಂತ ವಾಹನಗಳ ಬಳಕೆ ನಿಷೇಧಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಜಿಲ್ಲಾಡಳಿತ, ಜಿಪಂ, ನ್ಯಾಯಾಂಗ ಇಲಾಖೆ ಸೇರಿದಂತೆ ನಾನಾ ಇಲಾಖೆಗಳು, ಹಸಿರು ಭೂಮಿ ಪ್ರತಿಷ್ಠಾನ, ವ್ಯಾಪಾರಸ್ಥರು, ವೈದ್ಯಕೀಯ ಕ್ಷೇತ್ರದವರು ಸೈಕಲ್, ಕಾಲ್ನಡಿಗೆ ಹಾಗೂ ಕುದುರೆ ಮೂಲಕ ಜಾಥಾದಲ್ಲಿ ಭಾಗವಹಿಸಿ ವಿಶ್ವ ಭೂ- ದಿನಾಚರಣೆಗೆ ಮೆರುಗು ನೀಡಿದರು.ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ …
Read More »ರೈತ ವಿರೋಧಿ ಸಂಸದರನ್ನು ಮನೆಗೆ ಕಳಿಸಲು ಮಹದಾಯಿ ಹೋರಾಟಗಾರರ ನಿರ್ಧಾರ: ಇಜಾರಿ
ಹುಬ್ಬಳ್ಳಿ: ಸುಮಾರು ಮೂರ ದಶಕಗಳಿಂದ ಉತ್ತರ ಕರ್ನಾಟಕದಲ್ಲಿ ಜಾರಿಯಲ್ಲಿರುವ ಮಹದಾಯಿ ಕಳಸಾ ಬಂಡೂರಿಯ ಬಗ್ಗೆ ಮಾತೆತ್ತದ ರೈತ ವಿರೋಧಿ ಸಂಸದರನ್ನು ಸೋಲಿಸುವ ಮೂಲಕ ಮನೆಗೆ ಕಳಿಸಬೇಕು ಎಂದು ಮಹದಾಯಿ ಕಳಸಾ ಬಂಡೂರ ಹೋರಾಟ ಸಮನ್ವಯ ಸಮಿತಿಯ ಮುಖಂಡ ಅಮೃತ ಇಜಾರಿ ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಕುಡಿಯುವ ನೀರು ಮತ್ತು ನೀರಾವರಿಗೆ ಶಾಶ್ವತ ಪರಿಹಾರದ ಮಹದಾಯಿ ಕಳಸಾ ಬಂಡೂರಿ ಯೋಜನೆಯ ಶೀಘ್ರವಾಗಿ ಸ್ಪಂಧಿಸಬೇಕಾಗಿದ್ದ ಸ್ಥಳೀಯ ಸಂಸದರು …
Read More »ಬಿಜೆಪಿಯವರು ವಿನಾಕಾರಣ ಜಾತಿ ರಾಜಕಾರಣ ಮಾಡುತ್ತಿದ್ದಾರೆ: ಹೊರಟ್ಟಿ
ಹುಬ್ಬಳ್ಳಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ವಿನಾಕಾರಣ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಅಲ್ಲದೇ ಬಿಜೆಪಿಯ ಶಾಸಕ ಅರವಿಂದ ಬೆಲ್ಲದ ಅವರು ಜಾತಿಯ ಕುರಿತಾಗಿ ಸಭೆ ನಡೆಸಿ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಬಗ್ಗೆ ಆಪಾಧನೆ ಮಾಡುವುದು ಸರಿಯಲ್ಲ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಧರ್ಮದ ಹೋರಾಟದ ಅಸ್ತ್ರವನ್ನು ಹಿಡಿದು ಬಿಜೆಪಿಯವರು ರಾಜಕಾರಣ ಮಾಡುತ್ತಿರುವುದು ಖಂಡನೀಯವಾಗಿದೆ. ಅಲ್ಲದೇ ಮಠ …
Read More »ರೈತ ಸ್ನೇಹಿ ಪ್ರಲ್ಹಾದ ಜೋಶಿಗೆ ಮತ ನೀಡಿ ಬಿಜೆಪಿ ಗೆಲ್ಲಿಸಿ: ಪಾಟೀಲ
ಹುಬ್ಬಳ್ಳಿ: ಧಾರವಾಡ ಜಿಲ್ಲಾ ಲೋಕಸಭಾ ಕ್ಷೇತ್ರದ ರೈತರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಜನನಾಯಕ ಪ್ರಲ್ಹಾದ ಜೋಶಿಯವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಮತ್ತೊಮ್ಮೆ ನರೇಂದ್ರ ಮೋದಿವರನ್ನು ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಲು ಎಲ್ಲರೂ ಬೆಂಬಲ ನೀಡಬೇಕೆಂದು ಕುಂದಗೋಳ ತಾಲೂಕಿನ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಬಾಬುಗೌಡ ಪಾಟೀಲ ಅವರು ಕರೆ ನೀಡಿದರು.ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ರೈತರ ಸಂಕಷ್ಟಕ್ಕೆ ಸ್ಪಂಧಿಸುವ ಜನನಾಯಕ ಪ್ರಲ್ಹಾದ ಜೋಶಿಯವರು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





