Breaking News

ಆಸ್ಪತ್ರೆ ವ್ಯವಸ್ಥೆ ಪರಿಶೀಲಿಸಿದ ಎಂ.ಆರ್.ಪಾಟೀಲ್

ಕುಂದಗೋಳ: ಮನುಷ್ಯ ನಿತ್ಯದ ಕೆಲಸ, ಒತ್ತಡ, ಕುಟುಂಬ ನಿರ್ವಹಣೆ, ಸವಾಲುಗಳ ಬೆನ್ನುಬಿದ್ದು ತಮ್ಮ ಅಮೂಲ್ಯ ಜೀವನದ ಆರೋಗ್ಯಕರ ಚಟುವಟಿಕೆ ಮರೆತಿದ್ದಾರೆ ಎಂದು ಶಾಸಕ ಎಂ.ಆರ್.ಪಾಟೀಲ್ ಹೇಳಿದರು.

ಅವರು ರೋಟರಿ ಕ್ಲಬ್ ವತಿಯಿಂದ ಕುಂದಗೋಳ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯದ ಮಹತ್ವ ಹಾಗೂ ಕಾಳಜಿ ಕುರಿತು ಮಾತನಾಡಿ, ರೈತಾಪಿ ಜನ ಹಿಂದೆ ಈಗಲೂ ಅತಿ ಅಚ್ಚುಕಟ್ಟಾದ ಜೀವನಕ್ಕೆ ಹೊಂದಿಕೊಂಡು ನಿಶ್ಚಿಂತೆಯಿಂದ ಇದ್ದಾರೆ, ಆದರೆ ಆಧುನಿಕ ಜೀವನ ಶೈಲಿ ರೂಢಿಸಿಕೊಂಡವರಲ್ಲಿ ಮಾತ್ರ ಅನೇಕ ರೋಗ ರುಜಿನ ಕಾಡುತ್ತಿವೆ. ಆರೋಗ್ಯ ಅಭಿಯಾನವನ್ನು ಹಮ್ಮಿಕೊಂಡ ರೋಟರಿ ಕ್ಲಬ್ ಅವರಿಗೆ ಅಭಿನಂದಿಸಿದರು ಎಂದರು.

ಬಳಿಕ ಕುಂದಗೋಳ ತಾಲೂಕು ಆಸ್ಪತ್ರೆ ಆವರಣ ಚಿಕಿತ್ಸಾ ಕೊಠಡಿ, ರೋಗಿಗಳ ವಾಸದ ಕೋಣೆ, ಶೌಚಾಲಯ, ಸೇರಿದಂತೆ ವೈದ್ಯರ ಕೊಠಡಿಗಳನ್ನು ಪರಿಶೀಲಿಸಿ ಹಳ್ಳಿಗಳಿಂದ ಆಗಮಿಸಿದ ರೋಗಿಗಳಿಂದ ಆಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸೆ ಔಷಧೋಪಚಾರ ಕುರಿತು ಮಾಹಿತಿ ಪಡೆದರು.

Share News

About BigTv News

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *