ಕೊಲೊಂಬೋ: ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದ ಬಗ್ಗೆ ಮತ್ತಷ್ಟು ಮಾಹಿತಿ ಹೊರಬಿದ್ದಿದೆ. ಈ ಘಟನೆಯ ಹಿಂದೇ ವಿದೇಶಿ ಉಗ್ರ ಸಂಘಟನೆಯ ಕೈವಾಡ ಇದೆ ಅನ್ನೋದು ದೃಢವಾಗಿದೆ. ಇದರ ಬೆನ್ನಲ್ಲೆ ಪ್ರಧಾನಿ ರನೀಲ್ ವಿಕ್ರಮಸಿಂಘೇ ನಮ್ಮ ದೇಶದ ಪ್ರಜೆಗಳು ಬಾಂಬ್ಗಳ ಮಧ್ಯೆ ಓಡಾಡುತ್ತಿದ್ದಾರೆ ಅಂತಾ ಭವಿಷ್ಯದಲ್ಲಿ ಸಂಭವಿಸಬಹುದಾದ ವಿಸ್ಫೋಟಕ ಕೃತ್ಯದ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಕ್ರಮಸಿಂಘೇ ಈಗಾಗಲೇ ಪ್ರಕರಣ ಸಂಬಂಧ ಹಲವರನ್ನು ಬಂಧಿಸಲಾಗಿದ್ದು, ಗುಪ್ತಚರ ಮಾಹಿತಿ ತಮಗೆ ತಲುಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಈ ಕುರಿತು ಭಾರತವೂ ತಿಳಿಸಿದ ಗುಪ್ತಚರ ಮಾಹಿತಿಯನ್ನು ತಮಗೆ ನೀಡದ ರಕ್ಷಣಾ ಮುಖ್ಯಸ್ಥರ ತಲೆದಂಡ ಪಡೆಯುವ ಸುಳಿವನ್ನು ನೀಡಿದ್ದಾರೆ. ಇನ್ನು ಶ್ರೀಲಂಕಾದ ಕೊಲೊಂಬೋ ಏರ್ಪೋರ್ಟ್ನ ಬಳಿ ಮತ್ತೊಂದು ಪೈಪ್ ಬಾಂಬ್ ಪತ್ತೆಯಾಗಿದೆ. ಅಲ್ಲದೇ ಒಂದು ಲಾರಿ ಹಾಗೂ ನಾಲ್ಕಕ್ಕೂ ಹೆಚ್ಚು ಬೈಕ್ಗಳಲ್ಲಿ ಆತ್ಮಾಹುತಿ ದಾಳಿಗೆ ಬಾಂಬ್ಗಳನ್ನ ಇಡಲಾಗಿದೆ ಎನ್ನುವ ಮಾಹಿತಿ ಶ್ರೀಲಂಕಾದ ಭದ್ರತಾ ಪಡೆಗಳಿಗೆ ಸಿಕ್ಕಿದೆ. ಈ ಸಂಬಂಧ ಒಂದು ಬೈಕ್ನಲ್ಲಿದ್ದ ವಿಸ್ಫೋಟಕವನ್ನು ನಿಷ್ಕ್ರೀಯಗೊಳಿಸಲಾಗಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





