ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿಯವರಿಗೆ ನವಚೇತನ ಆಧ್ಯಾತ್ಮ ಜಾಗೃತದತ್ತ ಸೇವಾ ಟ್ರಸ್ಟ್ ವತಿಯಿಂದ ಸಂಪೂರ್ಣ ಬೆಂಬಲ ನೀಡಲಾಗುತ್ತದೆ ಎಂದು ಸೇವಾ ಟ್ರಸ್ಟ್ ಮುಖ್ಯಸ್ಥರಾದ ಶರೀಪ ಶಿವಯೋಗಿ ಶಾಸ್ತ್ರಿಗಳು ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಜವಾದ ರೈತರಾಗಿರುವ ವಿನಯ ಕುಲಕರ್ಣಿ ಅವರಿಗೆ ರೈತರ ಮತ್ತು ಗ್ರಾಮೀಣ ಭಾಗದ ಜನರ ಕಷ್ಟಗಳಿಗೆ ಸ್ಪಂದಿಸುವ ಜನನಾಯಕರಾಗಿದ್ದಾರೆ ಈ ಹಿನ್ನೆಲೆಯಲ್ಲಿ ಸಮಾಜದ ಶ್ರೆಯೋಭಿವೃದ್ಧಿಗಾಗಿ ವಿನಯ ಕುಲಕರ್ಣಿಯವರಿಗೆ …
Read More »ದೇಶದ ಸಂವಿಧಾನದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಜನಪ್ರತಿನಿಧಿಗಳಿಗೆ ಮತದಾನ ಮಾಡಬೇಡಿ: ಉಳ್ಳಿಕಾಶಿ..
ಹುಬ್ಬಳ್ಳಿ: ಮತದಾರರು ಯಾರು ಕೂಡ ಜಾತಿ ಹಣ-ಹೆಂಡ ಆಮಿಷಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಮತವನ್ನು ಹಾಳು ಮಾಡಿಕೊಳ್ಳಬೇಡಿ. ಸಂವಿಧಾನ ಬದಲಾಯಿಸುವಂತ ಜನಪ್ರತಿನಿಧಿಗಳಿಗೆ ಹಾಗೂ ಸಂವಿಧಾನ ಶಿಲ್ಪಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ವ್ಯಕ್ತಿಗಳಿಗೆ ಮತ ಹಾಕಬೇಡಿ ಎಂದು ಸಮತಾ ಸೇನೆಯ ಮುಖಂಡರಾದ ಗುರುನಾಥ ಉಳ್ಳಿಕಾಶಿ ಕರೆ ನೀಡಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರೂ ಕೂಡ ಮತದಾನ ತಪ್ಪದೇ ಮತದಾನ ಮಾಡಬೇಕು ಮತದಾನ ಪ್ರತಿಯೊಬ್ಬ ವಯಸ್ಕ ಮತದಾರನ ಹಕ್ಕಾಗಿದೆ ಈ ಹಿನ್ನೆಲೆಯಲ್ಲಿ ಮತದಾರರು …
Read More »ಆರ್ ಎಸ್ ಎಸ್ ಬಗ್ಗೆ ಗಂಧಗಾಳಿ ಗೊತ್ತಿರದ ವಿನಯ ಕುಲಕರ್ಣಿ: ಬೆಲ್ಲದ ವಾಗ್ದಾಳಿ
ಹುಬ್ಬಳ್ಳಿ: ಲಿಂಗಾಯತ ಧರ್ಮದ ಮೇಲೆ ದಬ್ಬಾಳಿಕೆ ಮಾಡುವ ಹಾಗೂ ಒಡೆದಾಳುವ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅವಕಾಶ ಕೊಟ್ಟಿರುವುದು ಖಂಡನೀಯವಾಗಿದೆ.ಆರ್.ಎಸ್.ಎಸ್ ಬಗ್ಗೆ ಗಂಧಗಾಳಿ ಗೊತ್ತಿರದ ಕುಲಕರ್ಣಿ ಇಲ್ಲಸಲ್ಲದೇ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಶಾಸಕ ಅರವಿಂದ ಬೆಲ್ಲದ ವಿನಯ ಕುಲಕರ್ಣಿ ವಿರುದ್ಧ ವಾಗ್ದಾಳಿ ನಡೆಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮವನ್ನು ಕಾಂಗ್ರೆಸ್ ಪಕ್ಷ ತುಳಿಯುತ್ತಾ ಬಂದಿರುವುದು ಪ್ರತಿಯೊಬ್ಬ ಲಿಂಗಾಯತ ಧರ್ಮದ …
Read More »ಕೋರ್ಟ್ ತೀರ್ಪಿನ ನಂತರ ಟಿಕ್ ಟಾಕ್ ಆಪ್ ನಿಷೇಧಿಸಿದ ಗೂಗಲ್ ಇಂಡಿಯಾ
ನವದೆಹಲಿ: ಮದ್ರಾಸ್ ಕೋರ್ಟ್ ತೀರ್ಪಿನ ನಂತರ ಈಗ ಗೂಗಲ್ ಇಂಡಿಯಾ ಚೀನಾ ಮೂಲದ ಟಿಕ್ ಟಾಕ್ ಆಪ್ ನ್ನು ಭಾರತದಲ್ಲಿ ನಿಷೇಧಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.ಚೀನಾ ಮೂಲದ ಬೈಟ್ ಡ್ಯಾನ್ಸ್ ಟೆಕ್ನಾಲಜಿ ಟಿಕ್ ಟಾಕ್ ಮೇಲಿನ ನಿಷೇಧವನ್ನು ತೆರವುಗೊಳಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಗೂಗಲ್ ಇಂಡಿಯಾ ಈಗ ಈ ಕ್ರಮವನ್ನು ತೆಗೆದುಕೊಂಡಿದೆ.ಆ ಮೂಲಕ ಈಗ ಟಿಕ್ ಟಾಕ್ ಗೆ ಈಗ ಮಾರುಕಟ್ಟೆಯಲ್ಲಿ ಭಾರಿ ಹಿನ್ನಡೆಯಾಗಲಿದೆ …
Read More »ವಸತಿ ಶಾಲಾ ವಿದ್ಯಾರ್ಥಿನಿಯರಿಗೆ ಡ್ರಗ್ಸ್ ನೀಡಿ ಅಧಿಕಾರಿಗಳಿಂದ ರೇಪ್! ತನಿಖೆಗೆ ಆದೇಶ..
ಮುಂಬೈ: ವಸತಿ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯರಿಗೆ ಶಾಲಾ ಅಧಿಕಾರಿಗಳೇ ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ನಡೆದಿದೆ.ಹಾಸ್ಟೆಲ್ ಸೂಪರಿಂಟೆಂಡೆಂಟ್ ಚಬನ್ ಪಾಚೇರ್ ಮತ್ತು ಡೆಪ್ಯೂಟಿ ಸೂಪರಿಂಟೆಂಡೆಂಟ್ ನರೇಂದ್ರ ವಿರುತ್ಕರ್ ಅವರೇ ವಿದ್ಯಾರ್ಥಿಯರಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ ಆರೋಪಿಗಳಾಗಿದ್ದು, ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಹಾಸ್ಟೆಲ್ ವಾರ್ಡನ್ ಕಲ್ಪನಾ ಠಾಕ್ರೆ ಮತ್ತು ಸಹಾಯಕಿ ಲತಾ ಕನಕೆ ಅವರನ್ನು ಸಹ ಪೊಲೀಸರು …
Read More »ಚೆನ್ನೈ ಸೆಂಟ್ರೆಲ್ ಕ್ಷೇತ್ರದಲ್ಲಿ ಸೂಪರ್ಸ್ಟಾರ್ ರಜನೀಕಾಂತ್ ಮತದಾನ.
ತಮಿಳುನಾಡು: ಲೋಕಸಭೆ ಚುನಾವಣೆಗೆ ದೇಶಾದ್ಯಂತ ಎರಡನೇ ಹಂತದ ಮತದಾನ ಆರಂಭವಾಗಿದೆ. ತಮಿಳುನಾಡಿನಲ್ಲಿ ಚೆನ್ನೈ ಸೆಂಟ್ರೆಲ್ ಲೋಕಸಭಾ ಕ್ಷೇತ್ರದಲ್ಲಿ ನಟ, ರಾಜಕಾರಣಿ ರಜನೀಕಾಂತ್ ಬೆಳಗ್ಗೆಯೇ ಮತಗಟ್ಟೆಗೆ ಬಂದು ವೋಟ್ ಮಾಡಿದ್ರು. ಸ್ಟೆಲ್ಲಾ ಮೇರಿಸ್ ಕಾಲೇಜಿಗೆ ಆಗಮಿಸಿ ನಟ ರಜನಿಕಾಂತ್ ತಮ್ಮ ಹಕ್ಕು ಚಲಾಯಿಸಿದರು.
Read More »ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ಬಣಿವೆಗಳು
ಕುಂದಗೋಳ: ಆಕಸ್ಮಿಕವಾಗಿ ಬೆಂಕಿ ತಗುಲಿರುವ ಹಿನ್ನಲೆಯಲ್ಲಿ ಸುಮಾರು ಮೂರು ಬಣವೆಗಳು ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಚಿಕ್ಕನೇರ್ತಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.ಗ್ರಾಮದ ಮಲ್ಲಿಕಾರ್ಜುನ ಶಾನವಾಡ ಹಾಗೂ ಕಲ್ಮೇಶ ಬೆಳವಟಿಗಿಯವರಿಗೆ ಸೇರಿದ ಬಣಿವೆಗಳಾಗಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಹಾನಿ ಉಂಟಾಗಿದೆ. ಬೆಂಕಿಯನ್ನು ನಂದಿಸಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ.ಅಲ್ಲದೇ ಚಂದ್ರು ಜಾಡರ ಹಾಗೂ ಆದಪ್ಪ ಶಾನವಾಡ ಎಂಬುವವರು ಟ್ಯಾಂಕರನಿಂದ ನೀರು ತುಂಬಿಕೊಂಡು ಬಂದು ಸಮಯ ಪ್ರಜ್ಞೆ ಮೆರೆದಿದ್ದಾರೆ.ಇಡೀ ಚಿಕ್ಕನೇರ್ತಿ ಗ್ರಾಮದ …
Read More »ವೆಲ್ಲೂರು ಕ್ಷೇತ್ರದ ಲೋಕಸಭಾ ಚುನಾವಣೆ ರದ್ದಾಗುವ ಸಾಧ್ಯತೆ!
ನವದೆಹಲಿ: ತಮಿಳುನಾಡಿನ ವೆಲ್ಲೂರು ಕ್ಷೇತ್ರದ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಹಣದ ದುರ್ಬಳಕೆ ಮಾಡಿಕೊಳುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ರದ್ದಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.ಈ ಸಂಬಂಧ ರಾಷ್ಟ್ರಪತಿಗೆ ಶಿಫಾರಸು ಮಾಡಲು ಚುನಾವಣಾ ಆಯೋಗವು ಸಿದ್ಧತೆ ನಡೆಸಿದೆ ಎನ್ನಲಾಗಿದೆ.ಲೋಕಸಭಾ ಚುನಾವಣೆ ಅಧಿಸೂಚನೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದರಿಂದ ಎಲ್ಲಾ ನಿರ್ಧಾರಗಳು ರಾಷ್ಟ್ರಪತಿಗಳ ಮೂಲಕವೇ ನಡೆಯಬೇಕು. ಹಾಗಾಗಿ ರಾಷ್ಟ್ರಪತಿಗಳೇ ರದ್ದುಗೊಳಿಸಬೇಕಿದೆ.ಕೆಲ ದಿನಗಳ ಹಿಂದೆ DMK ಅಭ್ಯರ್ಥಿ ಕಚೇರಿಯಲ್ಲಿ ಹೆಚ್ಚು ಮೊತ್ತದ ಹಣ ವಶಪಡಿಸಿಕೊಂಡ ಬೆನ್ನಲ್ಲೇ …
Read More »2019: ಗಂಗಾವತಿಯಲ್ಲಿಂದು ಪ್ರಧಾನಿ ಮೋದಿ ಮತಬೇಟೆ..
ಕೊಪ್ಪಳ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಕೊಪ್ಪಳದ ಗಂಗಾವತಿಯಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ.ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಭತ್ತದ ನಾಡು ಗಂಗಾವತಿಗೆ ಆಗಮಿಸಲಿರುವ ಪ್ರಧಾನಿ ಮೋದಿ,ಶರಣಬಸವೇಶ್ವರ ಕ್ಯಾಂಪ್ ಬಳಿಯ ಕೃಷಿ ವಿಜ್ಞಾನ ಕೇಂದ್ರ ಎದುರುಗಡೆ ನಡೆಯಲಿರುವ ತ್ರಿವಳಿ (ಕೊಪ್ಪಳ, ರಾಯಚೂರು, ಬಳ್ಳಾರಿ) ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ಬಿಗಿ ಪೋಲಿಸ್ ಭದ್ರತೆ ಏರ್ಪಡಿಸಲಾಗಿದೆ.ಏಪ್ರಿಲ್ 9ರಂದು ಚಿತ್ರದುರ್ಗ, ಮೈಸೂರಿನಲ್ಲಿ ಅಬ್ಬರದ …
Read More »ಅಭ್ಯರ್ಥಿಯ ವಿಚಾರ ಗೆಲ್ಲಬೇಕು: ಉಪೇಂದ್ರ..
ಹುಬ್ಬಳ್ಳಿ: ಜನರ ಆಶೋತ್ತರಗಳಿಗೆ ಹಾಗೂ ಹೇಳಿಕೆಗೆ ಬದ್ಧವಾಗಿದ್ದು ಹೀಗಾಗಿ ಅಭ್ಯರ್ಥಿ ಗೆಲ್ಲುವುದಕ್ಕಿಂತ ಜನರ ಆಶೋತ್ತರಗಳು ಅಂದರೆ ಅಭ್ಯರ್ಥಿಯ ವಿಚಾರ ಗೆಲ್ಲಬೇಕೆಂದು ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ಹೇಳಿದರು.ನಗರದ ಪತ್ರಕರ್ತರಭವನದಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲಸ ಮಾಡಿಸುವುದು, ಕೆಲಸ ಮಾಡದೇ ಇದ್ದವರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದು, ತಿರಸ್ಕರಿಸುವ ವ್ಯವಸ್ಥೆ ಬರಬೇಕು. ಸಂಬಳಕ್ಕೆ ಕೆಲಸ ಮಾಡುವ ಅಭ್ಯರ್ಥಿಗಳನ್ನು ಆರಿಸಿ ತರಬೇಕು, ಜನರ ಹತ್ತಿರ ಹೋಗಿ ಸಮಸ್ಯೆ ಕೇಳುವವರನ್ನು ಗೆಲ್ಲಿಸಿ ಎಂದರು.ಧಾರವಾಡ ಲೋಕಸಭಾ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





