ಹುಬ್ಬಳ್ಳಿ: ಮತದಾರರು ಯಾರು ಕೂಡ ಜಾತಿ ಹಣ-ಹೆಂಡ ಆಮಿಷಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಮತವನ್ನು ಹಾಳು ಮಾಡಿಕೊಳ್ಳಬೇಡಿ. ಸಂವಿಧಾನ ಬದಲಾಯಿಸುವಂತ ಜನಪ್ರತಿನಿಧಿಗಳಿಗೆ ಹಾಗೂ ಸಂವಿಧಾನ ಶಿಲ್ಪಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ವ್ಯಕ್ತಿಗಳಿಗೆ ಮತ ಹಾಕಬೇಡಿ ಎಂದು ಸಮತಾ ಸೇನೆಯ ಮುಖಂಡರಾದ ಗುರುನಾಥ ಉಳ್ಳಿಕಾಶಿ ಕರೆ ನೀಡಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರೂ ಕೂಡ ಮತದಾನ ತಪ್ಪದೇ ಮತದಾನ ಮಾಡಬೇಕು ಮತದಾನ ಪ್ರತಿಯೊಬ್ಬ ವಯಸ್ಕ ಮತದಾರನ ಹಕ್ಕಾಗಿದೆ ಈ ಹಿನ್ನೆಲೆಯಲ್ಲಿ ಮತದಾರರು ತಮ್ಮ ಅಮೂಲ್ಯವಾದ ಮತವನ್ನು ಜಾತ್ಯಾತೀತ ಅಭ್ಯರ್ಥಿಗಳಿಗೆ ಮತ ನೀಡಿ ಎಂದರು. ಡೊಂಗಿ ದೇಶಭಕ್ತ ಪಕ್ಷಗಳಿಗೆ ಹಾಗೂ ಕೋಮುವಾದ ಹುಟ್ಟು ಹಾಕುವ ಜನ ಪ್ರತಿನಿಧಿಗಳಿಗೆ ಮತವನ್ನು ಯಾವುದೇ ಕಾರಣಕ್ಕೆ ಮತ ನೀಡಬೇಡಿ ಎಂದು ಅವರು ಹೇಳಿದರು. ದುಷ್ಟ ಜಾತಿವಾದ ಪಕ್ಷಗಳಿಗೆ ಹಾಗೂ ದಲಿತರ ಮೇಲೆ ದಬ್ಬಾಳಿಕೆ ಮಾಡುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವ ಜನ ಪ್ರತಿನಿಧಿಗಳಿಗೆ ಹಣದ ಆಮಿಷಕ್ಕೆ ಬಲಿಯಾಗಿ ಮತವನ್ನು ಮಾರಿಕೊಳ್ಳಬೇಡಿ ಎಂದು ಅವರು ಆಗ್ರಹಿಸಿದರು. ದೇಶದ ಮಹಾನಗ್ರಂಥವಾಗಿರುವ ಸಂವಿಧಾನದ ಕುರಿತು ಅವಹೇಳನಕಾರಿಯಾಗಿ ಹಾಗೂ ಸಂವಿಧಾನ ಶಿಲ್ಪಿಯನ್ನು ಬದಲು ಮಾಡುತ್ತೇನೆ ಎಂದು ಬೊಬ್ಬೆ ಹೊಡೆಯುವ ಪೊಳ್ಳು ಮಾತಿನ ನಾಯಕರಿಗೆ ದಯಮಾಡಿ ಮತದಾನ ಮಾಡಬೇಡಿ ಎಂದು ಅವರು ಈ ಕುರಿತು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಮಾರುತಿ ದೊಡ್ಡಮನಿ, ಶಂಕರ ಭೋಳಗಾರ, ಗೋವಿಂದ ಬೆಲ್ಚೋಣಿ, ಲೋಹಿತ ಗಾಮನಗಟ್ಟಿ, ಹನುಮಂತ ತಳವಾರ ಸೇರಿದಂತೆ ಇತರರು ಇದ್ದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





