Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ಬಣಿವೆಗಳು

ಕುಂದಗೋಳ: ಆಕಸ್ಮಿಕವಾಗಿ ಬೆಂಕಿ ತಗುಲಿರುವ ಹಿನ್ನಲೆಯಲ್ಲಿ ಸುಮಾರು ಮೂರು ಬಣವೆಗಳು ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಚಿಕ್ಕನೇರ್ತಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.ಗ್ರಾಮದ ಮಲ್ಲಿಕಾರ್ಜುನ ಶಾನವಾಡ ಹಾಗೂ ಕಲ್ಮೇಶ ಬೆಳವಟಿಗಿಯವರಿಗೆ ಸೇರಿದ ಬಣಿವೆಗಳಾಗಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಹಾನಿ ಉಂಟಾಗಿದೆ. ಬೆಂಕಿಯನ್ನು ನಂದಿಸಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ.ಅಲ್ಲದೇ ಚಂದ್ರು ಜಾಡರ ಹಾಗೂ ಆದಪ್ಪ ಶಾನವಾಡ ಎಂಬುವವರು ಟ್ಯಾಂಕರನಿಂದ ನೀರು ತುಂಬಿಕೊಂಡು ಬಂದು ಸಮಯ ಪ್ರಜ್ಞೆ ಮೆರೆದಿದ್ದಾರೆ.ಇಡೀ ಚಿಕ್ಕನೇರ್ತಿ ಗ್ರಾಮದ ಜನರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಸ್ಥಳಕ್ಕೆ ಚಿಕ್ಕನೇರ್ತಿ ಗ್ರಾಮದ ಲೆಕ್ಕಾಧಿಕಾರಿ ಶ್ರಿದೇವಿ ಎಸ್. ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದರು.ಬಾಕ್ಸ್: ಧಗ ಧಗ ಉರಿಯುತ್ತಿರುವ ಬೆಂಕಿಯಲ್ಲಿ ಪ್ರಾಣದ ಹಂಗನ್ನು ತೊರೆದ ಚಿಕ್ಕನೇರ್ತಿ ಗ್ರಾಮದ ನಿವಾಸಿ ಚಂದ್ರು ಜಾಡರ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಚಂದ್ರು ಜಾಡರ ಅವರ ಕಾರ್ಯಕ್ಕೆ ಇಡೀ ಗ್ರಾಮವೇ ಪ್ರಶಂಸೆ ವ್ಯಕ್ತಪಡಿಸಿದೆ.ಕೋಟ್: ರಾತ್ರಿ ವೇಳೆ ಕಾಣಿಸಿಕೊಂಡ ಬೆಂಕಿ ನಮ್ಮ ಬಣಿವೆಯನ್ನು ಸುಟ್ಟಿದೆ. ಹೊಲ ಕೆಲಸ ಇನ್ನೇನು ಪ್ರಾರಂಭವಾಗುತ್ತಿದ್ದು, ದನಗಳ ಮೇವಿನ ಬಣಿವೆಗೆ ಬೆಂಕಿ ಬಿದ್ದಿದೆ. ದನಗಳ ಮೇವಿನ ಗತಿ ಏನು ಎಂಬುದೇ ಒಂದು ಚಿಂತೆಯಾಗಿದೆ‌. ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಮೇವು ಬೆಂಕಿಯಿಂದ ಸುಟ್ಟು ಕರಕಲಾಗಿದೆ.ಕಲ್ಮೇಶ ಬೆಳವಟಿಗಿರೈತ

Share News

About Shaikh BIG TV NEWS, Hubballi

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *