ಬೆಂಗಳೂರು ಚಿಕ್ಕಬಾಣಾವರದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಮನೆಯಲ್ಲಿ ಮಲಗಿದ್ದ 35 ವರ್ಷದ ಅಭಿನಂದನ್ ಹಾಗೂ ಅವರ 5 ವರ್ಷದ ಪುತ್ರ ಯದವೀರ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇಬ್ಬರ ಶವಗಳು ಮಲಗಿದ್ದ ಜಾಗದಲ್ಲೇ ಪತ್ತೆಯಾಗಿದ್ದು, ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಭಿನಂದನ್ ಅವರ ಪತ್ನಿ ಹರಿಣಿ ಮೇಲೆಯೇ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ರಾತ್ರಿ ಕಿವಿಯಲ್ಲಿ ರಕ್ತ ಬಂದಿತ್ತು ಎಂದು ಹರಿಣಿ ಹೇಳಿದ್ದು, ತಾನೇ ಅರಿಶಿಣ ಹಚ್ಚಿದ್ದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ. …
Read More »ದಕ್ಷಿಣ ಕನ್ನಡದಲ್ಲಿ ಮುಂದುವರೆದ ನೈತಿಕ ಪೊಲೀಸ್ ಗಿರಿ: 9 ಜನರ ವಿರುದ್ಧ FIR ದಾಖಲು
ದಕ್ಷಿಣ ಕನ್ನಡ: ಕಡಬ ತಾಲೂಕಿನ ಕೋಲ್ಪೆಯಲ್ಲಿ ಯುವತಿ ಹಾಗೂ ಆಕೆಯ ಕುಟುಂಬದವರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಆಗಸ್ಟ್ 12ರಂದು ರಾತ್ರಿ ಯುವತಿ ತಾಯಿ ಜೊತೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಕೆಲವರು ವಾಹನ ಅಡ್ಡಗಟ್ಟಿ ನೈತಿಕ ಪೊಲೀಸ್ಗಿರಿ ನಡೆಸಿದ್ದಾರೆ ಎನ್ನಲಾಗಿದೆ. ಯುವತಿಗೆ ಕಪಾಳಕ್ಕೆ ಹೊಡೆದು ಬೆದರಿಕೆ ಹಾಕಿದ್ದು, ಜಗಳ ಬಿಡಿಸಲು ಬಂದ ಜಮಾಲ್ ಮೇಲೂ ಹಲ್ಲೆ ನಡೆಸಲಾಗಿದೆ. ಬಳಿಕ ಅಕ್ಕನನ್ನು ಮೇಲೆತ್ತಲು ಬಂದ ಸಹೋದರಿ ಫಾಸಿಲಾಗೂ ಕಪಾಳಕ್ಕೆ …
Read More »ಮಹಿಳೆಯ ಮೈಕೈ ಮುಟ್ಟಿ ಅಸಭ್ಯ ವರ್ತನೆ! ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಬಿತ್ತು ಗೂಸಾ!
ಚಿತ್ರದುರ್ಗ: ಅನಾರೋಗ್ಯ ನಿವಾರಣೆ ಹಾಗೂ ವಾಮಾಚಾರದ ನೆಪದಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತಮ್ಮೇನಹಳ್ಳಿ ಮಠದ ಸ್ವಾಮೀಜಿಗೆ ಸಾರ್ವಜನಿಕರು ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರೋಪಕ್ಕೆ ಗುರಿಯಾಗಿರುವವರು ತಮ್ಮೇನಹಳ್ಳಿ ಮಠದ ಜಮ್ಮಣ್ಣ ಸ್ವಾಮೀಜಿ ಎಂದು ತಿಳಿದುಬಂದಿದೆ. ಮಾಹಿತಿಯ ಪ್ರಕಾರ, ಬಳ್ಳಾರಿ ಮೂಲದ ಮಹಿಳೆಯೊಬ್ಬರಿಗೆ ಅನಾರೋಗ್ಯ ನಿವಾರಣೆ ಮಾಡಿಕೊಡುವ ನೆಪದಲ್ಲಿ ಸ್ವಾಮೀಜಿ ಅಸಭ್ಯವಾಗಿ …
Read More »ಶೀಲ ಶಂಕಿಸಿ ಕೊಡಲಿಯಿಂದ ಕೊಚ್ಚಿ ಪತ್ನಿಯನ್ನು ಕೊಲೆಗೈದ ಪತಿ
ಹೊಸಪೇಟೆ: ತಾಲ್ಲೂಕಿನ ಭುವನಹಳ್ಳಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಶಿಕಲಾ (35) ಕೊಲೆಯಾದ ಮಹಿಳೆ. ಈ ಸಂಬಂಧ ಪತಿ ಬಸವರಾಜ್ (36) ಎಂಬಾತನನ್ನು ಬಂಧಿಸಲಾಗಿದೆ. ಎಸ್ಪಿ ಎಸ್.ಜಾಹ್ನವಿ, ಡಿವೈಎಸ್ಪಿ ಮುರಳೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ರಾತ್ರೋರಾತ್ರಿ ಕೊಟ್ಟಿಗೆಗೆ ನುಗ್ಗಿ ಗೋವುಗಳ ಕಳತನ: ಹಿಡಿಯಲು ಹೋದ ಬಜರಂಗದಳ ಕಾರ್ಯಕರ್ತರ ಹತ್ಯೆಗೆ ಯತ್ನ
ಶಿವಮೊಗ್ಗ: ಹೊಸನಗರ ತಾಲೂಕಿನ ಹರತಾಳು ಗ್ರಾಮದಲ್ಲಿ ಜಾನುವಾರು ಕಳವು ತಡೆಯಲು ಮುಂದಾದ ಗೋ ಸಂರಕ್ಷಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಕೊಟ್ಟಿಗೆಯಿಂದ ಜಾನುವಾರುಗಳನ್ನು ವಾಹನಕ್ಕೆ ತುಂಬಿಕೊಂಡು ಪರಾರಿಯಾಗುತ್ತಿದ್ದವರನ್ನು ಬಜರಂಗದಳ ಕಾರ್ಯಕರ್ತರು ಕಾರಿನಲ್ಲಿ ಹಿಂಬಾಲಿಸಿದ್ದು, ಈ ವೇಳೆ ಆರೋಪಿಗಳು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಕಾರಿನಿಂದ ಇಳಿದ ಕಾರ್ಯಕರ್ತರ ಮೇಲೆ ಮಚ್ಚು, ದೊಣ್ಣೆಗಳಿಂದ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಚಂದ್ರಶೇಖರ್ ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿರಣ್ …
Read More »ಡ್ಯೂಟಿಯಲ್ಲಿದ್ದ ಮಹಿಳಾ PSI ದೇಹದ ಬಗ್ಗೆ ಅಸಭ್ಯ ಮಾತು, ಹಲ್ಲೆ; ನಾಲ್ವರ ವಿರುದ್ಧ FIR ದಾಖಲು
ಬೆಂಗಳೂರು: ಕರ್ತವ್ಯನಿರತ ಮಹಿಳಾ PSI ಮೇಲೆ ಹಲ್ಲೆ ನಡೆಸಿ, ಬಾಡಿಶೇಮಿಂಗ್ ಮಾಡಿದ ಆರೋಪದ ಘಟನೆ ಕೆ.ಆರ್.ಪುರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಟ್ಟರಹಳ್ಳಿ ಜಂಕ್ಷನ್ನಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರೊಂದಿಗೆ ಜಗಳ ಮಾಡುತ್ತಿದ್ದವರನ್ನು ನಿಯಂತ್ರಿಸಲು ತೆರಳಿದ್ದ PSI ನಯನಾ ಅವರ ಮೇಲೆ ಹೇಮಂತ್ ರೆಡ್ಡಿ, ರಾಧಾಕೃಷ್ಣ ರೆಡ್ಡಿ, ಹರ್ಷಿತ್ ರೆಡ್ಡಿ ಹಾಗೂ ರಾಹುಲ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಸಾರ್ವಜನಿಕರ ಎದುರೇ PSI ನಯನಾ ಅವರಿಗೆ ಅವಾಚ್ಯವಾಗಿ ಮಾತನಾಡಿ ಬಾಡಿಶೇಮಿಂಗ್ …
Read More »ಮಾಜಿ ಉದ್ಯೋಗಿಗಳಿಂದಲೇ ಕಾರ್ಖಾನೆಗೆ ಕನ್ನ ಕೇಸ್, ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ದೊಡ್ಡಬಳ್ಳಾಪುರದ ಖಾಸಗಿ ಸಂಸ್ಥೆಯೊಂದರಲ್ಲಿ ಸುಮಾರು ₹2 ಕೋಟಿ ಮೌಲ್ಯದ ಕೈಗಾರಿಕಾ ಕಟಿಂಗ್ ಉಪಕರಣಗಳನ್ನು ಕದ್ದ ಆರೋಪದಡಿ ಐವರು ಮಾಜಿ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸೋಮಶೇಖರ್, ಚಂದ್ರಶೇಖರ್, ಧನುಷ್, ನಾಗಭೂಷಣ್ ಹಾಗೂ ಹರೀಶ್ ಬಂಧಿತರು. ಆರೋಪಿಗಳು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲೇ ಹಂತ ಹಂತವಾಗಿ ಉಪಕರಣಗಳನ್ನು ಕದ್ದಿದ್ದರು ಎನ್ನಲಾಗಿದೆ. 2025ರ ವಾರ್ಷಿಕ ಸ್ಟಾಕ್ ಪರಿಶೀಲನೆ ವೇಳೆ ಭಾರಿ ಪ್ರಮಾಣದ ಸರಕು ವ್ಯತ್ಯಾಸ ಕಂಡುಬಂದ ಬಳಿಕ ಸಂಸ್ಥೆ ಪೊಲೀಸರಿಗೆ ದೂರು ನೀಡಿತ್ತು. ಪ್ರಕರಣ …
Read More »ಅತ್ಯಾಚಾರ, ಗರ್ಭಪಾತ: ವೈದ್ಯ, ಶುಶ್ರೂಷಕಿ ಸೇರಿ ಏಳು ಮಂದಿ ಬಂಧನ
ಗದಗ ನಗರದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಅಕ್ರಮವಾಗಿ ಗರ್ಭಪಾತ ಮಾಡಿಸಿದ ಆರೋಪದಡಿ ವೈದ್ಯ ಹಾಗೂ ಶುಶ್ರೂಷಕಿ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿಕಂದರ್ ಬೇಪಾರಿ ಹಾಗೂ ಭರತ ಕೊರವರ ಮಹಿಳೆ ಮೇಲೆ ಪ್ರತ್ಯೇಕವಾಗಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಮಹಿಳೆ ಗರ್ಭಿಣಿಯಾದ ಬಳಿಕ ಇತರ ಆರೋಪಿಗಳು ಸೇರಿ ಕಾನೂನುಬಾಹಿರವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಏಳು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣಕ್ಕೆ ಸಹಕರಿಸಿದ ಇತರ ಆರೋಪಿಗಳಿಗಾಗಿ …
Read More »ಕೋಪದಲ್ಲಿ ಪತ್ನಿಯ ಹತ್ಯೆ, ತಾಯಿಗೆ ಕರೆ ಮಾಡಿ ಭಯದಲ್ಲಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ
ಬೆಂಗಳೂರು ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಪತಿ-ಪತ್ನಿಯ ನಡುವಿನ ಜಗಳ ದುರಂತಕ್ಕೆ ತಿರುಗಿದೆ. ಸಿವಿಲ್ ಎಂಜಿನಿಯರ್ ಸುಮಂತ್ ಜೈನ್ ಹಾಗೂ ಸಾಫ್ಟ್ವೇರ್ ಎಂಜಿನಿಯರ್ ಪದ್ಮಾವತಿ ನಡುವೆ ಜಗಳ ನಡೆದಿದ್ದು, ಹಿಂಸಾತ್ಮಕ ಸ್ವರೂಪ ಪಡೆದಿದೆ ಎನ್ನಲಾಗಿದೆ. ಜಗಳದ ವೇಳೆ ಸುಮಂತ್ ಪತ್ನಿಯ ಮುಖಕ್ಕೆ ಹೊಡೆದು, ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿರುವ ಆರೋಪ ಕೇಳಿಬಂದಿದೆ. ಘಟನೆ ಬಳಿಕ ಆತಂಕಗೊಂಡ ಸುಮಂತ್ ತಾಯಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಾಯಿ ಮನೆಯ …
Read More »‘ವಂದೇ ಮಾತರಂ’ ಗೆ ಅವಮಾನ ಆರೋಪ : ಸೋನಿಯಾಗಾಂಧಿ ವಿರುದ್ಧ ದೂರು ದಾಖಲು!
ಮಂಗಳೂರು : ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಇದೀಗ ದೂರು ದಾಖಲಾಗಿದೆ. ವಂದೇ ಮಾತರಂ ಗೀತೆಗೆ ಅವಮಾನಿಸಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಇದೀಗ ದೂರು ನೀಡಲಾಗಿದೆ. ಮಂಗಳೂರಿನ ಉರ್ವ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಬಿಜೆಪಿ ಮುಖಂಡ ವಿಕಾಸ್ ಪುತ್ತೂರು ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ್ದಾರೆ. ಸೋನಿಯಾ ಗಾಂಧಿ ವಿರುದ್ಧ FIR ದಾಖಲಿಸುವಂತೆ ಆಗ್ರಹಿಸಿದ್ದಾರೆ. ಸೋನಿಯಾ ಗಾಂಧಿ ರಾಷ್ಟ್ರಗಾನಕ್ಕೆ ಅಪಮಾನ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





