ಬೆಂಗಳೂರು ಚಿಕ್ಕಬಾಣಾವರದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಮನೆಯಲ್ಲಿ ಮಲಗಿದ್ದ 35 ವರ್ಷದ ಅಭಿನಂದನ್ ಹಾಗೂ ಅವರ 5 ವರ್ಷದ ಪುತ್ರ ಯದವೀರ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇಬ್ಬರ ಶವಗಳು ಮಲಗಿದ್ದ ಜಾಗದಲ್ಲೇ ಪತ್ತೆಯಾಗಿದ್ದು, ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಭಿನಂದನ್ ಅವರ ಪತ್ನಿ ಹರಿಣಿ ಮೇಲೆಯೇ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ರಾತ್ರಿ ಕಿವಿಯಲ್ಲಿ ರಕ್ತ ಬಂದಿತ್ತು ಎಂದು ಹರಿಣಿ ಹೇಳಿದ್ದು, ತಾನೇ ಅರಿಶಿಣ ಹಚ್ಚಿದ್ದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ. ಈ ಹಿಂದೆ ಕೂಡ ಹರಿಣಿ ಮನೆ ತೊರೆದು ಮೂರು ತಿಂಗಳ ಕಾಲ ಬೇರೆಡೆ ವಾಸವಿದ್ದಳು ಎಂಬ ಮಾಹಿತಿ ಹೊರಬಿದ್ದಿದೆ. ಆರು ವರ್ಷಗಳ ಹಿಂದೆ ಅಭಿನಂದನ್ ಮತ್ತು ಹರಿಣಿ ವಿವಾಹವಾಗಿದ್ದರು. ಇದೀಗ ಪತಿ ಹಾಗೂ ಮಗನ ಸಾವಿನ ಹಿಂದೆ ಹರಿಣಿಯ ಕೈವಾಡವಿದೆಯೇ ಎಂಬ ಆರೋಪ ಕೇಳಿಬಂದಿದ್ದು, ಚಿಕ್ಕಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

