Breaking News

BigTv News

ಕತ್ತು ಹಿಸುಕಿ ಪತ್ನಿಯ ಕೊಂದು ಎಂಜಿನಿಯರ್‌ ನೇಣಿಗೆ ಶರಣು

ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಎಂಜಿನಿಯರ್‌ ದಂಪತಿ ನಡುವೆ ಜಗಳ ತಾರಕಕ್ಕೇರಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪತಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪದ್ಮಾವತಿ (29) ಕೊಲೆಯಾದವರು, ಸುಮಂತ್‌ ಜೈನ್‌ (32) ಆತ್ಮಹತ್ಯೆ ಮಾಡಿಕೊಂಡವರು. ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ದಂಪತಿ, ಲಗ್ಗೆರೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಕೌಟುಂಬಿಕ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಶುಕ್ರವಾರ ಜಗಳ …

Read More »

ರಾಜ್ಯದಲ್ಲಿ ಮತ್ತೊಂದು ಹಗರಣ ಬಹಿರಂಗ: ಬೆಳೆ ವಿಮೆ 9.39 ಕೋಟಿ ವಂಚನೆ, 10 ಮಂದಿ ವಿರುದ್ಧ FIR ದಾಖಲು

ಕಲಘಟಗಿ: ಬೆಳೆ ವಿಮೆ ಯೋಜನೆಯನ್ನೇ ದುರ್ಬಳಕೆ ಮಾಡಿಕೊಂಡು ₹9.39 ಕೋಟಿ ವಂಚಿಸಿರುವ ಬೃಹತ್ ಹಗರಣ ತಬಕದಹೊನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಬೆಳೆಯೇ ಇಲ್ಲದ ಜಮೀನುಗಳಲ್ಲಿ ಬೆಳೆ ನಷ್ಟವಾಗಿದೆ ಎಂದು ಸುಳ್ಳು ಮಾಹಿತಿ ನೀಡಿ ಪರಿಹಾರ ಪಡೆಯಲಾಗಿದೆ ಎನ್ನಲಾಗಿದೆ. ಅಕ್ರಮಕ್ಕೆ ಸಂಬಂಧಿಸಿ ವಿಮಾ ಕಂಪನಿ ಹಾಗೂ ಸ್ಥಳೀಯರಾದ ಬಸಪ್ಪ ಕುರಟ್ಟಿ, ಪ್ರಕಾಶ ತಿಪ್ಪಣ್ಣವರ ಸೇರಿದಂತೆ 10 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೃಷಿ ಇಲಾಖೆ ನೀಡಿದ ದೂರಿನ ಆಧಾರದ …

Read More »

ಸ್ವಾತಂತ್ರ ದಿನಾಚರಣೆಯ ದಿನವೇ ಸ್ಫೋಟಕ್ಕೆ ಸಂಚು : ಬೆಂಗಳೂರಲ್ಲಿ ಶಂಕಿತ ಉಗ್ರ ಅರೆಸ್ಟ್!

ಬೆಂಗಳೂರಲ್ಲಿ ಶಂಕಿತ ಉಗ್ರನನ್ನು ಅರೆಸ್ಟ್ ಮಾಡಲಾಗಿದೆ ಪಶ್ಚಿಮ ಬಂಗಾಳ ಮೂಲದ ಆಸ್ಫುಲ್ಲ ಮಲ್ಲಿಕ್ ಬಂದಿತ ಆರೋಪಿಯಾಗಿದ್ದು, ಬೆಂಗಳೂರಲ್ಲಿ ಈತ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಉಗ್ರ ಸಂಘಟನೆಯ ಜೊತೆಗೆ ದಾಳಿಗೆ ಸಂಚು ರೂಪಿಸಿದ್ದ ಮಲ್ಲಿಕ್ ತೆಹ್ರಿಕ್ ಎ ತಾಲಿಬಾನ್ ಪಾಕಿಸ್ತಾನ (TTE) ಸಂಘಟನೆ ಜೊತೆಗೆ ಈತ ನಂಟು ಹೊಂದಿದ್ದ ಎನ್ನಲಾಗಿದೆ. ಜಿಗಣಿಯಲ್ಲಿ ವಾಸವಿದ್ದ ಶಂಕಿತ ಉಗ್ರ ಆಸ್ಫುಲ್ಲ ಮಲ್ಲಿಕ್, ಡಿಸಿಪಿ ನಾರಾಯಣ ನೇತೃತ್ವದಲ್ಲಿ ಈ ಒಂದು ಕಾರ್ಯಾಚರಣೆ ನಡೆಸಿ …

Read More »

ಪ್ರಾಣಿ ಬೇಟೆಗಾರರು – ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿನ ಚಕಮಕಿ; ಮೂವರು ಸಾವು

ಚಾಮರಾಜನಗರ (ಹನೂರು): ಕಾವೇರಿ ವನ್ಯಧಾಮದಲ್ಲಿ ಜಿಂಕೆ ಬೇಟೆಯಾಡಲು ಬಂದಿದ್ದ ಬೇಟೆಗಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಬೇಟೆಗಾರರು ಮೃತಪಟ್ಟಿದ್ದಾರೆ. ಮೃತರನ್ನು ಅಂಥೋಣಿ ಸ್ವಾಮಿ, ಪೀಟರ್ ಹಾಗೂ ಕುಮಾರ್ ಎಂದು ಗುರುತಿಸಲಾಗಿದೆ. ಓರ್ವ ಅರಣ್ಯ ಸಿಬ್ಬಂದಿ ಗಾಯಗೊಂಡಿದ್ದಾರೆ. ಹನೂರು ವನ್ಯಜೀವಿ ವಲಯದ ಶಾಗ್ಯ ವ್ಯಾಪ್ತಿಯ ಹೊಳೆಮುರದಟ್ಟಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಆರು ಮಂದಿ ಬೇಟೆಗಾರರ ತಂಡ ಜಿಂಕೆ ಬೇಟೆಯಾಡಿತ್ತು. ವಿಷಯ ತಿಳಿದು ಸ್ಥಳಕ್ಕೆ …

Read More »

ಅನೈತಿಕ ಸಂಬಂಧ ಶಂಕೆ: ಗಂಡನಿಂದಲೇ ಹೆಂಡತಿಯ ಮೇಲೆ ಹಲ್ಲೆ

ಹೊಸದುರ್ಗ: ಅನೈತಿಕ ಸಂಬಂಧದ ಶಂಕೆಯಲ್ಲಿ ಪತಿಯೊಬ್ಬ ತನ್ನ ಪತ್ನಿಗೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಶ್ರೀರಾಂಪುರದಲ್ಲಿ ಗುರುವಾರ ರಾತ್ರಿ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಹಿರಿಯೂರು ತಾಲೂಕಿನ ಕುಂಟಪ್ಪನಹಳ್ಳಿಯ ನೇತ್ರಾವತಿ (30) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ತಿಪ್ಪೇಸ್ವಾಮಿ ಆರೋಪಿಯಾಗಿದ್ದಾನೆ. ನೇತ್ರಾವತಿ, ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕೂಲಿ ಕೆಲಸಕ್ಕಾಗಿ ಶ್ರೀರಾಂಪುರಕ್ಕೆ ಬಂದು ಕಳೆದ 20 ದಿನಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಗುರುವಾರ ರಾತ್ರಿ ಮನೆಗೆ ಬಂದ ತಿಪ್ಪೇಸ್ವಾಮಿ, …

Read More »

ಆಷಾಢ ಮುಗಿದ್ರೂ ತವರಿನಿಂದ ಬರಲಿಲ್ಲ ಪತ್ನಿ; ಪ್ರಾಣ ಕಳೆದುಕೊಂಡ ನವವಿವಾಹಿತ ಅವಿನಾಶ್

ತುಮಕೂರು: ತವರಿಗೆ ಹೋದ ಪತ್ನಿ ಮರಳಿ ಬಾರದ ಹಿನ್ನೆಲೆಯಲ್ಲಿ ಮನನೊಂದ ನವವಿವಾಹಿತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಮೃತನನ್ನು ಮಹಾವೀರ ನಗರದ ಅವಿನಾಶ್ (26) ಎಂದು ಗುರುತಿಸಲಾಗಿದೆ. ಕೆಲ ತಿಂಗಳ ಹಿಂದೆ ತಾನು ಪ್ರೀತಿಸಿದ್ದ ಧಾಮಿನಿ (22) ಅವರನ್ನು ಅವಿನಾಶ್ ವಿವಾಹವಾಗಿದ್ದರು. ಆಷಾಢ ಮಾಸದ ಹಿನ್ನೆಲೆಯಲ್ಲಿ ತವರಿಗೆ ತೆರಳಿದ್ದ ಪತ್ನಿಗೆ ಗುರುವಾರ ರಾತ್ರಿ ಕರೆ ಮಾಡಿದ್ದ ಅವಿನಾಶ್, ಮನೆಗೆ ಮರಳುವಂತೆ ತಿಳಿಸಿದ್ದ ಎನ್ನಲಾಗಿದೆ. ಆದರೆ ನಾಗರ …

Read More »

ಕಾರು ಸ್ಪೋಟದ ಹಿಂದಿನ ಹತ್ಯೆಯ ಸಂಚು ಬಯಲು

ಬಾಗಲಕೋಟೆ: ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜುಲೈ 25ರಂದು ಬಾರ್ ಮುಂದೆ ಕಾರು ಸ್ಫೋಟಗೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕಾರು ಸ್ಫೋಟದ ಹಿಂದೆ ಹನಮಂತ ಅಥಣಿ ಎಂಬುವವರ ಹತ್ಯೆಯ ಸಂಚು ಇರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಭೂಮಿ ಹಾಗೂ ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಹನಮಂತನನ್ನು ಕೊಲೆ ಮಾಡಲು ಆರೋಪಿಗಳು ಕಾರಿನ ಬಳಿ 30 ಜಿಲೆಟಿನ್ ಕಡ್ಡಿಗಳನ್ನು ಇಟ್ಟು ಸ್ಫೋಟಿಸಿದ್ದರು ಎನ್ನಲಾಗಿದೆ. ಆದರೆ ಹನಮಂತ ಕಾರು ಹತ್ತುವ ಮುನ್ನವೇ ಸ್ಫೋಟ …

Read More »

ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ ; ಪತ್ನಿಯನ್ನು ಹತ್ಯೆಗೈದು ಪತಿಯೂ ಆತ್ಮಹತ್ಯೆಗೆ ಶರಣು

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಹತ್ಯೆಗೈದ ಬಳಿಕ ಪತಿಯೂ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಲಗ್ಗೆರೆ ರಾಜೇಶ್ವರಿ ನಗರದಲ್ಲಿ ನಡೆದಿದೆ. ಪದ್ಮಾವತಿ (29) ಹಾಗೂ ಆಕೆಯ ಪತಿ ಸುಮಂತ್ (22) ಮೃತರು. ಮನೆ ಹಾಗೂ ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕಳೆದ ಮಧ್ಯರಾತ್ರಿ ಪತ್ನಿಯನ್ನು ಹತ್ಯೆಗೈದ ಬಳಿಕ ಸುಮಂತ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮುನ್ನ ತಾಯಿಗೆ ‘ನಾನು ಸಾಯುತ್ತಿದ್ದೇನೆ’ ಎಂದು ವಾಯ್ಸ್ ಮೆಸೇಜ್ ಕಳುಹಿಸಿದ್ದ …

Read More »

ಬಹುಕೋಟಿ ಪೋನ್ಜಿ ಹಗರಣ: ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಮುಖ್ಯಸ್ಥ ಶಿವಾನಂದ ಸಿದ್ದಪ್ಪನೀಲಣ್ಣವರ್‌ ಸೆರೆ

ಬೆಂಗಳೂರು, ಆ.14: ಸುಮಾರು ₹2,110 ಕೋಟಿ ಪೋನ್ಜಿ ಹಗರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮುಖ್ಯಸ್ಥ ಶಿವಾನಂದ ಸಿದ್ದಪ್ಪನೀಲಣ್ಣವರ್‌ನನ್ನು ಈಡಿ ಅಧಿಕಾರಿಗಳು ಬಂಧಿಸಿದ್ದಾರೆ. ಆ.13ರಂದು ಬೆಳಗಾವಿಯಲ್ಲಿ ಬಂಧಿಸಿ, ಮಂಗಳೂರಿನ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆ.24ರವರೆಗೆ ಈಡಿ ವಶಕ್ಕೆ ಒಪ್ಪಿಸಲಾಗಿದೆ. ಶಿವಂ ಅಸೋಸಿಯೇಟ್ಸ್ ಹಲವು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಏಜೆಂಟರ ಮೂಲಕ ಸಾರ್ವಜನಿಕರಿಂದ ₹2,110.97 ಕೋಟಿ ಸಂಗ್ರಹಿಸಿತ್ತು ಎನ್ನಲಾಗಿದೆ. ಹೂಡಿಕೆಗೆ ಪ್ರತಿ ತಿಂಗಳು ಶೇ.3ರಷ್ಟು ಲಾಭ ನೀಡುವುದಾಗಿ ಭರವಸೆ ನೀಡಿ, …

Read More »

ಸ್ವಾತಂತ್ರ್ಯ ದಿನದ ಆಫರ್, ಫ್ರೀ ಗಿಫ್ಟ್, ಹೆಸರಲ್ಲಿ ಬರುತ್ತೆ ಮೆಸೇಜ್ – ಒಂದೇ ಒಂದು ಕ್ಲಿಕ್‌ಗೆ ನಿಮ್ಮ ಖಾತೆ ಖಾಲಿ!

ಬೆಂಗಳೂರು: ಸ್ವಾತಂತ್ರ್ಯ ದಿನದ ಉಡುಗೊರೆ, ಉಚಿತ ರೀಚಾರ್ಜ್ ಅಥವಾ ಡೇಟಾ ಸಿಗಲಿದೆ ಎಂಬ ಸಂದೇಶಗಳು ವಾಟ್ಸ್‌ಆಪ್, ಎಸ್‌ಎಂಎಸ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇವು ಸೈಬರ್ ವಂಚಕರ ಬಲೆಯಾಗಿರಬಹುದು ಎಂದು ಎಚ್ಚರಿಸಲಾಗಿದೆ. ಇಂತಹ ಸಂದೇಶಗಳಲ್ಲಿರುವ ಲಿಂಕ್‌ ತೆರೆದರೆ ನಕಲಿ ವೆಬ್‌ಸೈಟ್‌ಗೆ ಕರೆದೊಯ್ದು ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಅಥವಾ ಯುಪಿಐ ವಿವರಗಳನ್ನು ಕೇಳಬಹುದು. ಕೆಲವೊಮ್ಮೆ ಶುಲ್ಕ ಪಾವತಿಸುವಂತೆ ಅಥವಾ .apk ಫೈಲ್ ಡೌನ್‌ಲೋಡ್ ಮಾಡುವಂತೆ ಸೂಚಿಸಿ, ಬ್ಯಾಂಕ್ ಮಾಹಿತಿ ಕದಿಯುವ …

Read More »