Breaking News

ಆಷಾಢ ಮುಗಿದ್ರೂ ತವರಿನಿಂದ ಬರಲಿಲ್ಲ ಪತ್ನಿ; ಪ್ರಾಣ ಕಳೆದುಕೊಂಡ ನವವಿವಾಹಿತ ಅವಿನಾಶ್

ತುಮಕೂರು: ತವರಿಗೆ ಹೋದ ಪತ್ನಿ ಮರಳಿ ಬಾರದ ಹಿನ್ನೆಲೆಯಲ್ಲಿ ಮನನೊಂದ ನವವಿವಾಹಿತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಮೃತನನ್ನು ಮಹಾವೀರ ನಗರದ ಅವಿನಾಶ್ (26) ಎಂದು ಗುರುತಿಸಲಾಗಿದೆ. ಕೆಲ ತಿಂಗಳ ಹಿಂದೆ ತಾನು ಪ್ರೀತಿಸಿದ್ದ ಧಾಮಿನಿ (22) ಅವರನ್ನು ಅವಿನಾಶ್ ವಿವಾಹವಾಗಿದ್ದರು. ಆಷಾಢ ಮಾಸದ ಹಿನ್ನೆಲೆಯಲ್ಲಿ ತವರಿಗೆ ತೆರಳಿದ್ದ ಪತ್ನಿಗೆ ಗುರುವಾರ ರಾತ್ರಿ ಕರೆ ಮಾಡಿದ್ದ ಅವಿನಾಶ್, ಮನೆಗೆ ಮರಳುವಂತೆ ತಿಳಿಸಿದ್ದ ಎನ್ನಲಾಗಿದೆ. ಆದರೆ ನಾಗರ ಪಂಚಮಿ ಹಬ್ಬ ಮುಗಿದ ಬಳಿಕ ಬರುವುದಾಗಿ ಧಾಮಿನಿ ತಿಳಿಸಿದ್ದು, ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ತಡರಾತ್ರಿ ಅವಿನಾಶ್ ತಮ್ಮನಿಗೆ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ, “ನನ್ನ ಸಾವಿಗೆ ಹೆಂಡತಿಯೇ ಕಾರಣ, ಆಕೆಗೆ ಶಿಕ್ಷೆಯಾಗಬೇಕು” ಎಂದು ತಿಳಿಸಿದ್ದ ಎನ್ನಲಾಗಿದೆ. ಬೆಳಿಗ್ಗೆ ಸಂದೇಶ ಗಮನಿಸಿದ ಸಹೋದರ ರೂಮ್‌ಗೆ ತೆರಳಿ ನೋಡಿದಾಗ ಅವಿನಾಶ್ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *