Breaking News

BigTv News

ಮೀಸಲಾತಿ ಪ್ರಮಾಣವನ್ನು ಶೇ.75 ಕ್ಕೆ ಏರಿಸುವ ಚರ್ಚೆ ಇದೆ: ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ನೀಡಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯ ಅನುಸಾರ ಮೀಸಲಾತಿ ಪ್ರಮಾಣವನ್ನು ಶೇ. 75ಕ್ಕೆ ಏರಿಸುವ ಚರ್ಚೆ ಇದೆ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದರು. ಮುಂದಿನ ಸಂಪುಟ ಸಭೆಯಲ್ಲಿ ವರದಿ ಮಂಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು ಈ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಿದ್ದೆ ವರದಿಯನ್ನು ಸಂಪುಟದಲ್ಲಿ ಇಡಲು ನಾನು ತಯಾರಿದ್ದೇನೆ. ಆದರೆ, ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಮೊದಲು ಎಲ್ಲರನ್ನೂ …

Read More »

ರಾಜ್ಯ ಸರ್ಕಾರದಿಂದ ಪಶುಪಾಲನಾ ಇಲಾಖೆಯಲ್ಲಿ 700 ಡಿ ಗ್ರೂಪ್, 400 ಪಶು ವೈದ್ಯರ ನೇಮಕಕ್ಕೆ ಗ್ರೀನ್ ಸಿಗ್ನಲ್

ಮೈಸೂರು : ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಪಶುಪಾಲನಾ ಇಲಾಖೆಯಲ್ಲಿ 700 ಮಂದಿ ಡಿ ಗ್ರೂಪ್ ಹಾಗೂ 400 ಪಶು ವೈದ್ಯರ ನೇಮಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ್ದು, ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ತಿಳಿಸಿದ್ದಾರೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘದ ಸಹಯೋಗದಲ್ಲಿ ಇಲ್ಲಿನ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪಶುವೈದ್ಯರ ರಾಜ್ಯಮಟ್ಟದ ತಾಂತ್ರಿಕ …

Read More »

ಜಾರ್ಖಂಡ್‌ ವಿಧಾನಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್

ರಾಂಚಿ: ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 66 ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಮಾಡಿದ್ದು, ಜಾರ್ಖಂಡ್‌ನ ಮಾಜಿ ಸಿಎಂಗಳಾದ ಬಾಬುಲಾಲ್ ಮರಾಂಡಿ ಮತ್ತು ಚಂಪೈ ಸೊರೆನ್ ಹೆಸರು ಪಟ್ಟಿಯಲ್ಲಿದೆ. ಧನ್ವಾರ್ ಕ್ಷೇತ್ರದಿಂದ ಬಾಬುಲಾಲ್ ಮರಾಂಡಿ ಸ್ಪರ್ಧಿಸಲಿದ್ದು, ಸಾರೈಕೆಲಾ ಕ್ಷೇತ್ರದಿಂದ ಚಂಪೈ ಸೊರೆನ್ ಕಣಕ್ಕಿಳಿಯುತ್ತಿದ್ದಾರೆ. ಪಕ್ಷದ ಪ್ರಮುಖರಾದ ಸೀತಾ ಸೊರೆನ್ ಜಮ್ತಾರಾದಿಂದ ಕಣಕ್ಕಿಳಿದಿದ್ದು, ನೀರಾ ಯಾದವ್ ಕೊಡರ್ಮಾದಿಂದ ಸ್ಪರ್ಧಿಸಲಿದ್ದಾರೆ. ಗಂಡೆಯಲ್ಲಿ …

Read More »

ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕೀಳಿದ ಭರತ್ ಬೊಮ್ಮಾಯಿ

ಬೆಂಗಳೂರು: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿ ಹೈಕಮಾಂಡ್ ಶಿಗ್ಗಾವಿ ಕ್ಷೇತ್ರದ ಅಧಿಕೃತ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ ಅವರನ್ನು ಕಣಕ್ಕೆ ಇಳಿಸಿದೆ. ಸುಮಾರು 60 ಆಕಾಂಕ್ಷಿಗಳು ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನ ಆಕಾಂಕ್ಷಿಯಾಗಿದ್ದರು, ಆದರೆ ರಾಜಕೀಯ ಲೆಕ್ಕಾಚಾರದ ಆಧಾರದ ಮೇಲೆ ಅಂತಿಮವಾಗಿ ಈಗ ಭರತ್ ಬೊಮ್ಮಾಯಿ ಅವರಿಗೆ ಬಿಜೆಪಿ ಮಣೆ ಹಾಕಿದೆ.

Read More »

ಸಂಡೂರು ಬಿಜೆಪಿ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಆಯ್ಕೆ

ಬಳ್ಳಾರಿ: ಸಂಡೂರು ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಬಂಗಾರು ಹನುಮಂತು ಮೂಲತಃ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಯವರು. ಬಿಎ,ಬಿಇಡ್​ ಪದವೀಧರ. ಇವರ ತಂದೆ ಸೋಮಣ್ಣ ಅವರು ಕೆಎಸ್‌ಆರ್‌ಟಿಸಿ ಚಾಲಕರಾಗಿದ್ದರು. ಕೂಡ್ಲಿಗಿಯಲ್ಲಿ ನಿವೃತ್ತಿಯಾದರು. ಹೀಗಾಗಿ ಬಂಗಾರು ಹನುಮಂತು ಕುಟುಂಬ ಕೂಡ್ಲಿಗಿಯಲ್ಲಿ ನೆಲೆಸಿದೆ. ಹನುಮಂತು ಅವರ ತಾಯಿ ಹುಲಿಗೆಮ್ಮ ಕೂಡ್ಲಿಗಿ ಪಟ್ಟಣ ಪಂಚಾಯಿತಿ ಬಿಜೆಪಿಯ ಹಾಲಿ ಸದಸ್ಯರಾಗಿದ್ದಾರೆ. ಬಂಗಾರು ಹನುಮಂತು ರಿಯಲ್ ಎಸ್ಟೇಟ್, ಟ್ರಾನ್ಸ್‌ಪೋರ್ಟ್, ಕ್ರಷರ್, ಸಿವಿಲ್ ವರ್ಕ್ಸ್, ಉದ್ಯಮ ನಡೆಸುತ್ತಿದ್ದಾರೆ. ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಸದ್ಯ …

Read More »

ರಾಜ್ಯದಲ್ಲಿ ಅಟಲ್ ಭೂ ಜಲ್ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲು ಸಚಿವ ಬೋಸರಾಜು ಸೂಚನೆ

ಬೆಂಗಳೂರು: ರಾಜ್ಯದ 41 ತಾಲ್ಲೂಕುಗಳಲ್ಲಿ ಜಾರಿಯಲ್ಲಿರುವ ಅಟಲ್‌ ಭೂ ಜಲ್‌ ಯೋಜನೆಯ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಕಾಸಸೌಧದಲ್ಲಿ ತಮ್ಮ ಕಚೇರಿಯಲ್ಲಿ ಅಟಲ್‌ ಭೂ ಜಲ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ದೇಶದ 7 ರಾಜ್ಯಗಳಲ್ಲಿ ಅಟಲ್‌ ಭೂ ಜಲ ಯೋಜನೆ ಜಾರಿಯಲ್ಲಿದೆ. ಸಮುದಾಯದ ಸಹಯೋಗದಲ್ಲಿ ಅಂತರ್ಜಲ ವೃದ್ದಿ ಹಾಗೂ ಅಂತರ್ಜಲ ಸಮರ್ಪಕ …

Read More »

ಸಂಚಾರಿ ಕುರಿಗಾಹಿಗಳಿಗೆ ರಾಜ್ಯಾದ್ಯಂತ ಶಸ್ತ್ರಾಸ್ತ್ರ ಲೈಸೆನ್ಸ್ ನೀಡಲು ಅಗತ್ಯ ಕ್ರಮಕ್ಕೆ ಸರ್ಕಾರ ಆದೇಶ

ಬೆಂಗಳೂರು: ಸಂಚಾರಿ ಕುರಿಗಾಹಿಗಳಿಗೆ ರಾಜ್ಯಾದ್ಯಂತ ಶಸ್ತ್ರಾಸ್ತ್ರ ಪರವಾನಿಗೆ ನೀಡಲು ಅಗತ್ಯ ಕ್ರಮ ವಹಿಸುವಂತೆ ಸರ್ಕಾರ ಆದೇಶಿಸಿದೆ. ಸಂಚಾರಿ ಕುರಿಗಾರರು ತಮ್ಮನ್ನು, ಕುರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಹಾಗೂ ರಾಜ್ಯಾದ್ಯಂತ ತಮ್ಮೊಂದಿಗೆ ಬಂದೂಕು ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ ಲೈಸೆನ್ಸ್ ನೀಡುವ ಸಂಬಂಧ ಅಗತ್ಯ ಕ್ರಮ ವಹಿಸಲು ಒಳಾಡಳಿತ ಇಲಾಖೆ ಡಿಜಿ- ಐಜಿಪಿ ಮತ್ತು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸಂಚಾರ ಕುರಿಗಾರರಿಗೆ ಅನುಕೂಲವಾಗುವಂತೆ ಅನೇಕ ಸೌಲಭ್ಯ ಕಲ್ಪಿಸಿರುವ ಸರ್ಕಾರ ಇದೀಗ ಶಸ್ತ್ರಾಸ್ತ್ರ …

Read More »

ಕೇಂದ್ರ ಸಚಿವಾಲಯಗಳಿಗೆ ಹೊಸ ಕಾರ್ಯದರ್ಶಿಗಳ ನೇಮಕ: ಸಂಪುಟದ ನೇಮಕಾತಿ ಸಮಿತಿ ಅನುಮೋದನೆ

ನವದೆಹಲಿ: ನಾಲ್ಕು ಕೇಂದ್ರ ಸಚಿವಾಲಯಗಳಿಗೆ ಹೊಸ ಕಾರ್ಯದರ್ಶಿಗಳು ಸೇರಿದಂತೆ ಏಳು ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿ (ಎಸಿಸಿ) ಅನುಮೋದನೆ ನೀಡಿದೆ. ಪಶ್ಚಿಮ ಬಂಗಾಳ ಕೇಡರ್ನ (1990 ರ ಬ್ಯಾಚ್) ಐಎಎಸ್ ಅಧಿಕಾರಿ ಸುಬ್ರತಾ ಗುಪ್ತಾ ಅವರನ್ನು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ಪ್ರಸ್ತುತ ಕಾರ್ಯದರ್ಶಿ ಅನಿತಾ ಪ್ರವೀಣ್ ಅವರು ನವೆಂಬರ್ 30 ರಂದು ನಿವೃತ್ತರಾಗಲಿದ್ದಾರೆ. ರಾಜಸ್ಥಾನ ಕೇಡರ್ನ 1993ರ ಬ್ಯಾಚ್ನ ಐಎಎಸ್ …

Read More »

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆ: ದತ್ತಪೀಠದಲ್ಲಿ 2 ಅಡಿ ನಿಂತ ನೀರು

ಚಿಕ್ಕಮಗಳೂರು: ರಾಜ್ಯದೆಲ್ಲೆಡೆ ಅಕ್ಟೋಬರ್‌ ತಿಂಗಳಿನಲ್ಲಿ ಹಿಂಗಾರು ಮಳೆ ಹೆಚ್ಚಾಗಿದೆ ವಿಶೇಷವಾಗಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆ ದಾಖಲಾಗಿದೆ. ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಮುಳ್ಳಯ್ಯನಗಿರಿಯ ದತ್ತಪೀಠದಲ್ಲಿ 2 ಅಡಿ ಮಳೆ ನೀರು ನಿಂತುಕೊಂಡಿದೆ. ಹಿಂಗಾರು ಮಳೆಗೆ ಪಶ್ಚಿಮಘಟ್ಟಗಳ ತಪ್ಪಲು ಅಲ್ಲೋಲ-ಕಲ್ಲೋಲವಾಗಿದೆ. ಕಳೆದ ದಿನ ಸುರಿದ ಭಾರೀ ಮಳೆಗೆ ದತ್ತಪೀಠದ ರಸ್ತೆಯಲ್ಲಿ 2 ಅಡಿ ಎತ್ತರದಲ್ಲಿ ಮಳೆ ನೀರು ಹರಿದಿದೆ. ಮಳೆರಾಯನ ಅಬ್ಬರಕ್ಕೆ ಪ್ರವಾಸಿಗರು ತೊಯ್ದು ತೊಪ್ಪೆಯಾಗಿದ್ದಾರೆ ಮಳೆ …

Read More »

ಒಳ ಮೀಸಲಾತಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದ 3 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಸಂದರ್ಭದಲ್ಲೇ ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ವಿಚಾರ ಸರ್ಕಾರಕ್ಕೆ ತಲೆಬೇನೆ ತರಿಸಿದೆ, ಎಡ ಸಮುದಾಯದ ವಿಶ್ವಾಸ ಗಳಿಸಲು ಸರ್ಕಸ್ ಆರಂಭಿಸಿರುವ ಸಿಎಂ ಸಿದ್ದರಾಮಯ್ಯ ಅ.24ರ ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದ್ದಾರೆ. ಒಳಮೀಸಲಾತಿ ವಿಚಾರವಾಗಿ ನಡೆದ ಸಚಿವರು, ಮಾಜಿ ಸಚಿವರು, ಶಾಸಕರು, ಅಧಿಕಾರಿಗಳ ಸಭೆ ಯಲ್ಲಿ ಈ ತೀರ್ಮಾನ ಹೊರಬಿದ್ದಿದೆ. ಸಚಿವ ಮುನಿಯಪ್ಪ ಸಭೆಯ ನಿರ್ಧಾರಗಳ ಮಾಹಿತಿ …

Read More »